Advertisement

ಕೋವಿಡ್ 19 : ಧಾರ್ಮಿಕ ಸ್ಥಳಗಳಲ್ಲಿ ಗುಂಪುಗೂಡುವಿಕೆಗೆ ಅವಕಾಶವಿಲ್ಲ: ಉ. ಪ್ರ ಸರ್ಕಾರ   

11:47 AM Apr 11, 2021 | Team Udayavani |

ಲಕ್ನೋ : ಕೋವಿಡ್ ಸೋಂಕಿನ ಎರಡನೇ ಅಲೆಯ ಹಠಾತ್ ಏರಿಕೆಯ ಕಾರಣದಿಂದ ಉತ್ತರ ಪ್ರದೇಶ ಸರ್ಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

Advertisement

ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಆಚರಣೆಯಲ್ಲಿರುವ ಚೈತ್ರ ನವರಾತ್ರಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರ ಧಾರ್ಮಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡುವಂತಿಲ್ಲ ಎಂದು ನಿರ್ಬಂಧಗಳನ್ನು ಹೇರಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕಿನ ಏರಿಕೆಯ ಕಾರಣದಿಂದಾಗಿ ನಿನ್ನೆ(ಶನಿವಾರ) ರಾತ್ರಿ ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

 ಓದಿ : ದೇಶದಲ್ಲಿ ಒಂದೂವರೆ ತಿಂಗಳಿಗಾಗುವಷ್ಟು ಗೊಬ್ಬರ ಲಭ್ಯ, ಹಳೆ ದರದಲ್ಲೇ ವಿತರಣೆ: ಸಚಿವ ಡಿವಿಎಸ್

ಇನ್ನು, ರಾಜ್ಯ ರಾಜಧಾನಿ ಲಕ್ನೋದ ಲೋಕ ಭವನದಲ್ಲಿ ನಡೆದ ಕೋವಿಡ್ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಮುಂದಿನ 24 ಗಂಟೆಗಳಲ್ಲಿ ಲಕ್ನೋದಲ್ಲಿ 2,000 ಐಸಿಯು ಹಾಸಿಗೆಗಳು ಮತ್ತು ಒಂದು ವಾರದ ಅವಧಿಯಲ್ಲಿ ಮತ್ತೆ ಹೆಚ್ಚುವರಿ 2,000 ಹಾಸಿಗೆಗಳನ್ನು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ಸಾಂಕ್ರಾಮಿಕ ಸೋಂಕು ಕೋವಿಡ್ 19 ಭೀತಿಯನ್ನು ನಿಭಾಯಿಸಲು ಲಕ್ನೋದಲ್ಲಿ ಹೆಚ್ಚುವರಿ 4,000 ಐಸಿಯು ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗುವುದು. ಹೆಚ್ಚಿನ ಆಂಬುಲೆನ್ಸ್‌ ಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ಗೆ ತಿಳಿಸಿರುವುದು ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ 12, 787 ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 6,76,739 ಕ್ಕೆ ಏರಿಕೆಯಾಗಿದೆ. ಇನ್ನು, ಒಂದು ದಿನದಲ್ಲಿ 48 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸೋಂಕಿನಿಂದ ಮೃತರಾದವರ ಸಂಖ್ಯೆ  9085ಕ್ಕೆ ಹೆಚ್ಚಳವಾಗಿದೆ.

 ಓದಿ :  ನೀವು ಹಣ ವರ್ಗಾಯಿಸುತ್ತಿರುವ ಯುಪಿಐ ವ್ಯವಸ್ಥೆಯ ಬಗ್ಗೆ ನಿಮಗೆಷ್ಟು ಗೊತ್ತು.? ಈ ಲೇಖನ ಓದಿ  

Advertisement

Udayavani is now on Telegram. Click here to join our channel and stay updated with the latest news.

Next