Advertisement

ಬೈಕ್ ಸ್ಟಂಟ್ ಕುರಿತು ವಿಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

03:54 PM Mar 20, 2021 | Team Udayavani |

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಯುವಕ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿಯಾದ ಬೈಕ್ ಸ್ಟಂಟ್ ಗಳನ್ನು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣವಾದ ಟ್ವೀಟರ್ ಮೂಲಕ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಪೋಸ್ಟ್ ಮಾಡಿದೆ.

Advertisement

“Doom or Doomed?” ಎಂಬ ಶೀರ್ಷಿಕೆಯ ಅಡಿಯಲ್ಲಿ ಟ್ವೀಟ್ ಸಂದೇಶಗಳನ್ನು ರವಾನಿಸಿರುವ ಪೊಲೀಸ್ ಇಲಾಖೆ, ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಬೈಕ್ ಸ್ಟಂಟ್ ಗೆ ಸಂಬಂಧಿಸಿರುವ ಎರಡು ಬೇರೆ ಬೇರೆ  ಸನ್ನಿವೇಶಗಳನ್ನು ಕಾಣಬಹುದಾಗಿದೆ. ಹಿಂದಿಯ ದೂಮ್ ಸಿನಿಮಾದ ಹಾಡೊಂಡನ್ನು ಹಿನ್ನೆಲೆ ಸಂಗೀತಕ್ಕಾಗಿ ಬಳಸಿಕೊಳ್ಳಲಾಗಿದ್ದು, ಈ ನಡುವೆ ಪೊಲೀಸ್ ಇಲಾಖೆ ಈ ಘಟನೆಯ ಬಳಿಕ ವ್ಯಕ್ತಿಗಳ ವಿರುದ್ಧ  ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಿದೆ.

ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಶ್ರೀಲಂಕಾದಿಂದ “ಸೀತಾ ಎಲಿಯಾ” ಶಿಲೆ ಉಡುಗೊರೆ

ಈ ವಿಡಿಯೋದ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ಇದು ಖಂಡಿತವಾಗಿಯೂ ಅಪರಾಧ. ನಾವು ಇಂತಹ ಕಾರ್ಯಗಳನ್ನು ತಡೆಹಿಡಿದಿದ್ದೇವೆ ಎಂದು ತಿಳಿಸಿದೆ.

Dhoom or Doomed ?#RoadSafety #DriveSafe #StaySafe pic.twitter.com/mp3RlJcsNn

Advertisement

— UP POLICE (@Uppolice)

 

#RoadSafety, #DriveSafe,  #StaySafe ಹ್ಯಾಷ್ ಟ್ಯಾಗ್ ಗಳನ್ನು ಬಳಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದ ಪೋಸ್ಟ್, ಕೇವಲ ಒಂದು ದಿನದಲ್ಲಿ ಬರೊಬ್ಬರಿ ಒಂದು ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದ್ದು, ಪೋಲೀಸರ ಈ ಕಾರ್ಯಕ್ಕೆ ಜನರು ಮಚ್ಚುಗೆಯನ್ನು ಸೂಚಿಸುವುದರೊಂದಿದೆ. ಪೊಲೀಸ್ ಇಲಾಖೆಯ ಅತ್ಯುತ್ತಮ ಕೆಲಸ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next