Advertisement
ತಿದ್ದುಪಡಿ ಮಸೂದೆ ಮಂಡನೆಯಾಗಿ ಕಾಯಿದೆಯಾದ ಬಳಿಕ ಪೊಲೀಸರು ಮತ್ತೂ ಚುರುಕಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಕೂಟಿಯಲ್ಲಿ ತನ್ನ ಮಗಳ ಜತೆ ಪ್ರಯಾಣಿಸುತ್ತಿದ್ದ ತಾಯಿಯನ್ನು ಅಲ್ಲಿನ ಎಎಸ್ಪಿ ರಾಹುಲ್ ಶ್ರೀವಾತ್ಸವ್ ಅವರು ಅಭಿನಂದಿಸಿದ ದೃಶ್ಯ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿದೆ.
ಉತ್ತರಪ್ರದೇಶದಲ್ಲಿ ತಾಯಿಯೊಬ್ಬಳು ತಾನೂ ಹೆಲ್ಮೆಟ್ ಧರಿಸಿದ್ದಲ್ಲದೇ ಮುಂದೆ ಕುಳಿತಿದ್ದ ತನ್ನ ಪುಟ್ಟ ಮಗಳಿಗೂ ಹೆಲ್ಮೆಟ್ ಅನ್ನು ತೊಡಿಸಿ ಪ್ರಯಾಣಿಸುತ್ತಿದ್ದರು. ಈ ಘಟನೆಯಿಂದ ಸಂತಸಗೊಂಡ ರಾಹುಲ್ ಅವರು ತಾಯಿ ಮತ್ತು ಮಗುವಿನ ವೀಡಿಯೋ ತೆಗೆದು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನ ಹೆಸರೇನು ಎಂದು ಮಗುವಿನಲ್ಲಿ ಕೇಳಿದ ಪೊಲೀಸ್, ನಿಮಗೂ, ನಿಮ್ಮ ಅಮ್ಮನಿಗೂ ನಮ್ಮ ಇಲಾಖೆ ವತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಈ ಕಾಳಜಿಗೆ ನಾವು ಸಂತಸಗೊಂಡಿದ್ದೇವೆ. ಈ ಒಂದು ಉದಾಹರಣೆ ಹಲವು ಪ್ರಯಾಣಿಕರಿಗೆ ಮಾದರಿಯಾಗಲಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಹುಲ್ ಮಗುವಿಗೆ ಶೇಕ್ ಹ್ಯಾಂಡ್ ಮಾಡಿ ಐಎಎಸ್, ಐಪಿಎಸ್ ಮೊದಲಾದ ಅತ್ಯನ್ನುತ ಹುದ್ದೆಯನ್ನು ಅಲಂಕರಿಸುವಂತೆ ಹೇಳಿದೆ. ಮಗು ಎಲ್ಲದಕ್ಕೂ ಓಕೆ ಎಂದಿದೆ.
Related Articles
Advertisement
ಪೊಲೀಸ್ ಟ್ವೀಟ್