Advertisement

3700 ಕೋಟಿ ರೂ.ಆನ್‌ಲೈನ್‌ ಸ್ಕ್ಯಾಮ್‌: ಪೊಲೀಸರಿಂದ ಸನ್ನಿ ವಿಚಾರಣೆ

12:41 PM Feb 08, 2017 | |

ನೋಯ್ಡಾ  : ಏಳು ಲಕ್ಷ ಅಮಾಯಕ ಜನರಿಗೆ ಹೊಸಬಗೆಯ ಆನ್‌ಲೈನ್‌ ವಂಚನೆಯಲ್ಲಿ 3,700 ಕೋಟಿ ರೂ. ಪಂಗನಾಮ ಹಾಕಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ನಟಿಯರಾದ  ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು ವಿಚಾರಣೆ  ನಡೆಸಿರುವ ಬಗ್ಗೆ ವರದಿಯಾಗಿದೆ.

Advertisement

ಈಗಾಗಲೇ ಬಂಧನಕ್ಕೊಳಗಾಗಿರುವ ವಂಚನೆಯ ಕಿಂಗ್‌ ಪಿನ್‌ ಆನುಭವ್‌ ಮಿತ್ತಲ್‌ ಗ್ರೇಟರ್‌ ನೋಯ್ಡಾದಲ್ಲಿ  ನವೆಂಬರ್‌ 29 ರಂದು ಆಯೋಜಿಸಿದ್ದ  ಹೊಸ ಉದ್ದಿಮೆ ಇಂಟ್‌ಮಾರ್ಟ್‌ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು  ಪೊಲೀಸರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. 

ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಇಬ್ಬರು ಮಾದಕ ನಟಿಯರನ್ನು ಕರೆಸಿಕೊಂಡಿದ್ದು ಈ ಬಗ್ಗೆ ತನಿಖೆ ಮುಂದುವರಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next