Advertisement

ತಂದೆಗೆ ವಿಚಾರ ತಿಳಿಸಿ ಬೆಂಕಿ ಹಚ್ಚಿಕೊಂಡ ಗ್ಯಾಂಗ್‌ರೇಪ್‌ ಸಂತ್ರಸ್ತೆ

11:00 AM Sep 11, 2018 | Team Udayavani |

ಲಕ್ನೋ : ತನ್ನ ಮೇಲಾದ ಗ್ಯಾಂಗ್‌ ರೇಪ್‌ ವಿಚಾರವನ್ನು ತಂದೆಗೆ ತಿಳಿಸಿ ಅಪ್ರಾಪ್ತ ವಯಸ್ಕಳೊರ್ವಳು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ದಾರುಣ ಘಟನೆ ಆಲಿಗಢದಲ್ಲಿ ಸೋಮವಾರ ನಡೆದಿದೆ. 

Advertisement

ಶುಕ್ರವಾರ ಇಬ್ಬರು ಕಾಮುಕರು ಬಾಲಕಿಯ ಮೇಲೆ ಗ್ಯಾಂಗ್‌ ರೇಪ್‌ ಎಸಗಿದ್ದರು. ತೀವ್ರವಾಗಿ ನೊಂದಿದ್ದ ಸಂತ್ರಸ್ತೆ  ಸೋಮವಾರ ತಂದೆಗೆ ವಿಚಾರ ತಿಳಿಸಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಆಸ್ಪತ್ರೆಗೆ ದಾಖಲಿಸಿದರೂ ಆಕೆ ಬದುಕುಳಿಯಲಿಲ್ಲ. 

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು ಇಬ್ಬರು ಕಾಮುಕರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next