ಲಕ್ನೋ: ದೇಶವೇ ಕಾತರದಿಂದ ಕಾಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಈ ಬಗ್ಗೆ ಹಲವರಿಗೆ ಗೊಂದಲಗಳಿವೆ. ಸಾಮನ್ಯ ಜನರಿಗೆ ಗೊಂದಲ ಇರುವುದು ಬಿಡಿ ಉತ್ತರಪ್ರದೇಶದ ಸಚಿವರಿಗೆ ಜಿಎಸ್‌ಟಿಯ ಫುಲ್‌ಫಾರ್ಮ್ ಏನೆಂದೇ ಗೊತ್ತಿಲ್ಲ. ವಿಡಿಯೋ ನೋಡಿ
ಉತ್ತರ ಪ್ರದೇಶದ ಸಮಾಜ ಕಲ್ಯಾಣ, ಬುಡಕಟ್ಟು ವ್ಯವಹಾರದ ಸಚಿವ ರಾಮ್‌ಪತಿ ಶಾಸ್ತ್ರಿ ಅವರ ಬಳಿ ಜಿಎಸ್‌ಟಿ ಪೂರ್ಣ ಪದ ಏನೆಂದು ಕೇಳಿದಾಗ ಮೇಲೆ ಕೆಳಗೆ ನೋಡಿ ‘ನನಗೆ ಪೂರ್ಣ ರೂಪ ಗೊತ್ತಿದೇ… ಸದ್ಯ ನಾನು ಜಿಎಸ್ ಟಿ ಬಗ್ಗೆ ಹೆಚ್ಚು ಜ್ಞಾನವನ್ನು ಸಂಗ್ರಹಿಸಲು ಎಲ್ಲಾ ಸಂಬಂಧಿತ ದಾಖಲೆಗಳ ಮೊರೆ ಹೋಗುತ್ತಿದ್ದೇನೆ’ ಎಂದು ಪೇಚಿಗೆ ಸಿಲುಕಿದ್ದಾರೆ.
ರಾಮ್‌ಪತಿ ಅವರು ಸದ್ಯ ಈ ವಿಚಾರದಲ್ಲಿ ದೇಶಾದ್ಯಂದ ಸುದ್ದಿಯಾಗಿದ್ದಾರೆ.