Advertisement

ದಲಿತ, ಮುಸಲ್ಮಾನ ಆಯ್ತು; ಹನುಮ ಓರ್ವ ಜಾಟ್‌: ಉ.ಪ್ರ.ಸಚಿವ ಚೌಧರಿ

04:03 PM Dec 21, 2018 | Team Udayavani |

ಲಕ್ನೋ : ಹನುಮಂತ ಓರ್ವ ದಲಿತ, ಮುಸಲ್ಮಾನ ಎಂದು ಹೇಳಲ್ಪಟ್ಟ ಬಳಿಕ ಈಗ ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಅವರು “ಹನುಮಂತ ಒಬ್ಬ ಜಾಟ್‌ ಆಗಿದ್ದ’ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ. 

Advertisement

“ಒಬ್ಬ ಜಾಟ್‌ ನ ಮೂಲ ಗುಣ ಎಂದರೆ ಇತರರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುವುದು. ಸಹಾಯದ ಅಗತ್ಯ ಇರುವ ವ್ಯಕ್ತಿಯ ಜಾತಿ, ಮತ, ಧರ್ಮ, ಕುಲ, ಗೋತ್ರ ಯಾವುದೆಂದು ನೋಡುವ ಗೋಜಿಗೆ ಜಾಟ್‌ ಹೋಗುವುದಿಲ್ಲ. ಆತನ ಗುಣ ಭಗವಾನ್‌ ಹನುಮನ ಗುಣವೇ ಆಗಿರುತ್ತದೆ. ಹೇಗೆ ಹನುಮಂತ ಎಲ್ಲರ ನೆರವಿಗೂ ಧಾವಿಸುತ್ತಾನೋ ಹಾಗೆ. ಆದುದರಿಂದ ಹನುಮಂತ ಒಬ್ಬ ಜಾಟ್‌ ಎಂದು ನಾನು ತಿಳಿಯುತ್ತೇನೆ” ಎಂದು ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದರು.

ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಾದ ವೇಳೆ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು “ಹನುಮಂತ ಓರ್ವ ದಲಿತ’ ಎಂದು ವರ್ಣಿಸಿದ್ದರು. 

ನಿನ್ನೆಯಷ್ಟೇ ಉತ್ತರ ಪ್ರದೇಶದ ಬಿಜೆಪಿ ಎಂಎಲ್‌ಸಿ ಬುಕ್ಕಲ್‌ ನವಾಬ್‌, “ಹನುಮಂತ ಓರ್ವ ಮುಸಲ್ಮಾನ’ ಎಂದು ವರ್ಣಿಸಿದ್ದರು. 

ಹೀಗೆ ಹನುಮಂತನ ವಿಷಯದಲ್ಲಿ  ಇವರು ನೀಡಿದ್ದ ರಾಜಕೀಯ ಹೇಳಿಕೆಗಳು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದವು. ಈಗ ಹನುಮಂತ ಓರ್ವ ಜಾಟ್‌ ಎಂದು ಉ.ಪ್ರ. ಸಚಿವ ಲಕ್ಷ್ಮೀನಾರಾಯಣ ಚೌಧರಿ ಹೇಳಿರುವುದು ಕೂಡ ವ್ಯಾಪಕ ಟೀಕೆಗೆ ಗುರಿಯಾಗಿದೆ. 

Advertisement

ಉತ್ತರ ಪ್ರದೇಶದಲ್ಲಿ ಹೈನು ಅಭಿವೃದ್ಧಿ, ಸಂಸ್ಕೃತಿ, ಅಲ್ಪ ಸಂಖ್ಯಾಕ ವ್ಯವಹಾರ, ಮುಸ್ಲಿಂ ವಕ್‌ಫ್ ಮತ್ತು ಹಜ್‌ ಖಾತೆಗಳ ಸಚಿವರೂ ಆಗಿರುವ ಲಕ್ಷ್ಮೀ ನಾರಾಯಣ ಚೌಧರಿ ಅವರು ‘ಯಾವುದೇ ವ್ಯಕ್ತಿಯ ಗುಣ, ನಡತೆ, ವರ್ತನೆ, ವ್ಯಕ್ತಿತ್ವ ಇತ್ಯಾದಿಗಳನ್ನು ವಿಶ್ಲೇಷಿಸಿ ಆತನ ಕುಲ ಯಾವುದೆಂದು ತಿಳಿಯಲು ಸಾಧ್ಯವಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next