ಉತ್ತರ ಪ್ರದೇಶ: ಕಾಲ ಬದಲಾದರೂ ಜನರ ಮನಸ್ಥಿತಿ ಯಾವ ಮಟ್ಟಿಗೆ ಇಳಿದಿದೆ ಎಂಬುದಕ್ಕೆ ಇಲ್ಲಿನ ಘಟನೆಯೇ ನೈಜ್ಯ ಉದಾಹರಣೆ, ಇಂದಿನ ಜನರಿಗೆ ತಾಳ್ಮೆ, ಹೊಂದಿಕೊಂಡು ಹೋಗುವ ಮನಸ್ಥಿತಿ ಎಂಬುದೇ ಇಲ್ಲದಂತಾಗಿದೆ. ತಾನು ತನ್ನದು ಎಂಬ ಅಹಂ ಮರೆತರೆ ಎಲ್ಲವೂ ಬಹುಶ ಸರಿ ಆಗಬಹುದು ಆದರೆ ಇಲ್ಲಿ ನಡೆದಿರುವ ಸಂಗತಿ ನಿಜಕ್ಕೂ ಮನಸ್ಸಿಗೆ ಬೇಸರ ತರುವಂತದ್ದೇ.
ಉತ್ತರ ಪ್ರದೇಶದಲ್ಲಿ ನಡೆದ ಒಂದು ಮದುವೆ ಸಮಾರಂಭದಲ್ಲಿ ಮದುವೆ ನಡೆದು ಕೇವಲ ಎರಡು ಗಂಟೆಗಳಾಗಿದೆ ಅಷ್ಟರಲ್ಲೇ ಮಧುಮಗ ತಾನು ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ, ಇದಕ್ಕೆ ಆತನ ಪೋಷಕರು ಸಹಮತ ನೀಡಿದ್ದಾರೆ.
ಏನಿದು ಘಟನೆ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಯುವಕ ತಾನು ಮದುವೆಯಾದ ಎರಡೇ ಗಂಟೆಯಲ್ಲಿ ತಾನು ಇಟ್ಟ ಬೇಡಿಕೆಯನ್ನು ವಧುವಿನ ಕಡೆಯವರು ಈಡೇರಿಸಲಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ್ದಾನೆ. ಅಂದ ಹಾಗೆ ಡಾಲಿ ಹಾಗೂ ಆಕೆಯ ಸಹೋದರಿಗೆ ಒಂದೇ ದಿನ ಮದುವೆಯಾಗಿದೆ, ಡಾಲಿಯ ಸಹೋದರಿ ಮದುವೆಯಾಗಿ ತನ್ನ ಗಂಡನ ಮನೆಗೆ ತೆರಳಿದ್ದಾಳೆ ಆದರೆ ಡಾಲಿಯ ಗಂಡ ಮದುವೆಯಾಗಿ ತನ್ನ ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಬದಲು ಅಲ್ಲೇ ಮದುವೆ ಮುರಿದಿದ್ದಾನೆ ಕಾರಣ ಕೇಳಿದರೆ ಡಾಲಿಯ ಗಂಡ ಆಸೀಫ್ ಮದುವೆಗೂ ಮುನ್ನ ಡಾಲಿಯ ಪೋಷಕರಲ್ಲಿ ವರದಕ್ಷಿಣೆಯಾಗಿ ಕಾರು ಕೊಡಿಸುವಂತೆ ಬೇಡಿಕೆ ಇಟ್ಟಿದ್ದ ಅದಕ್ಕೆ ವಧುವಿನ ಕಡೆಯವರ ಸಮ್ಮತಿಯೂ ಇತ್ತು ಆದರೆ ಇಬ್ಬರು ಮಕ್ಕಳ ಮದುವೆಯ ಜವಾಬ್ದಾರಿ ಪೋಷಕರ ಮೇಲೆ ಇದ್ದಿದ್ದರಿಂದ ಪೋಷಕರಿಗೆ ಕಾರು ಕೊಡಿಸುವುದು ಕಷ್ಟವಾಗಿದೆ. ಆದರೆ ಪೋಷಕರು ವರನ ಕಡೆಯವರಲ್ಲಿ ಹೇಳಿಕೊಂಡಿರಲಿಲ್ಲ ಕೊನೆಗೆ ಮದುವೆ ನಡೆದ ಬಳಿಕ ವರನ ಕಡೆಯವರು ಕಾರು ಎಲ್ಲಿ ಎಂದು ಕೇಳಿದಾಗ ಹಣ ಹೊಂದಾಣಿಕೆ ಸ್ವಲ್ಪ ಕಷ್ಟವಾಯಿತು ಸ್ವಲ್ಪ ಸಮಯ ಕೊಡಿ ಕಾರು ಕೊಡಿಸುತ್ತೇವೆ ಎಂದು ಹೇಳಿದ್ದಾರೆ ಇಷ್ಟಕ್ಕೆ ಕೋಪಗೊಂಡ ವರ ಮತ್ತು ಆತನ ಪೋಷಕರು ಸಿಟ್ಟಾಗಿದ್ದರೆ ಅಲ್ಲದೆ ವರ ವಧುವಿನ ಎದುರು ಮೂರು ಬಾರಿ ತಲಾಖ್… ಎಂದು ಹೇಳಿ ಹೊರಟು ಹೋಗಿದ್ದಾನೆ.
ವಧುವಿನ ಪೋಷಕರು ಮದುವೆಯ ವೇಳೆ ವರದಕ್ಷಿಣೆಯಾಗಿ ಚಿನ್ನ, ಬೆಳ್ಳಿ ಸೇರಿದಂತೆ ಸುಮಾರು ನಾಲ್ಕು ಲಕ್ಷ ರೂಗಳನ್ನು ನೀಡಿದ್ದರು, ಆದರೆ ಹುಡುಗನ ಕಡೆಯವರು ಕಾರಿಗೆ ಬೇಡಿಕೆ ಇಟ್ಟು ಕೂಡಲೇ ನೀಡುವಂತೆ ಆಗ್ರಹಿಸಿ ಪತ್ನಿಗೆ ತಲಾಖ್ ನೀಡಿ ಚಿನ್ನ ಬೆಳ್ಳಿ ಸಮೇತ ಪಾರಿಯಾಗಿದ್ದಾನೆ.
ಇತ್ತ ವಧುವಿನ ಪೋಷಕರು ಹುಡುಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: IND vs WI: ಅಶ್ವಿನ್, ಜೈಸ್ವಾಲ್ ಕಮಾಲ್… ಭಾರತಕ್ಕೆ ಇನ್ನಿಂಗ್ಸ್ ಹಾಗೂ 141 ಅಂತರದ ಗೆಲುವು