Advertisement

ಲೈಂಗಿಕ ಹಲ್ಲೆ ನಡೆಸಿ, ಬಳಿಕ ತಾನೇ ಕೈ ಕತ್ತರಿಸಿಕೊಂಡ?

01:10 AM Sep 12, 2020 | mahesh |

ಹೊಸದಿಲ್ಲಿ: ಹರ್ಯಾಣದ ಪಾಣಿಪತ್‌ನಲ್ಲಿ 7 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬ ತನ್ನ ಕೈಗಳನ್ನು ತಾನೇ ಕತ್ತರಿಸಿಕೊಂಡಿರುವ ಅಚ್ಚರಿಯ ಘಟನೆ ನಡೆದಿದೆ.

Advertisement

ಲೈಂಗಿಕ ದೌರ್ಜನ್ಯ ಘಟನೆ ನಡೆದ ಮಾರನೇ ದಿನ ಉತ್ತರಪ್ರದೇಶದ ಸಹರಾನ್‌ಪುರದ ಇಖ್ಲಾಖ್‌ ಕೈ ಕತ್ತರಿಸಿಕೊಂಡಿರುವ ಸ್ಥಿತಿಯಲ್ಲಿ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದ. ಈತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದಾಗ ಆಕೆಯ ಪೋಷಕರು ಬಂದು ಆತನಿಂದ ರಕ್ಷಿಸಿದ್ದರು. ಆಗ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಇಖ್ಲಾಖ್‌, ತನ್ನ ಕೈಯನ್ನು ತಾನೇ ಕತ್ತರಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಹರ್ಯಾಣ ಪೊಲೀಸರು ಹೇಳಿದ್ದಾರೆ.

ಆದರೆ, ಇಖ್ಲಾಖ್‌ ಸಹೋದರ, ಇದನ್ನು ನಿರಾಕರಿಸಿದ್ದು ಗ್ರಾಮಸ್ಥರೇ ಇಖ್ಲಾಖ್‌ನ ಕೈ ಕತ್ತರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಲಕಿಯ ಪೋಷಕರು ಇಖ್ಲಾಖ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next