Advertisement

UP; ‘ಜುಡೇಂಗೆ ಜೀತೇಂಗೆ’: ಸಿಎಂ ಯೋಗಿ ಹೇಳಿಕೆಗೆ ಎಸ್‌ಪಿ ತಿರುಗೇಟು!

12:19 AM Nov 02, 2024 | Team Udayavani |

ಲಕ್ನೋ: ಉಪಚುನಾವಣೆ ಹೊಸ್ತಿಲಿನಲ್ಲಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಎಸ್‌.ಪಿ. ನಡುವೆ ಪೋಸ್ಟರ್‌ ಜಟಾಪಟಿ ರಂಗೇರಿದೆ. ಲೋಕಸಭೆ ಚುನಾವಣೆ ವೇಳೆ “ಬಾಟೇಂಗೆ ತೋ ಕಟೇಂಗೆ’ (ನಾವು ದೂರಾದರೆ – ನಮ್ಮನ್ನು ತುಂಡರಿಸುತ್ತಾರೆ) ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿಕೆ ನೀಡಿದ್ದು ಪ್ರಚಾರ ಪಡೆದಿತ್ತು. 9 ಕ್ಷೇತ್ರಗಳಿಗೆ ನ.13ರ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಎಸ್‌ಪಿ “ಜುಡೇಂಗೆ ತೋ ಜೀತೇಂಗೆ’ (ಒಟ್ಟಾದರೆ ನಾವು ಗೆಲ್ಲುತ್ತೇವೆ) ಎನ್ನುವ ಪೋಸ್ಟರ್‌ ಮೂಲಕ ಮುಖ್ಯಮಂತ್ರಿಗೆ ತಿರುಗೇಟು ನೀಡಿದೆ. ಲೋಕಸಭೆ ಚುನಾವಣೆಯಲ್ಲಿ 9 ಶಾಸಕರು ಗೆದ್ದಿದ್ದರಿಂದ ತೆರವಾಗಿರುವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನ.23ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.