Advertisement

ಉತ್ತರ ಪ್ರದೇಶ: ಕಳ್ಳತನವಾಗಿದ್ದ ಮಗು ಬಿಜೆಪಿ ನಾಯಕಿ ಮನೆಯಲ್ಲಿ ಪತ್ತೆ!

08:18 PM Aug 29, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ದಂಪತಿಯಿಂದ ವ್ಯಕ್ತಿಯೊಬ್ಬ ಮಗುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ವಿಡಿಯೋ ವೈರಲ್‌ ಆಗಿತ್ತು.

Advertisement

ಇದೀಗ ಆ ಮಗು ಬಿಜೆಪಿ ನಾಯಕಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದೆ!

ಕಳ್ಳತನವಾದ ಸ್ಥಳದಿಂದ ಸುಮಾರು 100ಕಿ.ಮೀ. ದೂರದಲ್ಲಿ ವಾಸವಿರುವ ಫಿರೋಜಾಬಾದ್‌ನ ಕಾರ್ಪೋರೇಟರ್‌ ವಿನಿತಾ ಅಗರ್ವಾಲ್‌ ಅವರಿಗೆ ಹೆಣ್ಣು ಮಗುವಿದೆ. ಆದರೆ ಗಂಡು ಮಗುವೊಂದು ಬೇಕು ಎನ್ನುವ ಕಾರಣಕ್ಕೆ ಅವರು ಹತ್ರಾಸ್‌ ಜಿಲ್ಲೆಯ ಆಸ್ಪತ್ರೆಯೊಂದರ ವೈದ್ಯರಿಬ್ಬರಿಗೆ ಅಕ್ರಮವಾಗಿ 1.8 ಲಕ್ಷ ರೂ. ಕೊಟ್ಟಿದ್ದಾರೆ. ಆ ಹಣಕ್ಕೆ ಆ ವೈದ್ಯರು ಕದ್ದ ಮಗುವನ್ನು ದಂಪತಿಗೆ ಹಸ್ತಾಂತರಿಸಿದ್ದಾರೆ.

ಈ ಪ್ರಕರಣದಿಂದಾಗಿ ಮಕ್ಕಳನ್ನು ಕದ್ದು, ಮಾರಾಟ ಮಾಡುತ್ತಿದ್ದ ದೊಡ್ಡ ಗ್ಯಾಂಗ್‌ ಒಂದು ಸಿಕ್ಕಿಬಿದ್ದಿದೆ. ಮಗುವನ್ನು ಕದ್ದಿದ್ದ ದೀಪ ಕುಮಾರ್‌, ಇಬ್ಬರು ವೈದ್ಯರು ಸೇರಿ 8 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next