ಉತ್ತರ ಪ್ರದೇಶ : ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಇ ಎಸ್ ಎಮ್ ಎ) ಹೇರುವ ಮೂಲಕ ಉತ್ತರ ಪ್ರದೇಶ ಸರ್ಕಾರ 500ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು(ಗುರುವಾರ, ಜುಲೈ 29) ಆರೋಪಿಸಿದ್ದಾರೆ.
ಇದನ್ನೂ ಓದಿ : ‘ಕೆಜಿಎಫ್’ ಅಡ್ಡಾಗೆ ಖಡ್ಗ ಹಿಡಿದು ಎಂಟ್ರಿ ಕೊಟ್ಟ ‘ಅಧೀರ’: ಸಂಜು ಬಾಬಾ ರಗಡ್ ಲುಕ್ ರಿಲೀಸ್
ಈ ಕುರಿತು ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಅವರು, ಉತ್ತರಪ್ರದೇಶದಲ್ಲಿ ಕೋವಿಡ್ 19 ಸಂದರ್ಭದಲ್ಲಿ, ಆ್ಯಂಬ್ಯುಲೆನ್ಸ್ ಕಾರ್ಮಿಕರ ಮೇಲೆ ಹೂ ಮಳೆ ಸುರಿಸುವ ಬಗ್ಗೆ ಸರ್ಕಾರ ಮಾತನಾಡುತ್ತಿತ್ತು. ಆದರೆ, ಅವರು (ಕಾರ್ಮಿಕರು) ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಕೂಡಲೇ, ಸರ್ಕಾರವು ಅವರ ವಿರುದ್ಧ ತನ್ನ ನಿಲುವು ಬದಲಾಯಿಸಿಕೊಂಡಿದೆ. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಇ ಎಸ್ ಎಮ್ ಎ) ಹೇರುವ ಮೂಲಕ ಸರ್ಕಾರ 500 ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದರಿಂದ 500 ಮಂದಿಯ ಕುಟುಂಬ ಸಂಕಷ್ಟದಲ್ಲಿದೆ. ದೇವರು ಇಂತಹ ಸರ್ಕಾರದಿಂದ ರಾಜ್ಯವನ್ನು ಉಳಿಸುತ್ತಾನೆಯೇ ಎಂದು ಕೇಳಿದ್ದಾರೆ.
ಇತ್ತೀಚೆಗೆ, ಅಂದರೇ, ಮೇ 27, 2021 ರಂದು ಉತ್ತರ ಪ್ರದೇಶ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು (ಇ ಎಸ್ ಎಮ್ ಎ) ಉತ್ತರಪ್ರದೇಶದಲ್ಲಿ ಜಾರಿಗೆ ತಂದಿದೆ.
ಇದನ್ನೂ ಓದಿ : ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?