Advertisement

ಯೋಗಿ ಸರ್ಕಾರ ತನ್ನ “ದರ್ಪ ಮತ್ತು ಸರ್ವಾಧಿಕಾರಿ” ಧೋರಣೆಯನ್ನು ಬಿಡಬೇಕು: ಮಾಯಾವತಿ

02:12 PM Oct 05, 2020 | Mithun PG |

ಲಕ್ನೋ: ಹತ್ರಾಸ್ ಪ್ರಕರಣದಲ್ಲಿ ನ್ಯಾಯಕ್ಕಾಗಿ  ಪ್ರತಿಭಟಿಸುತ್ತಿರುವ ಪ್ರತಿಪಕ್ಷ ನಾಯಕರ ಮೇಲೆ ತನ್ನ ಬಲವನ್ನು ಯೋಗಿ ಸರ್ಕಾರ ಬಳಸುತ್ತಿರುವುದು ನಾಚಿಕೆಗೇಡು. ಈ ಕೂಡಲೇ ಉತ್ತರ ಪ್ರದೇಶ ಸರ್ಕಾರ ತನ್ನ “ದರ್ಪದ ಮತ್ತು ಸರ್ವಾಧಿಕಾರಿ” ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ,  ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ.

Advertisement

ಬಿಎಸ್ ಪಿ ನಿಯೋಗವು ಹತ್ರಾಸ್ ಸಂತ್ರಸ್ಥೆಯ ಕುಟುಂಬದ ಸದಸ್ಯರೊಂದಿಗೆ ಸೆ. 28ರಂದೇ ಮಾತುಕತೆ ನಡೆಸಿದೆ. ಅಲ್ಲಿ ನಮಗೆ ತಿಳಿದ ಮಾಹಿತಿ ಮನಕಲಕುವಾಗಿತ್ತು.  ಇದರಿಂದಲೇ ತಾವು ಮಾಧ್ಯಮದ ಮೊರೆ ಹೋಗಿದ್ದು ಎಂದು ಮಾಯಾವತಿ ತಿಳಿಸಿದ್ದಾರೆ.

ಆದರೇ ಸರ್ಕಾರ ಮಾಧ್ಯಮವನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಸರ್ಕಾರ ತನ್ನ ಸರ್ವಾಧಿಕಾರ ಧೋರಣೆಯನ್ನು ಬಿಡಬೇಕು. ಮಾತ್ರವಲ್ಲದೆ ಪ್ರಜಾಪ್ರಭುತ್ವದ ಬೇರುಗಳನ್ನೇ ಕತ್ತರಿಸುವ ಪ್ರಯತ್ನ ಸಲ್ಲದು ಎಂದಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು 

ಹತ್ರಾಸ್ ಪ್ರಕರಣ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಹಾಗೂ ಕೃಷಿ ಮಸೂದೆಯನ್ನು ವಿರೋಧಿಸಿ ಆ. 2ರ ಶುಕ್ರವಾರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.

Advertisement

ಇದನ್ನೂ ಓದಿ: ಡಿಕೆ ಶಿವಕುಮಾರ್ ದೊಡ್ಡಾಲಹಳ್ಳಿಯ ಮನೆ ಲಾಕರ್ ಒಡೆದಾಗ ಸಿಕ್ಕಿದ್ದು ಚಿಲ್ಲರೆ ಮಾತ್ರ!

Advertisement

Udayavani is now on Telegram. Click here to join our channel and stay updated with the latest news.

Next