ಭೋಪಾಲ್: ಹಿಂದೂಗಳ ಹಬ್ಬ, ಕರ್ವಾ ಚೌತ್ ಅನ್ನು ಸಲಿಂಗಕಾಮಿಗಳ ಜೋಡಿ ಆಚರಿಸುವ ಜಾಹೀರಾತನ್ನು ಮಾಡಿರುವ ಡಾಬರ್ ಸಂಸ್ಥೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದೆ.
ಜಾಹೀರಾತು ಹಿಂಪಡೆಯಲು ಡಾಬರ್ ಸಂಸ್ಥೆಗೆ ಸೂಚಿಸಲು ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ರಾಜ್ಯ ಗೃಹ ಸಚಿವ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.
ಜಾಹೀರಾತು ಹಿಂಪಡೆಯಲು ಸಂಸ್ಥೆ ಒಪ್ಪದಿದ್ದರೆ, ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ರೀತಿಯ ವಿವಾದಾತ್ಮಕ ಜಾಹೀರಾತುಗಳು ಹಿಂದೂ ಸಂಪ್ರದಾಯದ ಬಗ್ಗೆಯೇ ಬರುತ್ತಿವೆ. ಇದು ಖಂಡನೀಯ ಎಂದು ಸಚಿವರು ಹೇಳಿದ್ದಾರೆ.
ಡಾಬರ್ ಸಂಸ್ಥೆ ಜಾಹೀರಾತಿನಲ್ಲಿ ಇಬ್ಬರು ಹೆಣ್ಣು ಮಕ್ಕಳು, ಗಂಡ ಹೆಂಡತಿಯಂತೆ ಕರ್ವಾ ಚೌತ್ ಆಚರಿಸಿ, ಜರಡಿಯಲ್ಲಿ ಪರಸ್ಪರ ಮುಖಗಳನ್ನು ನೋಡಿಕೊಳ್ಳುವುದನ್ನು ತೋರಿಸಿತ್ತು.
ಇದನ್ನೂ ಓದಿ:ವರ್ಷಾಂತ್ಯದಿಂದ ವಿದೇಶಗಳಿಗೆ ಲಸಿಕೆ ರಫ್ತು; ಕೇಂದ್ರ ಸರ್ಕಾರದ ಘೋಷಣೆ