Advertisement

ಯುಪಿ, ಗೋವಾ, ಪಂಜಾಬ್‌ ಅತಂತ್ರ; ಉತ್ತರಾಖಂಡ ಬಿಜೆಪಿಗೆ?

03:45 AM Jan 27, 2017 | Team Udayavani |

ಉತ್ತರ ಪ್ರದೇಶ: ಉತ್ತರ ಪ್ರದೇಶ, ಪಂಜಾಬ್‌ ಮತ್ತು ಗೋವಾ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು, ಉತ್ತರಾಖಂಡದಲ್ಲಿ ಮಾತ್ರ ಬಿಜೆಪಿ ಜಯಗಳಿಸಲಿದೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ. ದಿ ವೀಕ್‌-ಹನ್ಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಈ ಸಮೀಕ್ಷೆಯಲ್ಲಿ ವಾರದ ಹಿಂದೆ ನಡೆಸಲಾ ಗಿದೆ. ಅಂದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಎಸ್ಪಿ ಮೈತ್ರಿ ನಿರ್ಧಾರ ಹೊರಬಿದ್ದ ಕೂಡಲೇ ಈ ಸಮೀಕ್ಷೆ ನಡೆಸಲಾಗಿದೆ. 

Advertisement

ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ದೊಡ್ಡ ಪಕ್ಷವಾಗಿ ಬಿಜೆಪಿಯೇ ಹೊರಹೊಮ್ಮಲಿದೆ. ಆದರೆ ಇಲ್ಲಿ 403 ಸ್ಥಾನಗಳಿದ್ದು, ಬಹುಮತಕ್ಕೆ ಬೇಕಾದ 202 ಸ್ಥಾನ ಗಳಿಸುವಲ್ಲಿ ಅದು ವಿಫ‌ಲವಾಗಲಿದೆ. ಅಂದರೆ ಅಮಿತ್‌ ಶಾ ನೇತೃತ್ವದ ಬಿಜೆಪಿ 192 ರಿಂದ 196 ಸ್ಥಾನ ಗಳಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದೆ. ಇದೇ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಮೈತ್ರಿಕೂಟ 178ರಿಂದ 182 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಇನ್ನು ಬಿಎಸ್‌ಪಿ ಕಳಪೆ ಪ್ರದರ್ಶನ ನೀಡಲಿದ್ದು 20 ರಿಂದ 24 ಮತ್ತು ಇತರರು 5 ರಿಂದ 9 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. 

ಪಂಜಾಬ್‌
ಈ ರಾಜ್ಯದಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇಲ್ಲಿ ಒಟ್ಟು 117 ಸ್ಥಾನಗಳಿದ್ದು, ಇದರಲ್ಲಿ ಕಾಂಗ್ರೆಸ್‌ 49 ರಿಂದ 51, ಎಎಪಿ 33 ರಿಂದ 35 ಮತ್ತು ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ 28 ರಿಂದ 30 ಹಾಗೂ ಇತರರು 3 ರಿಂದ 5 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದೆ. ವಿಶೇಷವೆಂದರೆ ಇಲ್ಲಿ ಎಎಪಿ ಎರಡನೇ ಸ್ಥಾನಕ್ಕೆ ಬರಲಿದೆ. ಆದರೆ ಬಹುಮತಕ್ಕೆ ಬೇಕಾದ 59 ಸ್ಥಾನಗಳನ್ನು ಯಾರೂ ಗೆಲ್ಲಲ್ಲ ಎಂದಿದೆ. 

ಉತ್ತರಾಖಂಡ
ಸಮೀಕ್ಷೆ ನಡೆಸಲಾದ ನಾಲ್ಕೂ ರಾಜ್ಯಗಳಲ್ಲಿ ಉತ್ತರಾಖಂಡಕ್ಕೆ ಮಾತ್ರ ಪೂರ್ಣ ಫ‌ಲಿತಾಂಶ ಸಿಕ್ಕಿದೆ. 70 ಸದಸ್ಯ ಬಲದ ಈ ರಾಜ್ಯದಲ್ಲಿ ಬಿಜೆಪಿ 37 ರಿಂದ 39, ಕಾಂಗ್ರೆಸ್‌ 27 ರಿಂದ 29, ಬಿಎಸ್‌ಪಿ 1 ರಿಂದ 3 ಸೀಟು ಗೆಲ್ಲಬಹುದು ಎಂದು ಅಂದಾಜಿಸಿದೆ. ಇತರರು 1 ರಿಂದ 3ರಲ್ಲಿ ಗೆಲ್ಲಬಹುದು ಎಂದು ಹೇಳಿದೆ. 

ಗೋವಾ
ಗೋವಾದಲ್ಲೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬುದು ಈ ಸಮೀಕ್ಷೆಯ ಸಾರಾಂಶ. 40 ಸದಸ್ಯರ ಬಲದ ಇಲ್ಲಿ ಬಿಜೆಪಿ 17 ರಿಂದ 19, ಕಾಂಗ್ರೆಸ್‌ 11 ರಿಂದ 13 ಮತ್ತು ಎಎಪಿ 2 ರಿಂದ 4 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ. ಬಿಜೆಪಿಯ ಹಳೇ ಮೈತ್ರಿ ಪಕ್ಷ ಮಹಾರಾಷ್ಟ್ರ ಗೋಮಾಂತಕ್‌ ಪಕ್ಷ 3 ರಿಂದ 5ರಲ್ಲಿ ಗೆಲ್ಲಬಹುದು, ಅದೇ ರೀತಿ ಸ್ವತಂತ್ರರು 2 ಮತ್ತು ಇತರರು 1 ರಿಂದ 3 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಿದೆ.

Advertisement

ಸಮೀಕ್ಷೆ ನಡೆಸಲಾದ ನಾಲ್ಕೂ ರಾಜ್ಯಗಳಲ್ಲಿ ಉತ್ತರಾಖಂಡಕ್ಕೆ ಮಾತ್ರ ಪೂರ್ಣ ಫ‌ಲಿತಾಂಶ ಸಿಕ್ಕಿದೆ. 70 ಸದಸ್ಯ ಬಲದ ಈ ರಾಜ್ಯದಲ್ಲಿ ಬಿಜೆಪಿ 37 ರಿಂದ 39, ಕಾಂಗ್ರೆಸ್‌ 27 ರಿಂದ 29, ಬಿಎಸ್‌ಪಿ 1 ರಿಂದ 3 ಸೀಟು ಗೆಲ್ಲಬಹುದು ಎಂದು ಅಂದಾಜಿಸಿದೆ. ಇತರರು 1 ರಿಂದ 3ರಲ್ಲಿ ಗೆಲ್ಲಬಹುದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next