ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ತಮ್ಮ ಮಗಳ ಹೆರಿಗೆಗಾಗಿ ನಾನ್-ಎಸಿ ಆಸ್ಪತ್ರೆಯ ಕೊಠಡಿಯನ್ನು ಕಾಯ್ದಿರಿಸಿದ್ದಾರೆ ಎಂದು ಕೋಪಗೊಂಡ ಮಹಿಳೆಯ ಮನೆಯವರು ಮಗಳ ಅತ್ತೆ, ಮಾವ ಹಾಗೂ ಗಂಡನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಎರಡು ಕುಟುಂಬಗಳು ಆಸ್ಪತ್ರೆಯ ಹೊರಗೆ ನಡುರಸ್ತೆಯಲ್ಲೇ ಹೊಡೆದಾಡಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಗಂಡನ ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಈ ಆಸ್ಪತ್ರೆಯ ಕೋಣೆಯಲ್ಲಿ ಹವಾನಿಯಂತ್ರಣವಿರಲಿಲ್ಲ ಇದನ್ನು ತಿಳಿದ ಗರ್ಭಿಣಿ ಮಹಿಳೆಯ ಕುಟುಂಬವು ಆಕೆಯ ಗಂಡನ ಪೋಷಕರು ಮತ್ತು ಸಹೋದರಿಯರನ್ನು ನಾಡು ರಸ್ತೆಯಲ್ಲಿ ಥಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಕುಟುಂಬದ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಘಟನೆ ಕುರಿತು ಗರ್ಭಿಣಿ ಮಹಿಳೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನ್ನ ಮಗಳನ್ನು ಹೆರಿಗೆ ಮಾಡಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹವಾನಿಯಂತ್ರಣ ಇಲ್ಲದ ಕೊಠಡಿಯಲ್ಲಿ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ ಈ ವಿಚಾರವಾಗಿ ಮಾತನಾಡಿದ ನಮ್ಮನ್ನೇ ಮಹಿಳೆಯ ಗಂಡನ ಮನೆಯವರು ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಬಳಿಕ ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜಿ ಸಂಧಾನದ ಮೂಲಕ ದೂರು ಹಿಂಪಡೆದಿದ್ದಾರೆ.