Advertisement

ಕಸಬ್‌ ಅಂದ್ರೆ ಕಂಪ್ಯೂಟರ್‌,ಸ್ಮಾರ್ಟ್‌ಫೋನ್‌, ಮಕ್ಕಳು

10:26 AM Feb 27, 2017 | |

ಲಕ್ನೋ: ಕಾಂಗ್ರೆಸ್‌, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯನ್ನು “ಕಸಬ್‌’ ಎಂದು ಕರೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ತಿರುಗೇಟು ನೀಡುವ ಸರದಿ ಈಗ ಎಸ್ಪಿ ಸಂಸದೆ ಡಿಂಪಲ್‌ ಯಾದವ್‌ರದ್ದು. 

Advertisement

ಉತ್ತರ­ಪ್ರದೇಶದ ಜೌನ್‌ಪುರದಲ್ಲಿ ಭಾನುವಾರ ರ್ಯಾಲಿಯ­ನ್ನುದ್ದೇಶಿಸಿ ಮಾತನಾಡಿದ ಅವರು, ಅಮಿಶ್‌ ಶಾರ “ಕಸಬ್‌’ಗೆ ಮರು­ವ್ಯಾಖ್ಯಾನ ಮಾಡಿದ್ದಾರೆ. “ಬಿಜೆ­ಪಿಯು “ಕ’ ಎಂದರೆ ಕಾಂಗ್ರೆಸ್‌ ಎನ್ನುತ್ತದೆ. ಆದರೆ, ನಿಮ್ಮ ಅಖೀಲೇಶ್‌ ಭಯ್ನಾ ಹೇಳುತ್ತಾರೆ: “ಕ’ ಅಂದರೆ “ಕಂಪ್ಯೂಟರ್‌’, “ಸ’ ಅಂದರೆ ಸ್ಮಾರ್ಟ್‌ ಫೋನ್‌ ಹಾಗೂ “ಬಿ’ ಎಂದರೆ “ಬಚ್ಚೇ'(ಮಕ್ಕಳು). 

ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್‌ಟಾಪ್‌ ನೀಡುತ್ತಿ­ರುವ ಎಸ್ಪಿ ಸರ್ಕಾರ, ಇನ್ನು ಅದರ ಜೊತೆಗೆ ಸ್ಮಾರ್ಟ್‌ಫೋನ್‌ ಕೂಡ ನೀಡಲಿದೆ. ಇದರಿಂದ ಮಕ್ಕಳು ಸರ್ಕಾರದ ನೀತಿಗ­ಳಿಂದ ಹಿಡಿದು ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿಯನ್ನು ಪಡೆಯ­ಬಹುದು,’ ಎಂದಿದ್ದಾರೆ ಡಿಂಪಲ್‌.

ಯುವಕರ ಮೈತ್ರಿ: ಇನ್ನೊಂದೆಡೆ, ಎಸ್ಪಿ-ಕಾಂಗ್ರೆಸ್‌ ಮೈತ್ರಿಯನ್ನು ಎರಡು ಭ್ರಷ್ಟ ಕುಟುಂಬಗಳ ಮೈತ್ರಿ ಎಂದಿರುವ ಬಿಜೆಪಿಗೆ ಪ್ರತಿಕ್ರಿಯಿ­ಸಿರುವ ಸಿಎಂ ಅಖೀಲೇಶ್‌, ನಮ್ಮದು ಯುವಜನತೆಯ ಮೈತ್ರಿ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದಿದ್ದಾರೆ.
ಇಂದು 5ನೇ ಹಂತದ ಮತದಾನ: ಉತ್ತರಪ್ರದೇಶದ 5ನೇ ಹಂತದ ಮತದಾನ ಸೋಮವಾರ ನಡೆಯ­ಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರೀಯ ಪಡೆಗಳು ಪಥಸಂಚಲನ ನಡೆಸಿವೆ. ನೇಪಾಳ ಗಡಿ ಭಾಗದ 5 ಕ್ಷೇತ್ರಗಳು ಸೇರಿದಂತೆ 11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಮತ­ದಾನ ನಡೆಯಲಿದೆ. ರಾಹುಲ್‌ ಗಾಂಧಿ ಅವರ ತವರುಕ್ಷೇತ್ರ ಅಮೇಠಿಯೂ ಇದರಲ್ಲಿ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next