ಲಕ್ನೋ: ಪ್ರಥಮ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಮುಂದಾಗಿದ್ದು, ತಮ್ಮ ಕುಟುಂಬದ ಬಾಹುಳ್ಯಹೊಂದಿರುವ ಕರ್ತಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷ ಶನಿವಾರ (ಜನವರಿ 22) ಘೋಷಿಸಿದೆ.
ಇದನ್ನೂ ಓದಿ:ರೈತರ ನೀರಾವರಿ ಪೈಪ್‌ಲೈನ್ ಕಟ್ ! ಸರ್ಕಾರದ ಮಟ್ಟದಲ್ಲೇ ಒಪ್ಪಂದಕ್ಕೆ ಕುತ್ತು?
ನಾನಿಂದು ಔಪಚಾರಿಕವಾಗಿ ಘೋಷಿಸುತ್ತಿದ್ದು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕರ್ತಾಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಅಖಿಲೇಶ್ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಪಡೆಯಲಿದ್ದಾರೆ ಎಂದು ರಾಮ್ ಗೋಪಾಲ್ ಯಾದವ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಅಜಂಗಢದ ನಿವಾಸಿಗಳ ಅನುಮತಿ ಪಡೆದ ನಂತರ ತಾನು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕರ್ತಾಲಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅಖಿಲೇಶ್ ಈ ಮೊದಲು ಪ್ರತಿಕ್ರಿಯೆ ನೀಡಿದ್ದರು.
ಅಖಿಲೇಶ್ ಯಾದವ್ ಹತಾಶೆ ಮತ್ತು ಭೀತಿಗೊಳಗಾಗಿದ್ದು, ಈ ಮೊದಲು ಅಖಿಲೇಶ್ ಅವರು ಅಜಂಗಢ್ ನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಹರಿದಾಟಿತ್ತು.