Advertisement

99 ಸೀಟುಗಳ ಎಸ್‌ಪಿ ಕೊಡುಗೆಗೆ ಕಾಂಗ್ರೆಸ್‌ ತಿರಸ್ಕಾರ; ಮೈತ್ರಿ ಕಷ್ಟ

07:37 PM Jan 21, 2017 | Team Udayavani |

ಲಕ್ನೋ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ 110 ಸೀಟುಗಳನ್ನು ನೀಡುವಂತೆ ಕೇಳಿಕೊಂಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿಯಾಗಿರುವ ಅಖೀಲೇಶ್‌ ಯಾದವ್‌ 99 ಸೀಟುಗಳನ್ನು ಕೊಟ್ಟಿದ್ದು  ಅದನ್ನು ಕಾಂಗ್ರೆಸ್‌ ತಿರಸ್ಕರಿಸಿದೆ. ಇದರಿಂದಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷದೊಳಗಿನ ಚುನಾವಣಾ ಮೈತ್ರಿ ಸಂಕಷ್ಟಕ್ಕೆ ಗುರಿಯಾಗಿದೆ.

Advertisement

ಸೀಟು ಹಂಚಿಕೆ ಕುರಿತಾಗಿ ಸಮಾಜವಾದಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಕಳೆದ ಕೆಲವು ದಿನಗಳಿಂದ ಹಲವು ಸುತ್ತಿನ ಮಾತುಕತೆ -ಸಂಧಾನ ನಡೆಯುತ್ತಿತ್ತು. ಆದರೆ ಅವ್ಯಾವುವೂ ಫ‌ಲಕಾರಿಯಾಗಿಲ್ಲ. ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿರುವುದಕ್ಕೆ ಉಭಯ ಪಕ್ಷಗಳು ಪರಸ್ಪರರನ್ನು ದೂರಿಕೊಂಡಿವೆ. 

ಕಾಂಗ್ರೆಸ್‌ ಪಕ್ಷದ ಸಲಹೆಗಾರರಾಗಿರುವ ಪ್ರಶಾಂತ್‌ ಕಿಶೋರ್‌ ಅವರು ಇಂದು ಸಂಜೆ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರೂ ಅದು ಫ‌ಲಕಾರಿಯಾಗಿಲ್ಲ. 

ಉತ್ತರ ಪ್ರದೇಶದ ನಿರ್ಗಮನ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ 28 ಶಾಸಕರನ್ನು ಹೊಂದಿದೆ; ಹಾಗಿರುವಾಗ ಅದು ತನಗೆ 100ಕ್ಕೂ ಹೆಚ್ಚು ಸೀಟುಗಳು ಬೇಕೆಂದು ಒತ್ತಾಯಿಸುವುದಕ್ಕೆ ಯಾವ ಸಮರ್ಥನೆ ಇದೆ ಎಂದು ಸಮಾಜವಾದಿ ಪಕ್ಷದ ಮೂಲಗಳು ಪ್ರಶ್ನಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next