Advertisement

ನಾಳೆ ಐದನೇ ಹಂತದ ಮತ: ಉ.ಪ್ರ: 12 ಜಿಲ್ಲೆಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

11:12 PM Feb 25, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಐದನೇ ಹಂತದಲ್ಲಿ ಫೆ. 27ರ ರವಿವಾರ ಮತದಾನ ನಡೆಯಲಿದ್ದು ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿತು.

Advertisement

ರವಿವಾರ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 692 ಅಭ್ಯರ್ಥಿಗಳ ಭವಿಷ್ಯವನ್ನು 2.24 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗ್ಢ, ಕೌಶಂಬಿ, ಪ್ರಯಾಗ್‌ರಾಜ್‌, ಬರಾಬಂಕಿ, ಬಹ್ರೈಚ್‌, ಶ್ರಾವಸ್ಥಿ ಮತ್ತು ಗೋಂಡಾ ಜಿಲ್ಲೆಗಳಲ್ಲಿ ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿ ಮತ್ತು ರಾಯ್‌ಬರೇಲಿ ಹಾಗೂ ಅಯೋಧ್ಯೆಯಲ್ಲೂ ಭಾನುವಾರ ಮತದಾನ ನಡೆಯಲಿದೆ.

ಉಪಮುಖ್ಯ ಮಂತ್ರಿ ಕೇಶವ ಪ್ರಸಾದ್‌ ಮೌರ್ಯ, ಸಚಿವರಾದ ಸಿದ್ಧಾರ್ಥ ನಾಥ್‌ ಸಿಂಗ್‌, ರಾಜೇಂದ್ರ ಸಿಂಗ್‌ ಅಲಿ ಯಾಸ್‌ ಮೋತಿ ಸಿಂಗ್‌, ನಂದ ಗೋಪಾಲ ಗುಪ್ತ ನಾಡಿ, ರಾಮಪತಿ , ಚುನಾವಣ ಕಣದಲ್ಲಿರುವ ಪ್ರಮುಖರು.
5ನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ, ರಾಜನಾಥ್‌ ಸಿಂಗ್‌, ಅಮಿತ್‌ ಶಾ ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next