ಉತ್ತರ ಪ್ರದೇಶ: ವೈದ್ಯನೊಬ್ಬ ತನ್ನ ಪತ್ನಿಯನ್ನು ಕೊಂದು ಬಳಿಕ ಸುಮಾರು 400 ಕಿಲೋ ಮೀಟರ್ ದೂರದಲ್ಲಿ ಆಕೆಯನ್ನು ಸುಟ್ಟುಹಾಕಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ವಂದನಾ ಆವಸ್ಥಿ (28) ಎಂದು ಹೇಳಲಾಗಿದ್ದು ಅಸಲಿಗೆ ಈಕೆಯೂ ವೃತ್ತಿಯಲ್ಲಿ ವೈದ್ಯೆಯಾಗಿದ್ದರೆ.
ಆರೋಪಿ ಪತಿ ಅಭಿಷೇಕ್ ಅವಸ್ಥಿ ಸದ್ಯ ಪೊಲೀಸರ ವಶದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಉತ್ತರ ಪ್ರದೇಶದ ಲಖಿಂಪುರ ಖೇರಿಯ ವೈದ್ಯ ಅಭಿಷೇಕ್ ಅವಸ್ಥಿ ಹಾಗೂ ಪತ್ನಿ ಪತ್ನಿ ವಂದನಾ ಅವಸ್ತಿ ಕೆಲ ವರ್ಷಗಳ ಹಿಂದೆಯಷ್ಟೆ ಮದುವೆಯಾಗಿದ್ದು ಇಬ್ಬರು ಆಯುರ್ವೇದ ವೈದ್ಯರಾಗಿದ್ದಾರೆ, ಕೆಲವು ತಿಂಗಳುಗಳ ಹಿಂದೆ ತಮ್ಮದೇ ಸ್ವಂತ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಿದ್ದು ಇದಕ್ಕೆ ‘ಗೌರಿ ಚಿಕಿತ್ಸಾಲಯ’ ಎಂದು ಹೆಸರಿಟ್ಟಿದ್ದರು ಈ ನಡುವೆ ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ, ಅಲ್ಲದೆ ವಂದನಾ ತಾನು ಆಯುರ್ವೇದದಲ್ಲಿ ಇನ್ನಷ್ಟು ಹೆಚ್ಚಿನ ವಿಚಾರಗಳನ್ನು, ಜೊತೆಗೆ ಚಿಕಿತ್ಸಾ ವಿಧಾನಗಳನ್ನು ಕಲಿಯುವ ಉದ್ದೇಶದಿಂದ ಬೇರೊಂದು ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಪತಿಯೊಂದಿಗೆ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ.
ಆದರೆ ಅದೇನಾಯಿತೋ ಗೊತ್ತಿಲ್ಲ ಒಂದು ದಿನ ಇಬ್ಬರ ನಡುವೆ ಜಗಳ ಸಂಭವಿಸಿ ಅಭಿಷೇಕ್ ತನ್ನ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ ಇದರಿಂದ ವಂದನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಗಾಬರಿಗೊಂಡ ಪತಿ, ಪತ್ನಿಯ ಮೃತದೇಹವನ್ನು ಒಂದು ಸೂಟ್ ಕೇಸ್ ನಲ್ಲಿ ಹಾಕಿ ಆಸ್ಪತ್ರೆಗೆ ತಂದಿದ್ದಾನೆ ಬಳಿಕ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಯ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಇದನ್ನು 400 ಕಿಲೋಮೀಟರ್ ದೂರದಲ್ಲಿರುವ ಗಢಮುಕ್ತೇಶ್ವರದಲ್ಲಿ ಅಂತ್ಯಸಂಸ್ಕಾರ ಮಾಡಿ ಬರುವಂತೆ ಚಾಲಕನಿಗೆ ಹೇಳಿದ್ದಾನೆ ಅದರಂತೆ ಚಾಲಕ ಅಂತ್ಯಸಂಸ್ಕಾರ ಮಾಡಿ ಬಂದಿದ್ದಾನೆ.
ನಾಪತ್ತೆ ದೂರು: ಇತ್ತ ಅಂತ್ಯ ಸಂಸ್ಕಾರ ನಡೆದ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಪತ್ನಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾನೆ, ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಪತಿಯ ಬಳಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಬಳಿಕ ನೆರೆ ಹೊರೆಯವರ ಬಳಿ ವಿಚಾರಿಸಿದಾಗ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು ಎಂದು ಹೇಳಿದ್ದಾರೆ, ಇಷ್ಟು ವಿಚಾರ ಪಡೆದ ಪೊಲೀಸರು ವೈದ್ಯನ ಮೇಲೆ ನಿಗಾ ಇರಿಸಿದ್ದರು, ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ತಾನೇ ಪತ್ನಿಯನ್ನು ಕೊಂದಿರುವುದಾಗಿ ಬಳಿಕ 400 ಕಿಲೋಮೀಟರ್ ದೂರದಲ್ಲಿ ಸುಟ್ಟು ಹಾಕಲು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಈ ಕೊಲೆ ನಡೆಸಲು ತನ್ನ ತಂದೆಯು ಸಹಕರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಸದ್ಯ ವೈದ್ಯ ಹಾಗು ಆತನ ತಂದೆ ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: ಚತ್ತೀಸ್ ಗರ್ : ಆ ಒಂದು ದಿನ ಮದ್ಯದಂಗಡಿ ಬಂದ್ ಗೆ ಡೀಸಿ ಆದೇಶ !