Advertisement

Uttar Pradesh: ಮುಸ್ಲಿಮರು ಹೊಸ ವರ್ಷ ಆಚರಿಸಬಾರದು: ಫ‌ತ್ವಾ ಹೊರಡಿಸಿದ ಧರ್ಮಗುರು

12:26 AM Dec 31, 2024 | Team Udayavani |

ಬರೇಲಿ: ಮುಸ್ಲಿಮರು ಹೊಸ ವರ್ಷ ಆಚರಿಸ­ಬಾರದು ಎಂದು ಉತ್ತರ ಪ್ರದೇಶದ ಧರ್ಮಗುರು ವೊಬ್ಬರು ಫತ್ವಾ ಹೊರಡಿಸಿದ್ದಾರೆ.

Advertisement

ಅಖಿಲ ಭಾರತ ಮುಸ್ಲಿಂ ಜಮಾತ್‌ ಮೌಲಾನಾ ರಾಷ್ಟ್ರೀಯ ಅಧ್ಯಕ್ಷ ಶಹಾಬುದ್ದೀನ್‌ ರಜ್ವಿ ಫತ್ವಾ, ಹೊಸ ವರ್ಷದಂದು ಶುಭಾಶಯ ಕೋರುವುದು ಮತ್ತು ಪಾರ್ಟಿ ಮಾಡು­ವುದು ಇಸ್ಲಾಮಿಕ್‌ ಧಾರ್ಮಿಕ ಪದ್ಧತಿ ಅಲ್ಲ. ಜನವ­ರಿಯಿಂದ ಹೊಸ ವರ್ಷದ ಪ್ರಾರಂಭ ಕ್ರಿಶ್ಚಿಯನ್‌ ಧಾರ್ಮಿಕ ಪದ್ಧತಿ.

ಹೀಗಾಗಿ ಇಸ್ಲಾಂ ಅಂತಹ ಕಾರ್ಯಕ್ರಮ ಕಟ್ಟುನಿಟ್ಟಾಗಿ ನಿಷೇಧಿ ಸುತ್ತದೆ ಎಂದು ಫತ್ವಾ ಹೊರಡಿಸಲಾಗಿದೆ. ಹೊಸ ವರ್ಷದ ಆಚರಣೆ ವೇಳೆ ಹೋಟೆಲ್‌ಗ‌ಳಲ್ಲಿ ನೃತ್ಯಗಳು, ಅಶ್ಲೀಲತೆ, ಗೂಂಡಾಗಿರಿ, ಮದ್ಯಪಾನ, ಬೆಟ್ಟಿಂಗ್‌ ತರಹದ ಚಟುವಟಿಕೆ ನಡೆಯುತ್ತದೆ. ಇವು ಇಸ್ಲಾಮಿಕ್‌ ಷರಿಯತ್‌ನಲ್ಲಿ ನಿಷೇ ಧಕ್ಕೊಳಪಟ್ಟಿವೆ ಎಂದು ರಜ್ವಿ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next