ಪ್ರತಾಪಗಢ (ಉತ್ತರ ಪ್ರದೇಶ) : ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ವಿಚಿತ್ರವಾಗಿ ನೆರವೇರುತ್ತಿವೆ. ಕೆಲವು ಮದುವೆ ದಿಬ್ಬಣಗಳಲ್ಲಿ ವಧು-ವರರು ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆ ದಿನದಂದು ಬಂದೂಕಿನಿಂದ ಗುಂಡು ಹಾರಿಸಿದ್ದು, ಈಕೆಯ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.
ಪ್ರತಾಪಗಢಲ್ಲಿ ಕಳೆದ ಭಾನುವಾರ ಮದುವೆ ನಡೆದಿದ್ದು, ಈ ಮದುವೆಯಲ್ಲಿ ರೂಪ ಪಾಂಡೆ ಎಂಬುವವರು ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ತನ್ನ ಸಂಬಂಧಿ ರಾಮವಾಸ್ ಪಾಂಡೆ ಎಂಬುವವರ ಪರವಾನಗಿ ಪಡೆದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದಾಳೆ.
ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದುತ್ತಿದ್ದಂತೆ ಇದನ್ನು ಗಮನಿಸಿದ ಪೊಲೀಸರು ವಧುವಿನ ಮೇಲೆ ಭಾರತೀಯ ದಂಡ ಸಂಹಿತಿ ಪ್ರಕಾರ ದೂರನ್ನು ದಾಖಲಿಸಿದ್ದಾರೆ. ಅಲ್ಲದೆ ಆ ಬಂದೂಕಿನ ಪರವಾನಗಿಯನ್ನು ರದ್ದು ಮಾಡಲಾಗಿದೆ.
ಇನ್ನು ಮದುವೆ ಸಮಾರಂಭದಲ್ಲಿ ನಾಲ್ಕು ದೊಡ್ಡ ಗಾತ್ರದ ಕೇಕ್ ಗಳನ್ನು ಕತ್ತರಿಸಲಾಗಿದೆ. ಆ ವೇಳೆ ಗನ್ ಸದ್ದು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.