Advertisement

ಕನ್ನಡಕ ಇಲ್ಲದೇ ಪತ್ರಿಕೆ ಓದಲು ವಿಫಲನಾದ ವರ…ಮಂಟಪದಲ್ಲೇ ವಿವಾಹ ರದ್ದುಪಡಿಸಿದ ವಧು!

03:45 PM Jun 26, 2021 | Team Udayavani |

ಲಕ್ನೋ: ತಾನು ಕೈಹಿಡಿಯುತ್ತಿರುವ ವರನಿಗೆ ದೃಷ್ಟಿ ದೋಷವಿದೆ, ಅಲ್ಲದೇ ಕನ್ನಡಕ ಇಲ್ಲದೇ ದಿನಪತ್ರಿಕೆ ಕೂಡಾ ಓದಲು ಸಾಧ್ಯವಿಲ್ಲ ಎಂದು ತಿಳಿದ ವಧು ಕೊನೆ ಕ್ಷಣದಲ್ಲಿ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಲಾಕ್‌ ಡೌನ್‌ ಟೈಮಲ್ಲೊಂದು ‘ಅನಿರೀಕ್ಷಿತ’ ಸಿನಿಮಾ! ಮಿಮಿಕ್ರಿ ದಯಾನಂದ್ ನಿರ್ದೇಶನ

ಸದಾರ್ ಕೋಟ್ವಾಲಿ ಪ್ರದೇಶದ ಜಮಾಲ್ಬುರ್ ಗ್ರಾಮದ ನಿವಾಸಿ ಅರ್ಜುನ್ ಸಿಂಗ್ ತನ್ನ ಮಗಳು ಅರ್ಚನಾಳ ವಿವಾಹವನ್ನು ಬನ್ಶಿ ಗ್ರಾಮದ ಶಿವಂ ಎಂಬ ಯುವಕನ ಜತೆ ನಡೆಸಲು ನಿಶ್ಚಯಿಸಿದ್ದರು. ಶಿವಂ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಯುವಕನಾಗಿದ್ದರಿಂದ ಮದುವೆಯನ್ನು ನಿಶ್ಚಯಿಸಿರುವುದಾಗಿ ವರದಿ ವಿವರಿಸಿದೆ.

ವಧು, ವರನ ಮನೆಯವರು ಸೇರಿ ವಿವಾಹ ದಿನಾಂಕವನ್ನು ಅಂತಿಮಗೊಳಿಸಿದ್ದರು. ಮತ್ತು ಎಲ್ಲಾ ಸಿದ್ಧತೆಗಳನ್ನು ನಡೆಸತೊಡಗಿದ್ದರು. ಮತ್ತೊಂದೆಡೆ ಮೆಹಂದಿ ಕಾರ್ಯಕ್ರಮವೂ ನಡೆಯಿತು. ನಂತರ ವರನಿಗೆ ವಧುನಿನ ಕುಟುಂಬ ಬೈಕ್ ಅನ್ನು ಉಡುಗೊರೆಯಾಗಿ ನೀಡಿತ್ತು.

ಮದುವೆ ದಿನ ಶಿವಂ ತನ್ನ ಬರಾತ್ ಮೆರವಣಿಗೆಯೊಂದಿಗೆ ಅರ್ಚನಾ ಮನೆಗೆ ಬಂದಿದ್ದು, ವರ ಕನ್ನಡ ಧರಿಸಿರುವುದು ಕಂಡು ಬಂದಿತ್ತು ಎಂದು ಸಿಂಗ್ ತಿಳಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

Advertisement

ಈ ಹಿನ್ನೆಲೆಯಲ್ಲಿ ವರ ಶಿವಂಗೆ ದೃಷ್ಟಿ ಕಡಿಮೆ ಇದ್ದಿರುವುದನ್ನು ವಧು ಪತ್ತೆ ಹಚ್ಚಿದ್ದಳು, ಇದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವಧು ಅರ್ಚನಾ, ವರನ ಬಳಿ ಕನ್ನಡವಿಲ್ಲದೇ ಹಿಂದಿ ಪತ್ರಿಕೆಯನ್ನು ಓದುವಂತೆ ಕೇಳಿಕೊಂಡಳು. ಆದರೆ ಆತನಿಗೆ ಕನ್ನಡಕ ಇಲ್ಲದೇ ಪತ್ರಿಕೆ ಓದಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರ್ಚನಾ ಮದುವೆಯನ್ನು ನಿಲ್ಲಿಸಿದ್ದಳು. ದೃಷ್ಟಿ ದೋಷ ಇರುವ ವ್ಯಕ್ತಿಯನ್ನು ವಿವಾಹವಾಗಲು ಆಕೆಗೆ ಇಷ್ಟವಿಲ್ಲ, ಕುಟುಂಬ ಸದಸ್ಯರು ಕೂಡಾ ಆಕೆಯ ನಿರ್ಧಾರವನ್ನು ಗೌರವಿಸಿ ವಿವಾಹವನ್ನು ರದ್ದುಗೊಳಿಸಿರುವುದಾಗಿ ವರದಿ ತಿಳಿಸಿದೆ.

ವಿವಾಹ ಮುರಿದು ಬಿದ್ದ ನಂತರ ವಧುವಿನ ಕುಟುಂಬ ವರದಕ್ಷಿಣೆ ರೂಪದಲ್ಲಿ ನೀಡಲಾದ ನಗದು ಮತ್ತು ಮೋಟಾರ್ ಸೈಕಲ್ ಅನ್ನು ಮರಳಿಸುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೆ ವರನ ಕುಟುಂಬ ನಿರಾಕರಿಸಿರುವುದಾಗಿ ವರದಿ ಹೇಳಿದೆ. ಬಳಿಕ ವಧುವಿನ ಕುಟುಂಬ ಔರೈಯಾ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ವರ ಮತ್ತು ಆತನ ಸಂಬಂಧಿಕರ ವಿರುದ್ಧ ಎಫ್ ಐಆರ್ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next