Advertisement

ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿಯಾಗಿ ಚರಂಡಿಗೆ : ಐವರ ಸಾವು, 17 ಮಂದಿಗೆ ಗಾಯ

09:51 AM Jun 18, 2019 | Team Udayavani |

ಬಲರಾಮಪುರ, ಉತ್ತರ ಪ್ರದೇಶ : ಇಂದು ಸೋಮವಾರ ಇಲ್ಲಿ ಟ್ರ್ಯಾಕ್ಟರ್‌ ಟ್ರಾಲಿಯೊಂದು ಪಲ್ಟಿಯಾಗಿ ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದ ಅವಘಡದಲ್ಲಿ ಟ್ರಾಲಿಯಲ್ಲಿದ್ದವರ  ಪೈಕಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಮೃತಪಟ್ಟು ಇತರ 17 ಮಂದಿ ಗಾಯಗೊಂಡರು.

Advertisement

ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭೀರವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗೂಡಿಟ್ಟಿಗೆ ಕಾರ್ಮಿಕರು ಲೊಹೇನ್‌ಪಾಣಿಯಾ ಗ್ರಾಮಕ್ಕೆ ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ಹೋಗುತ್ತಿದ್ದಾಗ ಕೋವಪುರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಡಿಮೇಲಾಗಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಭರತ್‌ 25, ಆತನ ಪತ್ನಿ ರೇಶಮ್‌ 23, ಪುತ್ರ ನನ್‌ಹು (2), ಸತೀಶ್‌ (3) ಮತ್ತು ನಂದಿನಿ (1) ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next