Advertisement

Ayodhya Hotels: 3 ದಿನದಲ್ಲಿ ಹೋಟೆಲ್‌ಗ‌ಳಿಗೆ 20 ಕೋಟಿ ರೂ. ಆದಾಯ

09:52 AM Jan 26, 2024 | Team Udayavani |

ಅಯೋಧ್ಯೆ: ಪ್ರಾಣ ಪ್ರತಿಷ್ಠೆಯ ಬಳಿಕ ಅಯೋಧ್ಯೆಯು ಹೊಸ ಆಧ್ಯಾತ್ಮಿಕ ಹಬ್‌ ಆಗಿ ರೂಪುಗೊಳ್ಳುತ್ತಿದ್ದು, ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದು ಅಲ್ಲಿನ ಆತಿಥ್ಯ ಕ್ಷೇತ್ರಕ್ಕೆ ವರವಾಗಿ ಪರಿಣಮಿಸಿದೆ.

Advertisement

ಜ.22ರಿಂದ 24ರವರೆಗೆ ಅಂದರೆ ಕೇವಲ 3 ದಿನಗಳಲ್ಲಿ ಅಯೋಧ್ಯೆಯ ಹೋಟೆಲ್‌ಗ‌ಳಿಗೆ ಸುಮಾರು 20 ಕೋಟಿ ರೂ.ಗಳಷ್ಟು ಆದಾಯ ಹರಿದುಬಂದಿದೆ. ಇದೊಂದು ದಾಖಲೆಯೇ ಸರಿ ಎಂದು ಫೈಜಾಬಾದ್‌ ಹೋಟೆಲ್‌ ಸಂಘದ ಅಧ್ಯಕ್ಷ ಶರದ್‌ ಕಪೂರ್‌ ಹೇಳಿದ್ದಾರೆ. ಜತೆಗೆ, ಹಿಂದೆಂದೂ ಇಷ್ಟೊಂದು ಆದಾಯ ಬಂದಿದ್ದಿಲ್ಲ. ಎಲ್ಲ ಹೋಟೆಲ್‌ಗ‌ಳ ಮುಂದೆಯೂ “ಖಾಲಿ ಇಲ್ಲ’ ಎಂಬ ಫ‌ಲಕಗಳೇ ಕಾಣಿಸುತ್ತಿವೆ.

ಬೇಡಿಕೆ ಹೆಚ್ಚಾದ ಕಾರಣ ಬಹುತೇಕ ಹೋಟೆಲ್‌ನವರು ರೂಂ ಬಾಡಿಗೆಯನ್ನು 4-5 ಪಟ್ಟು ಹೆಚ್ಚಳ ಮಾಡಿದ್ದಾರೆ. ಅಯೋಧ್ಯೆಯ ಒದು ಪ್ರತಿಷ್ಠಿತ ಹೋಟೆಲ್‌, ಸೂಟ್‌ಗೆ(ಐಷಾರಾಮಿ ಕೊಠಡಿ) ಸಾಮಾನ್ಯವಾಗಿ  ಒಂದು ರಾತ್ರಿಗೆ 10,000 ರೂ. ಶುಲ್ಕ ವಿಧಿಸುತ್ತಿತ್ತು. ಈಗ ಈ ಮೊತ್ತವನ್ನು 1.5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಏ.17ರ ರಾಮನವಮಿವರೆಗೂ ಇದೇ ಸ್ಥಿತಿ ಮುಂದುವರಿಯಬಹುದು. ನಂತರದಲ್ಲಿ ಶುಲ್ಕ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು. ಒಟ್ಟಿನಲ್ಲಿ ಇದೆಲ್ಲಾ ಶ್ರೀರಾಮನ ಕೃಪೆ ಎಂದೂ ಕಪೂರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next