ಲಕ್ನೋ : ಉತ್ತರ ಪ್ರದೇಶದಲ್ಲಿ ಅಂತಿಮ ಹಂತದ ಚುನಾವಣೆಯ ಮತದಾನಕ್ಕೆ ಒಂದು ದಿನ ಇರುವಂತೆಯೇ ಇಂದು ಮಂಗಳವಾರ ಲಕ್ನೋದ ಜನದಟ್ಟನೆಯ ಠಾಕೂರ್ ಗಂಜ್ ಪ್ರದೇಶದಲ್ಲಿ ಐಸಿಸ್ ಶಂಕಿತ ಉಗ್ರ ಹಾಗೂ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಉಗ್ರ ನಿಗ್ರಹ ದಳದ ಕಮಾಂಡೋಗಳ ನಡುವೆ ಗುಂಡಿನ ಕಾಳಗ ಇದೀಗ ನಡೆಯುತ್ತಲಿದೆ.
ಈ ಘಟನೆಯ ತಾಜಾ ಬೆಳವಣಿಗೆಗಳ ವಿವರ ಇಲ್ಲಿದೆ :
* ಶಂಕಿತ ಉಗ್ರ ಬಾಡಿಗೆಗೆ ಇರುವ ಕಟ್ಟಡದಲ್ಲಿ ಸಿಲುಕಿಕೊಂಡಿದ್ದು ಕಮಾಂಡೋಗಳು ಕಟ್ಟಡವನ್ನು ಸುತ್ತುವರಿದಿದ್ದಾರೆ.
* ಉತ್ತರ ಪ್ರದೇಶ ಡಿಜಿಪಿ ಅವರು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ), ಐಜಿ, ಎಸ್‌ಟಿಎಫ್, ಐಜಿ ಕಾನೂನು, ಐಜಿ ಕ್ರೈಮ್ ಮತ್ತು ಎಸ್‌ಎಸ್‌ಪಿ ಲಕ್ನೋ ಇವರ ಜತೆಗೆ ಸಭೆ ನಡೆಸುತ್ತಿದ್ದಾರೆ.
Related Articles
* ಕಟ್ಟಡದಲ್ಲಿ ಶಂಕಿತ ಉಗ್ರ ಯಾರನ್ನೂ ಒತ್ತೆ ಸೆರೆಯಲ್ಲಿ ಇರಿಸಿಕೊಂಡಿಲ್ಲ ಎಂಬುದನ್ನು ಉ.ಪ್ರ.ದ ಹೆಚ್ಚುವರಿ ಡಿಜಿಪಿ ದಲ್‌ಜಿತ್ ಸಿಂಗ್ ಚೌಧರಿ ದೃಢೀಕರಿಸಿದ್ದಾರೆ.
* ರಾಜ್ಯದ ವಿವಿಧ ಶಂಕಿತ ತಾಣಗಳಲ್ಲಿ ಉ.ಪ್ರ. ಪೊಲೀಸರು ದಾಳಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
* ಶಂಕಿತ ಉಗ್ರನ ಕೈಯಲ್ಲಿ ಶಸ್ತ್ರಾಸ್ತ್ರಗಳಿವೆ; ಮದ್ದುಗುಂಡುಗಳಿವೆ; ಆದರೆ ಆತ ಒಂಟಿಯಾಗಿದ್ದಾನೆ; ಕಟ್ಟಡದಲ್ಲಿ ಯಾವುದೇ ಒತ್ತೆಯಾಳುಗಳಿಲ್ಲ; ಬೇರೆ ಯಾರೂ ಇಲ್ಲ : ಐಜಿ ಎಟಿಎಸ್.
*ನಾವು ಬಾಗಿಲನ್ನು ಕುಟ್ಟಿದಾಗ ಶಂಕಿತನು ತಾನಿದ್ದ ಕೋಣೆಗೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ; ಆತ ಇನ್ನೂ ಹೊರಗೆ ಬಂದಿಲ್ಲ; ಆಗೀಗ ಎಂಬಂತೆ ಗುಂಡು ಹಾರಿಸುತ್ತಿದ್ದಾನೆ; ನಾವು ಗುಂಡು ಹಾರಿಸುವುದನ್ನು ನಿಲ್ಲಿಸಿದ್ದೇವೆ : ಐಜಿ ಎಟಿಎಸ್.
* ಶಂಕಿತನನ್ನು ಜೀವಂತ ಸೆರೆ ಹಿಡಿಯಲು ನಾವು ಖಾರ ಪುಡಿ ಬಾಂಬ್ ಬಳಸಿಸಿದ್ದೇವೆ; ಆದರೆ ಆತ ಇನ್ನೂ ಹೊರಬಂದಿಲ್ಲ ಆತ ಆಗೀಗ ಎಂಬಂತೆ ಗುಂಡು ಹಾರಿಸುತ್ತಿದ್ದಾನೆ – ಐಜಿ ಎಟಿಎಸ್.
* ಠಾಕೂರ್‌ಗಂಜ್ ಪ್ರದೇಶದಲ್ಲಿ ಶಂಕಿತ ಉಗ್ರನೊಬ್ಬ ಇದ್ದಾನೆ ಎಂಬ ಮಾಹಿತಿ ಇಂದು ಮಂಗಳವಾರ ಬೆಳಗ್ಗೆ ನಮಗೆ ಬಂದಿತ್ತು. ನಾವು ದಾಳಿ ಕಾರ್ಯಾಚರಣೆ ನಡೆಸಿದ್ದೇವೆ: ಉ.ಪ್ರ. ಎಟಿಎಸ್ ಐಜಿ ಆಸೀಮ್ ಅರುಣ್.