Advertisement
ಚುನಾವಣಾ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದೆ. ಮತಗಟ್ಟೆ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂಬ ಭವಿಷ್ಯವಾಣಿ ಹೊರಬಿದ್ದಿದೆ.
Related Articles
ಯುಪಿ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಎನ್ನಲಾಗಿದೆ. 47 ವರ್ಷದ ಮೌರ್ಯ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡ ವ್ಯಕ್ತಿಯಲ್ಲ. ತಳಮಟ್ಟದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಿ, ಗೆಲುವಿನ ಹಾದಿಯತ್ತ ಕೊಂಡೊಯ್ಯಲು ಮೌರ್ಯ ಕಠಿಣ ಶ್ರಮವಹಿಸಿರುವುದಾಗಿ ಮೂಲಗಳು ತಿಳಿಸಿವೆ.
Advertisement
ಮೌರ್ಯ ಸಿಎಂ ಅಭ್ಯರ್ಥಿಯಾಗಿಸುವ ಹಲವು ಲೆಕ್ಕಚಾರ ಬಿಜೆಪಿಗಿದೆ,ಯುಪಿಯಲ್ಲಿ ಕಲ್ಯಾಣ್ ಸಿಂಗ್ ಅವರನ್ನು ನಿರ್ಲಕ್ಷಿಸಿದ ಮೇಲೆ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಆ ಸ್ಥಾನ ತುಂಬುವ ವ್ಯಕ್ತಿ ಬೇಕಾಗಿದ್ದಾರೆ. ಅದಕ್ಕಾಗಿ ಮೌರ್ಯ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವರದಿ ವಿವರಿಸಿದೆ.
ರಾಜನಾಥ ಸಿಂಗ್:ಕೇಂದ್ರದ ಹಾಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದ ಬಿಜೆಪಿಯ ಕೊನೆಯ ಸಿಎಂ ಆಗಿದ್ದರು. 2000&2002ರವರೆಗೆ ಸಿಂಗ್ ಅವರು ಉತ್ತರಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಗಾಜಿಯಾಬಾದ್ ಸಂಸದರಾಗಿರುವ ಸಿಂಗ್ ಅವರು ಈ ಬಾರಿ ಉತ್ತರಪ್ರದೇಶದಲ್ಲಿ ಸುಮಾರು 120 ಚುನಾವಣಾ ರಾಲಿಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಈ ಹಿಂದೆ ಸಿಎಂ ಆಗಿ ಅನುಭವ ಇರುವ ಹಿನ್ನೆಲೆಯಲ್ಲಿ ಯುಪಿ ಸಿಎಂ ಅಭ್ಯರ್ಥಿಯ ರೇಸ್ ನಲ್ಲಿ ಸಿಂಗ್ ಅವರ ಹೆಸರೂ ಮುಂಚೂಣಿಯಲ್ಲಿದೆ. ಮನೋಜ್ ಸಿನ್ನಾ:
ಗಾಜಿಪುರ್ ಲೋಕಸಭಾ ಕ್ಷೇತ್ರದ ಸಂಸದ ಮನೋಜ್ ಸಿನ್ನಾ ಹೆಸರೂ ಕೂಡಾ ಸಿಎಂ ರೇಸ್ ನಲ್ಲಿ ಓಡಾಡುತ್ತಿದೆ. ಬನಾರಸ್ ಹಿಂದೂ ಯೂನಿರ್ವಸಿಟಿಯಲ್ಲಿ ಐಐಟಿ ಹಾಗೂ ಬಿಟೆಕ್, ಎಂಟೆಕ್ ಪದವಿ ಗಳಿಸಿರುವ ಸಿನ್ನಾ ಯುಪಿ ಚುನಾವಣೆಯಲ್ಲಿ ಕಠಿಣ ಪರಿಶ್ರಮ ವಹಿಸಿ ದುಡಿದವರಲ್ಲಿ ಇವರು ಒಬ್ಬರಾಗಿದ್ದಾರೆ.