Advertisement

ಓಟ್‌ ಬ್ಯಾಂಕ್‌ ವಿಪಕ್ಷಗಳ ಆಧಾರ

01:19 AM Feb 25, 2022 | Team Udayavani |

ಅಮೇಠಿ/ಪ್ರಯಾಗ್‌ರಾಜ್‌: ವಿಪಕ್ಷಗಳು ಕೇವಲ ಓಟ್‌ ಬ್ಯಾಂಕ್‌ ಮತ್ತು ವಂಶಪಾರಂಪರ್ಯ ರಾಜಕಾರಣದಲ್ಲೇ ಕೇಂದ್ರೀಕೃತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಉತ್ತರ ಪ್ರದೇಶದ ಅಮೇಠಿ ಮತ್ತು ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ದೇಶಕ್ಕಾಗಿ ಮತ್ತು ಬಡವರ ಹಿತಕ್ಕಾಗಿ ಅವರು ಚಿಂತನೆ ನಡೆಸುವುದೇ ಇಲ್ಲವೆಂದು ದೂರಿದ್ದಾರೆ. 2008ರ ಅಹ್ಮದಾಬಾದ್‌ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿಗೆ ವಿಪಕ್ಷಗಳ ಮುಖಂಡರು ಮೌನ ವಹಿಸಿದ್ದೇಕೆ ಎಂದು ಪ್ರಧಾನಿ ಎರಡೂ ಸ್ಥಳಗಳಲ್ಲಿ ನಡೆಸಿದ ಪ್ರಚಾರ ಭಾಷಣದಲ್ಲಿ ಪ್ರಶ್ನಿಸಿದ್ದಾರೆ.

“ವಿಪಕ್ಷಗಳ ನಾಯಕರಿಗೆ ಓಟ್‌ ಬ್ಯಾಂಕ್‌ ಪ್ರಧಾನ ವಾಗಿರುವುದರಿಂದ ಅವರು, ದೇಶದ ಸೇನೆ ಮತ್ತು ಪೊಲೀಸ್‌ ವ್ಯವಸ್ಥೆಯನ್ನು ಕೂಡ ಅವಮಾನಿಸಲು ಹಿಂಜರಿ ಯಲಾರರು’ ಎಂದು ಕಟುವಾಗಿ ವಾಗ್ಧಾಳಿ ನಡೆಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿಯವರು “2019ರಲ್ಲಿ ಎರಡು ಕೋಟಿ ಮಂದಿ ಮೆಕ್ಕಾಕ್ಕೆ ಭೇಟಿ ನೀಡಿದ್ದರು. ಒಂದು ಕೋಟಿ ಮಂದಿ ವ್ಯಾಟಿಕನ್‌ಸಿಟಿಗೆ ಭೇಟಿ ಕೊಟ್ಟಿದ್ದರು. ಅದೇ ಮಾದ ರಿಯ ವ್ಯವಸ್ಥೆಯನ್ನು ದೇಶದಲ್ಲಿ ಭಕ್ತರಿಗೆ ಕಲ್ಪಿಸಿಕೊಟ್ಟಿದ್ದರೆ ಅದನ್ನು ಕೋಮುವಾದದ ಕಣ್ಣಿನಲ್ಲಿ ನೋಡಲಾಗುತ್ತದೆ’ ಎಂದರು.ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರನ್ನು ಉಲ್ಲೇಖೀಸದೆ ಮಾತನಾಡಿದ ಪ್ರಧಾನಿ ಮೋದಿ, ಒಬ್ಬ ವ್ಯಕ್ತಿಯನ್ನು ಅಮೇಥಿಯ ಜನರು 2019ರಲ್ಲಿ ಕೇರಳಕ್ಕೆ ಓಡಿಸಿದ್ದೀರಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next