Advertisement

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ

12:31 AM May 21, 2024 | Team Udayavani |

ಹೊಸದಿಲ್ಲಿ: 5ನೇ ಹಂತದಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿ 6 ರಾಜ್ಯಗಳ 49 ಲೋಕಸಭೆ ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.58.96ರಷ್ಟು ಮತದಾನವಾಗಿದೆ. ಒಂದಿಷ್ಟು ಚಿಕ್ಕ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಒಡಿಶಾ ರಾಜ್ಯದ 5 ಲೋಕಸಭಾ ಕ್ಷೇತ್ರಗಳ ಜತೆಗೆ 35 ವಿಧಾನ ಸಭಾ ಕ್ಷೇತ್ರಗಳಿಗೂ ಮತದಾನ ನಡೆಯಿತು.

Advertisement

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸಚಿ ವರಾದ ರಾಜನಾಥ್‌ ಸಿಂಗ್‌, ಪಿಯೂಷ್‌ ಗೋಯಲ್‌, ಉಜ್ವಲ್‌ ನಿಕಂ, ಸ್ಮತಿ ಇರಾನಿ ಸೇರಿದಂತೆ 695 ಅಭ್ಯರ್ಥಿ ಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರವಾಗಿದೆ. ಮಹಾರಾಷ್ಟ್ರದಲ್ಲಿ ಕನಿಷ್ಠ ಶೇ.53.51, ಪಶ್ಚಿಮ ಬಂಗಾ ಳದಲ್ಲಿ ಗರಿಷ್ಠ ಶೇ.73¬.14 ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಮತದಾನವಾಗಿದೆ. ಶೇ.54.21 ರಷ್ಟು ಮತ ಚಲಾವಣೆಯಾಗಿದೆ. 1984ರ ಬಳಿಕ ಇದೇ 2ನೇ ಅತ್ಯುತ್ತಮ ಮತದಾನ ಎನಿಸಿದೆ. ಆಗ ಶೇ.58.84ರಷ್ಟು ಮತದಾನವಾಗಿತ್ತು. 5ನೇ ಹಂತದಲ್ಲಿ 4.26 ಕೋಟಿ ಮಹಿಳೆಯರು ಸೇರಿದಂತೆ 8.95 ಕೋಟಿ ಅರ್ಹ ಮತದಾರಿದ್ದಾರೆ. ಒಟ್ಟು 94,732 ಮತದಾನ ಕೇಂದ್ರ ಗಳಿಗೆ 9.47 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬಿಜೆಪಿಯಿಂದ ಮತದಾನಕ್ಕೆ ಅಡ್ಡಿ-ಕಾಂಗ್ರೆಸ್‌: ರಾಹುಲ್‌ ಗಾಂಧಿ ಸ್ಪರ್ಧಿಸಿರುವ ರಾಯ್‌ಬರೇಲಿ ಕ್ಷೇತ್ರದ ರಾಹಿ ಬ್ಲಾಕ್‌ನ 3 ಬೂತ್‌ಗಳಲ್ಲಿ ಬಿಜೆಪಿಯು ಮತದಾರರಿಗೆ ವೋಟ್‌ ಮಾಡದಂತೆ ತಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದೇ ರೀತಿಯ ಆರೋಪ ವನ್ನು ಗೊಂಡಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೂಡ ಮಾಡಿದ್ದು, ಆಯೋಗಕ್ಕೆ ದೂರು ನೀಡಿದ್ದಾರೆ. ಹಿಸಾಮಪುರ್‌ ಮಾಧೋ ಹಳ್ಳಿಗರು ಮತದಾನಕ್ಕೆ ಬಹಿಷ್ಕಾರ ಹಾಕಿದರು.

ಕೈಕೊಟ್ಟ ಮತಂತ್ರಗಳು
ಒಡಿಶಾದ ಕೆಲವು ಮತಯಂತ್ರಗಳು ಕೈಕೊಟ್ಟ ಬಗ್ಗೆ ವರದಿಯಾಗಿದೆ. ಅಲ್ಲದೇ, ಬಾರಾಗಢ ಜಿಲ್ಲೆಯ ಸರ್‌ಸಾರಾ ಎಂಬಲ್ಲಿ, ಮತದಾರರನ್ನು ಬೂತ್‌ಗೆ ಕರೆದುಕೊಂಡು ಹೋಗುತ್ತಿದ್ದ ಆಟೋರಿûಾ ಚಾಲಕನೆಗೆ ಅಪರಿಚಿತರು ಚೂರಿ ಚುಚ್ಚಿ, ಕೊಲೆ ಮಾಡಿದ ಘಟನೆ ನಡೆದಿದೆ. ಕುಟುಂಬದ ಸದಸ್ಯರು ರಾಜಕೀಯ ಕಾರಣಕ್ಕೆ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಮೊದಲ ಬಾರಿ ಮತದಾನ ಮಾಡಿದ ಅಕ್ಷಯ್‌ಕುಮಾರ್‌
ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಭಾರತದಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಈ ಮೊದಲು ಅವರು ಕೆನಡಾ ಪೌರತ್ವ ಹೊಂದಿದ್ದರು. ಕಳೆದ ವರ್ಷ ಭಾರತೀಯ ಪೌರತ್ವ ದೊರೆತ ಬಳಿಕ‌ ಮೊದಲ ಬಾರಿ ಮತ ಚಲಾ ಯಿಸಿದ್ದಾರೆ ಹಾಗೂ ಈ ಕುರಿತು ಹರ್ಷ ವ್ಯಕ್ತಪಡಿಸಿ ದ್ದಾರೆ. ಭಾರತ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ನಾನು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

Advertisement

ಎಲ್ಲೆಲ್ಲಿ ಚುನಾವಣೆ?
ಉತ್ತರ ಪ್ರದೇಶ(14), ಮಹಾರಾಷ್ಟ್ರ(13), ಬಿಹಾರ(5), ಪಶ್ಚಿಮ ಬಂಗಾಲ(7), ಝಾರ್ಖಂಡ್‌(3), ಒಡಿಶಾ (5), ಜಮ್ಮು ಮತ್ತು ಕಾಶ್ಮೀರ(1) ಹಾಗೂ ಲಡಾಖ್‌(1)ನಲ್ಲಿ ಮತದಾನ ನಡೆದಿದೆ.
ಕಣದಲ್ಲಿದ್ದ ಪ್ರಮುಖರು
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸಚಿವೆ ಸ್ಮತಿ ಇರಾನಿ, ಉಜ್ವಲ್‌ ನಿಕಂ, ಕೇಂದ್ರ ಸಚಿವ ರಾಜನಾಥ ಸಿಂಗ್‌, ಪಿಯೂಷ್‌ ಗೋಯಲ್‌, ಚಿರಾಗ್‌ ಪಾಸ್ವಾನ್‌, ಒಮರ್‌ ಅಬ್ದುಲ್ಲಾ, ಕಿಶೋರಿ ಲಾಲ್‌ ಶರ್ಮಾ ಮತ್ತಿತರು ಕಣದಲ್ಲಿದ್ದರು.

ದೂರು, ಪ್ರತಿದೂರು
5ನೇ ಹಂತದಲ್ಲಿ ಮುಂಬಯಿಯ ಆರೂ ಕ್ಷೇತ್ರ ಗಳಿಗೆ ಮತದಾನ ನಡೆದಿದೆ. ಮತದಾನ ಕೇಂದ್ರ ಗಳಲ್ಲಿ ಸೂಕ್ತ ಸೌಲಭ್ಯಗಳು ಇರಲಿಲ್ಲ ಎಂದು ಉದ್ಧವ್‌ ಶಿವಸೇನೆ ಆರೋಪಿಸಿದರೆ, ಬಿಜೆಪಿ ನಾಯಕ ಕೀರ್ತಿ ಸೋಮಯ್ನಾ, ಉದ್ಧವ್‌ ಸೇನೆಯ ಸಂಜಯ್‌ ಮತ್ತು ಸುನೀಲ್‌ ರಾವತ್‌ ವಿರುದ್ಧ ದೂರಿದ್ದಾರೆ. ಅಲ್ಲದೇ ನಕಲಿ ಇವಿಎಂ ಬಳಕೆಗೆ ಸಂಬಂಧಿಸಿದಂತೆ ಉದ್ಧವ್‌ ಬಣದ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿ ದ್ದಾರೆ. ರಣವೀರ್‌ ಸಿಂಗ್‌, ಆಮೀರ್‌ ಖಾನ್‌, ಹೃತಿಕ್‌ ರೋಷನ್‌, ಜಾಹ್ನವಿ ಕಪೂರ್‌, ದೀಪಿಕಾ ಪಡುಕೋಣೆ ಸಹಿತ ಬಾಲಿವುಡ್‌ ನಟ, ನಟಿಯರು ಮತ ಚಲಾಯಿಸಿದರು.

ಮತದಾನ ನಡುವೆಯೇ ಬಂಗಾಲದಲ್ಲಿ 1500ಕ್ಕೂ ಹೆಚ್ಚು ಪ್ರಕರಣ ದಾಖಲು

ಕೋಲ್ಕತಾ: ಪಶ್ಚಿಮ ಬಂಗಾಲದ 7 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ 5ಹಂತದ ಲೋಕಸಭೆ ಚುನಾವಣೆಯಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ಮತದಾನದ ನಡುವೆಯೇ ಚುನಾವಣ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ 1500ಕ್ಕೂ ಹೆಚ್ಚು ಕೇಸುಗಳು ದಾಖಲಿಸಿವೆ. ಅಲ್ಲದೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಿವಿಧೆಡೆ ಸಂಘರ್ಷ ಗಳು ಏರ್ಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಂಭಾಗ್‌ ಕ್ಷೇತ್ರದ ಖಾನ್‌ಕುಲ್‌ ನಗರದಲ್ಲಿ ಮತಗಟ್ಟೆಗೆ ಪೋಲಿಂಗ್‌ ಏಜೆಂಟ್‌ಗಳು ಪ್ರವೇಶಿಸುವು ದಕ್ಕೆ ಸಂಬಂಧಿಸಿದಂತೆ ಘರ್ಷಣೆಗಳಾಗಿದೆ. ಹೂಗ್ಲಿ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಚಟರ್ಜಿ ಅವರ ವಿರುದ್ಧ ಟಿಎಂಸಿ ಸದಸ್ಯರು ಪ್ರತಿಭಟಿಸಿದ್ದಾರೆ. ಇದೇ ಪರಿಸರದಲ್ಲಿ ಎರಡು ಸಜೀವ ಕಚ್ಚಾ ಬಾಂಬ್‌ಗಳೂ ಪತ್ತೆಯಾಗಿದ್ದವು.
ಬಂಗಾನ್‌ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುಬೀರ್‌ ಬಿಸ್ವಾಸ್‌ ಅವರನ್ನು ಥಳಿಸಲಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ವಿವಿಧ ಕಾರಣಗಳಿಂದಾಗಿ ಹಾಗೂ ಕೆಲವು ಪಕ್ಷಗಳ ನಾಯಕರು ಇವಿಎಂ ದೋಷ ಪೂರಿತವಾಗಿದೆ ಎಂದು ಆರೋಪಿಸಿರುವುದೂ ಸೇರಿ 1500ಕ್ಕೂ ಅಧಿಕ ಕೇಸುಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವೆಡೆ ಅಭ್ಯರ್ಥಿಗಳ ಪರ, ವಿರೋಧ ಪ್ರತಿಭಟನೆಗಳು ನಡೆದಿವೆ.

ಬಾರಾಮುಲ್ಲಾದಲ್ಲಿ ದಾಖಲೆಯ ಶೇ.59 ಮತದಾನ
ಶ್ರೀನಗರ: ಉಗ್ರ ಚಟುವಟಿಕೆಗಳ ಪೀಡಿತವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಈ ಬಾರಿ ಶಾಂತಿಯುತವಾಗಿ ಚುನಾವಣೆ ನಡೆದಿದೆ.ಸೋಮವಾರ ನಡೆದ ಚುನಾವಣೆಯಲ್ಲಿ ಶೇ.59ರಷ್ಟು ಮತದಾನ ವಾಗಿದೆ. ಮೊದಲ ಬಾರಿಯ ಚುನಾವಣೆ ನಡೆದ 1967ರಿಂದಲೂ ಇದು ಅತಿಹೆಚ್ಚು ಮಟ್ಟದ ಮತದಾನವಾಗಿದೆ ಎಂದು ಅಲ್ಲಿನ ಚುನಾವಣಾ ಧಿಕಾರಿ ತಿಳಿಸಿದ್ದಾರೆ. ಹಲವು ದಶಕಗಳಿಂದ ಅತಿ ಕಡಿಮೆ ಮತದಾನ ಶೇ. ದಾಖಲಿಸುತ್ತಿದ್ದ ವಿಧಾನಸಭಾ ಕ್ಷೇತ್ರ ಸೋಪೊರ್‌ನಲ್ಲಿ ಶೇ.44 ರಷ್ಟು ಮತದಾನವಾಗಿದ್ದು ಇದು ಸಹ ಹೊಸ ದಾಖಲೆಯಾಗಿದೆ. 1984ರಲ್ಲಿ ಬರಾಮುಲ್ಲಾ ಕ್ಷೇತ್ರದಲ್ಲಿ ಶೇ.58.90 ರಷ್ಟು ಮತದಾನವಾಗಿದ್ದು ಹಳೆಯ ದಾಖಲೆಯಾಗಿದೆ. ಸಂಜೆ 6 ಗಂಟೆ ವೇಳೆಗೆ ಈ ಅಂಕಿ-ಅಂಶ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next