Advertisement

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

01:46 AM Jan 24, 2022 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯ ಬಂದು 75 ವರ್ಷ ಸಂದ ವಿಶೇಷ ವರ್ಷದಲ್ಲಿ ನಡೆಯುತ್ತಿರುವ ಈ ಬಾರಿಯ ಗಣರಾಜ್ಯೋತ್ಸವದಂದು ಭಾರತೀಯ ಸೇನಾ ತುಕಡಿ ಗಳು, ಕಳೆದ 75 ವರ್ಷಗಳಲ್ಲಿ ತಮ್ಮ ಸಮವಸ್ತ್ರ, ಶಸ್ತ್ರಾಸ್ತ್ರಗಳಲ್ಲಿ ಆದ ಬದಲಾವಣೆಯನ್ನು ಪ್ರದರ್ಶಿಸಲಿವೆ ಎಂದು ಭೂ ಸೇನೆಯ ಮೇಜರ್‌ ಜನರಲ್‌ ಅಲೋಕ್‌ ಕಕ್ಕರ್‌ ತಿಳಿಸಿದ್ದಾರೆ.

Advertisement

ಒಟ್ಟು ನಾಲ್ಕು ತುಕಡಿಗಳು ರಾಜಪಥ್‌ನಲ್ಲಿ ಪಥ ಸಂಚಲನ ನಡೆಸಲಿವೆ. ಇವುಗಳಲ್ಲಿ 3 ತುಕಡಿಗಳು ಕಳೆದ ದಶಕಗಳಲ್ಲಿ ಬದಲಾದ ಸೇನೆಯ ಸಮವಸ್ತ್ರ, ಬಂದೂಕುಗಳನ್ನು ಪ್ರದರ್ಶಿಸುತ್ತಾರೆ. ನಾಲ್ಕನೇ ತುಕಡಿ, ಇತ್ತೀಚೆಗೆ ಸೇನೆಗೆ ಲಭ್ಯವಾಗಿರುವ ಹೊಸ ಕಾಂಬ್ಯಾಟ್‌ ಜಾಕೆಟ್‌ ಹಾಗೂ ಅತ್ಯಾಧುನಿಕ ಟಾವೊರ್‌ ರೈಫ‌ಲ್‌ಗ‌ಳನ್ನು ಪ್ರದರ್ಶಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತೀ ಬಾರಿಯ ಪರೇಡ್‌ನ‌ಲ್ಲಿ ಭಾಗವಹಿಸುವ ಪ್ರತಿಯೊಂದು ಸೇನಾ ತುಕಡಿಯಲ್ಲಿ 144 ಸೈನಿಕರು ಭಾಗವಹಿಸುತ್ತಿದ್ದರು. ಈ ಬಾರಿ ಕೊರೊನಾ ಹಿನ್ನೆಲೆ ಪ್ರತಿ ತುಕಡಿಗಳಲ್ಲಿ ಕೇವಲ 96 ಸೈನಿಕರು ಮಾತ್ರ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಲೇಸರ್‌ ಪ್ರೊಜೆಕ್ಷನ್‌: ಇದಲ್ಲದೆ ಭಾರತೀಯ ಸೇನೆಯ ಭವ್ಯ ಪರಂಪರೆಯನ್ನು ಬಿಂಬಿಸುವ ಲೇಸರ್‌ ಪ್ರೊಜೆಕ್ಷನ್‌ ಕಾರ್ಯಕ್ರಮವನ್ನೂ ಪರೇಡ್‌ನ‌ಲ್ಲಿ ಆಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಸಮರ್ಥನೆ: ಗಣರಾಜ್ಯ ದಿನದ ಬೀಟಿಂಗ್‌ ದ ರಿಟ್ರೀಟ್‌ನಲ್ಲಿ “ಅಬೈಡ್‌ ವಿದ್‌ ಮಿ’ ಹಾಡು ನುಡಿಸದೇ ಇರುವ ನಿರ್ಧಾರವನ್ನು ಕೇಂದ್ರ ಸರಕಾರ ಸಮರ್ಥಿಸಿ­ಕೊಂಡಿದೆ. ದೇಶೀಯವಾಗಿ ಇರುವ ಸಂಗೀತದ ಟ್ಯೂನ್‌ಗಳನ್ನೇ ಅಲ್ಲಿ ನುಡಿಸುವುದು ಹೆಚ್ಚು ಸೂಕ್ತ ಮತ್ತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಪೂರ್ತಿಗೊಂಡ ವೇಳೆ ಇಂಥ ನಿರ್ಧಾರ ಪ್ರಶಸ್ತವಾದದ್ದು ಎಂದು ಹೇಳಿದೆ.

Advertisement

ಟ್ಯೂನ್‌ ವಿವಾದ
ನೌಕಾಪಡೆಯ ಬ್ಯಾಂಡ್‌, ಪರೇಡ್‌ಗಾಗಿ ತಯಾರಿ ನಡೆಸುತ್ತಿರುವ ವೀಡಿಯೋವ‌ನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದ್ದು ಅದು ವಿವಾದಕ್ಕೀಡಾಗಿದೆ. ವಿಡೀಯೋದಲ್ಲಿ ಬ್ಯಾಂಡ್‌ನ‌ ಯೋಧರು, ಬಾಲಿವುಡ್‌ನ‌ ಸೂಪರ್‌ಹಿಟ್‌ ಹಾಡಾದ “ಮೋನಿಕಾ, ಓ ಮೈ ಡಾರ್ಲಿಂಗ್‌’ ಎಂಬ ಹಾಡನ್ನು ನುಡಿಸಿವೆ. ಇದನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಶಿವಸೇನೆಯ ಪ್ರಿಯಾಂಕಾಚತುರ್ವೇದಿ ಸೇರಿ ಹಲವರು ಟೀಕಿಸಿದ್ದಾರೆ. ಒಡನೆಯೇ ಬ್ಯಾಂಡ್‌ನ‌ ಬೆಂಬಲಕ್ಕೆ ಬಂದಿರುವ ನಟ ಅನುಪಮ್‌ ಖೇರ್‌, ನಟಿ ರವೀನಾ ಟಂಡನ್‌ ಹಿಂದಿ ಚಿತ್ರಗೀತೆಯನ್ನು ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ನುಡಿ ಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next