ಬೆಳ್ತಂಗಡಿ: ಭಜನೆಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮ ಮುಂದೆ ಇದೆ. ಮಕ್ಕಳಲ್ಲಿ ಭಜನೆ ಜಾಗೃತಿ ಮೂಡಿದಾಗ ಉತ್ತಮ ಗಾಯಕರಾಗಿ ಪ್ರತಿಭೆಗಳು ಮೂಡಿಬರಲು ಸಾಧ್ಯವಾ ಗುತ್ತದೆ ಎಂದು ಖ್ಯಾತ ಸಂಗೀತ ವಿಮರ್ಶಕಿ ಅನುಪಮಾ ಅರವಿಂದ ಕುಮಾರ್ ಹೇಳಿದರು.
ಹನುಮಗಿರಿ ಕ್ಷೇತ್ರದಲ್ಲಿ ಅಂತಾರಾಜ್ಯ ಮಟ್ಟದ ಸಾಂಪ್ರದಾಯಿಕ ಭಜನ ಸ್ಪರ್ಧೆ ಯಲ್ಲಿ ಅವರು ಮಾತನಾಡಿದರು. ಹೈಕೋರ್ಟ್ ಹಿರಿಯ ವಕೀಲರಾದ ಶಶಿಕಿರಣ್ ಸಮಾರೋಪ ಅಧ್ಯಕ್ಷತೆ ವಹಿಸಿದ್ದರು.
ಭಜನೆ ಸ್ಪರ್ಧೆಯಲ್ಲಿ 74 ತಂಡಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ 10 ತಂಡಗಳು ಆಯ್ಕೆಗೊಂಡಿದ್ದು, ಬೆಳ್ತಂಗಡಿ ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆಯ ಭಜನ ಸಾಮ್ರಾಟ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಉತ್ತಮ ಭಜಕರಾಗಿ 74 ತಂಡಗಳಲ್ಲಿ ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರದ ಸಮರ್ಥನ್ ಎಸ್. ರಾವ್ ಪ್ರಶಸ್ತಿಗೆ ಪಾತ್ರರಾದರು.
ಭಜನ ಸಾಮ್ರಾಟ್ ತಂಡದಲ್ಲಿ ಹಾರ್ಮೋನಿಯಂನಲ್ಲಿ ಸಮರ್ಥನ್ ಎಸ್. ರಾವ್, ತಬಲದಲ್ಲಿ ವಿಶಾಖ್, ಹಾಡುಗಾರಿಕೆಯಲ್ಲಿ ಸಮರ್ಥನ್, ಸಾಯಿಚರಣ್ ಸಿ.ಎಚ್., ಶಿವಶಂಕರ್, ಸೌಜನ್ಯಾ ಭಟ್, ಅಕ್ಷತಾ ಸಿ.ಎಚ್., ವಿದ್ಯಾ, ಲತಾ ಪ್ರಭಾಕರ ಸಿ.ಎಚ್. ಭಾಗವಹಿಸಿದ್ದರು.
ಭಜನ ಸಾಮ್ರಾಟ್ ತಂಡದ ನೇತೃತ್ವ ವನ್ನು ಭಗವಾನ್ ಶಿರ್ಡಿಸಾಯಿ ಸತ್ಯ ಸಾಯಿ ಸೇವಾಕ್ಷೇತ್ರ ಹಳೆಕೋಟೆ ಬೆಳ್ತಂಗಡಿಯ ಸನಾತನ ಸಾರಥಿ ಸೇವಾ ಟ್ರಸ್ಟ್ ಅಧ್ಯಕ್ಷ ಸೆ.ಎಚ್. ಪ್ರಭಾಕರ್ ವಹಿಸಿದ್ದರು. ಸುಪ್ರಿಂ ಕೋರ್ಟ್ ಎಡಿಶನಲ್ ಸಾಲಿಸಿಟರ್ ಅಟಾರ್ನಿ ಜನರಲ್ ನಟರಾಜ್ ಗೌರವಿಸಿ ಶುಭಹಾರೈಸಿದರು.
ಬೆಳ್ತಂಗಡಿ ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆಯ ಭಜನ ಸಾಮ್ರಾಟ್ ತಂಡ ದ್ವಿತೀಯ ಸ್ಥಾನ ಪಡೆಯಿತು.