Advertisement
ಈ ಕುರಿತು ಪ್ರಧಾನಿಯವರಿಗೆ ಪತ್ರ ಸಹ ಬರೆದಿರುವ ಅವರು, ಶಂಕಾರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶೃಂಗೇರಿ ಶಾರದಾ ಪೀಠದ ಜತೆ ತಮ್ಮ ಒಡನಾಟ ಉಲ್ಲೇಖಿಸಿದ್ದಾರೆ. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದು ಬಣ್ಣಿಸಿದ್ದಾರೆ.
ಶೃಂಗೇರಿ ಮಠ ಶತಮಾನಗಳಿಂದಲೂ ಅನೇಕ ರಾಜರು, ಆಡಳಿತಗಾರರಿಗೆ ಅಧ್ಯಾತ್ಮಿಕ ಮಾರ್ಗದರ್ಶನ ನೀಡಿದೆ. ಒಡೆಯರು, ಪೇಶ್ವೆಗಳು, ಕೆಳದಿ ಮತ್ತು ತಿರುವಾಂಗಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರು ರಾಜರುಗಳಾದ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹಾಗೂ ಹೈದರಾಬಾದ್‌ನ ನಿಜಾಮರು ಮಠಕ್ಕೆ ಭಕ್ತಿ ಪ್ರದರ್ಶಿಸಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
Related Articles
Advertisement
ಶಂಕರಾಚಾರ್ಯರ ಪ್ರತಿಮೆ ನೋಡಲು ನಾನು ಶೀಘ್ರದಲ್ಲೇ ಕೇದಾರನಾಥಕ್ಕೆ ಭೇಟಿ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಪ್ರತಿಮೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವುದು ಸಂತೋಷದ ವಿಚಾರ. ಪ್ರತಿಮೆಗೆ ಕರ್ನಾಟಕದ ಎಚ್.ಡಿ.ಕೋಟೆಯ ಕಪ್ಪು ಶಿಲೆ ಬಳಕೆ ಮಾಡಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.