Advertisement

ಯಾಂತ್ರಿಕ ಬದುಕಿನ ತಲ್ಲಣ ರೇಖಾಚಿತ್ರಗಳಲ್ಲಿ ಅನಾವರಣ

11:04 PM Sep 19, 2019 | Team Udayavani |

ಉಡುಪಿ: ಯಂತ್ರಾಧಾರಿತ ಬದುಕು ಮನುಷ್ಯ ಸಂಬಂಧ ದೂರೀಕರಿಸಿ, ಪ್ರಾಕೃತಿಕ ಜೀವನದ ಬದಲು ಯಂತ್ರ ಮಾನವನನ್ನು ಸೃಷ್ಟಿಸುವುದರಿಂದ ಆಗುವ ಅವಾಂತರ, ತಲ್ಲಣಗಳೇನು ಎಂಬುದನ್ನು ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ವಿದ್ಯಾರ್ಥಿಗಳ ರೇಖಾಚಿತ್ರಗಳು ಅನಾವರಣ ಗೊಳಿಸುತ್ತಿವೆ.

Advertisement

ಬ್ರಹ್ಮಾವರ ಹಿರಿಯ ಸರಕಾರಿ ಚಿತ್ರಕಲಾ ಶಿಕ್ಷಕ ದಿನಮಣಿ ಶಾಸ್ತ್ರಿ ಉದ್ಘಾಟಿಸಿದರು. ವಿದ್ಯಾಲಯದ 18 ಮಂದಿ ಕಲಾವಿದರು ರಚಿಸಿರುವ 32 ಕಪ್ಪು ಬಿಳುಪು ಕಲಾಕೃತಿಗಳ ಪ್ರದರ್ಶನ “ಇಂಪ್ರಷನ್‌-2019′ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಗುರುವಾರ ಆರಂಭಗೊಂಡಿತು. ಪ್ರದರ್ಶನ ಸೆ.22ರ ವರೆಗೆ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಇದೆ.

ಮರಗಳ ಜಾಗ ಆಕ್ರಮಿಸಿದ ಕಟ್ಟಡಗಳು, ಶಿಲ್ಪಕೃತಿಗಳನ್ನು ಕೆಡವಿ ನಿರ್ಮಾಣಗೊಂಡ ನಗರ, ಅನ್ಯಗ್ರಹ ಜೀವಿಗಳೆನಿಸಿದ ಏಲಿಯನ್ಸ್‌ಗಳ ಕುರಿತಾದ ಕಾಲ್ಪನಿಕ ಲೋಕ, ಭ್ರೂಣದಲ್ಲಿರುವ ಮಗು ಹೊರ ಜಗತ್ತಿನಿಂದ ಏನು ಕಲಿಯಬಹುದೆಂಬ ಆತಂಕ ಇತ್ಯಾದಿಗಳನ್ನು ವಿದ್ಯಾರ್ಥಿಗಳು ತಮ್ಮ “ಪೆನ್‌ ಆ್ಯಂಡ್‌ ಇಂಕ್‌ ಆರ್ಟ್‌’ ಮೂಲಕ ಸಾದರಪಡಿಸಿದ್ದಾರೆ.

ವಿದ್ಯಾರ್ಥಿಗಳಾದ ಪ್ರದೀಪ್‌ ಕುಮಾರ್‌ ತೇಜರಾಜು ಸಿ.ಎಂ., ವಿದ್ಯಾರ್ಥಿ ಸಹನಾ ಆರ್‌.ಕೆ., ಭರತ್‌ ಹಾವಂಜೆ ವಿವಿಧ ಚಿತ್ರಗಳನ್ನು ಪ್ರಸ್ತುತಪಡಿಸಿದರು.ಜಾಹ್ನವಿ ಉಪಾಧ್ಯ, ಅರವಿಂದ ಭಟ್‌, ಪ್ರಶಾಂತ್‌ ಶ್ರೀಯಾನ್‌, ಪವಿತ್ರಾ, ಪಾರ್ವತಿ, ಅರ್ಜುನ್‌ ಜಿ., ತಿಲಕ್‌ ನಾಯ್ಕ, ಮನೋಜ್‌, ವಿನಯ ಆಚಾರ್ಯ, ರಮೇಶ್‌ ಆಚಾರ್ಯ, ರವಿಕಾಂತ್‌ ಆಚಾರ್ಯ ಅವರು ಬಿಡಿಸಿರುವ ರೇಖಾಚಿತ್ರಗಳೂ ಪ್ರದರ್ಶನ ದಲ್ಲಿವೆ. ಮೈಸ್‌ನ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯ, ಕಲಾ ವಿದ್ಯಾಲಯದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next