Advertisement
ಪಟ್ಟಣದ ಆರಕ್ಷಕ ಠಾಣೆಯಲ್ಲಿ ನಡೆದ ದಲಿತ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಹೊಟೇಲ್, ಚೌರದಂಗಡಿ ಮತ್ತು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದ ಸ್ಥಳೀಯ ದಲಿತ ನಾಯಕರನ್ನು ಗುರಿಯಾಗಿಸಿಕೊಂಡ ಸವರ್ಣೀಯರು ಅಂತವರ ವಿರುದ್ಧ ಹಲ್ಲೆ ಮತ್ತು ಪಿತೂರಿ ಮಾಡಿ ದಲಿತರ ಕೂಗನ್ನು ದಮನ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
Related Articles
Advertisement
ಸಾಲಿ ಗ್ರಾಮದ ಕಂಠಿಕುಮಾರ್ ಮಾತನಾಡಿ, ಹರದನಹಳ್ಳಿ ಸಮೀಪದ ಬಕ್ರೆಹಳ್ಳದಲ್ಲಿ ಹಾರಂಗಿ ನೀರನ್ನು ಮಾದಾಪುರ ಗ್ರಾಮದವರು ತಡೆದು ನಮ್ಮ ದಲಿತರ ಜಮೀನಿಗೆ ನೀರು ಕೊಡದೆ ತೊಂದರೆ ನೀಡುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮವಹಿಸಿ ಅಲ್ಲದೇ ತಾಲೂಕಿನ ಎಲ್ಲಾ ಭಾಗದಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಮದ್ಯದಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಘರ್ಷಣೆಗಳು ನಡೆಯುತ್ತಿವೆ. ಅಲ್ಲದೇ ಬಾರ್‌ಗಳಲ್ಲಿ ದರಪಟ್ಟಿ ಪಲಕ ಹಾಕುವಂತೆ ಕ್ರಮವಹಿಸಿ ಎಂದು ಒತ್ತಾಯಿಸಿದರು.
15 ವರ್ಷದಿಂದ ಸಾಲಿಗ್ರಾಮ ಗ್ರಾಪಂನಲ್ಲಿ ಎಲಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ರಾಜಕೀಯ ದುರುದ್ದೇಶದಿಂದ ಪಿಡಿಒ ಏಕಾಏಕಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸಂಬಂಧಪಟ್ಟಂತೆ ಎಲ್ಲಾ ಉನ್ನತ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ ನನಗೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿ ಎಂದು ಪ್ರಕಾಶ್ ಎಂಬುವರು ಅವಲತ್ತುಕೊಂಡರು.
ಎಲ್ಲವನ್ನೂ ಆಲಿಸಿದ ತಹಶೀಲ್ದಾರ್ ಜಿ.ಹೆಚ್.ನಾಗರಾಜು ಮಾತನಾಡಿ, ತೊಂದರೆಗೊಳಗಾದವರು ಮತ್ತು ಕೆಲಸವಾಗ ಬೇಕಾದವರು ಸಭೆಗಳನ್ನೇ ಕಾಯದೇ ನೇರವಾಗಿ ಕಚೇರಿಗೆ ಬಂದು ನಮ್ಮ ಗಮನಕ್ಕೆ ತಂದರೆ ತಕ್ಷಣ ಸ್ಪಂದಿಸುತ್ತೇವೆ. ಇಂದು ನಿಮ್ಮಿಂದ ಪ್ರಸ್ಥಾಪವಾಗಿರುವ ದೂರುಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಿಪಿಐ ಬಸವರಾಜು ಮಾತನಾಡಿ, ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಅನುಮಾನ ಪಡದೆ ದೌರ್ಜನ್ಯಕ್ಕೊಳಗಾದವರು ದೂರು ನೀಡಿದರೆ, ಅಂತವರಿಗೆ ಸೂಕ್ತ ರಕ್ಷಣೆ ಮತ್ತು ಕಾನೂನಿನ ನೆರವು ಒದಗಿಸಲಾಗುವುದು. ಅಲ್ಲದೇ ಇಂದು ತಿಳಿದು ಬಂದಿರುವ ದೂರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ತಾಪಂ ಸದಸ್ಯ ಶ್ರೀನಿವಾಸ್, ಉದಯ ಕರ್ನಾಟಕ ಸಂಘದ ಅಧ್ಯಕ್ಷ ಕೃಷ್ಣನಾಯಕ, ಮುಖಂಡ ಕುಚೇಲ, ಪಿಎಸ್‌ಐಗಳಾದ ಲೋಕೇಶ್, ಮಹೇಶ್, ಬೋರಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.