Advertisement
ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವಸ್ಥಾನದ ಮುಂದೆ ಬಾಲಾಲಯದಲ್ಲಿ ಸ್ಥಾಪಿಸಲಾಗಿರುವ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.
Related Articles
Advertisement
ಆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದಕ್ಕೆ ಇನ್ನೂ ಚಾಲನೆ ನೀಡಿಲ್ಲ. ಟೆಂಡರ್ ಪ್ರತಿಕ್ರಿಯೆ ಮುಗಿದ್ದು ಕಾಮಗಾರಿ ಆರಂಭಗೊಂಡಿರುವ ಬಗ್ಗೆ ಮಾಹಿತಿಯೇ ಇಲ್ಲ. ಪ್ರ
ತಿ ವರ್ಷವೂ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯುವ ಈ ತೇರನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಈ ಸಂಭ್ರಮ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಭಕ್ತರಾದ ಹೊಂಗನೂರು ಶಿವಕುಮಾರ, ಇರಸವಾಡಿ ಮಹೇಶ ರವರು ತಮ್ಮ ಅಳಲು ತೋಡಿಕೊಂಡರು.
ನಮ್ಮ ಮನೆ ದೇವರು ಬಿಳಿಗಿರಿಂಗನಾಥಸ್ವಾಮಿ ಪ್ರತಿ ವರ್ಷವೂ ನಾವು ತೇರಿಗೆ ಬಂದು ಪೂಜೆ ಸಲ್ಲಿಸಿ ಅರವಟ್ಟಿಗೆ ಮಾಡಿ ಪ್ರಸಾದ ನಿಯೋಗಿಸಿ, ಉತ್ಸವ ಮೂರ್ತಿಗೆ ಶೇಷ ಪೂಜೆ ಸಲ್ಲಿಸುವ ವಾಡಿಕೆ ಇದೆ. ಆದರೆ ಕಳೆದ 3 ವರ್ಷದಿಂದ ರಥೋತ್ಸವ ನಿಂತಿದೆ.
ಆದರೂ ನಾವು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಅರವಟ್ಟಿಗೆ ಸೇವಾ ಕೈಂಕರ್ಯ ಕೈಗೊಂಡಿದ್ದೇವೆ. ಮುಂದಿನ ವರ್ಷವಾದರೂ ತೇರು ನಡೆಬೇಕು ಎಂಬುದು ನಮ್ಮ ಬೇಡಿಕೆ ಎಂದು ಬೆಂಗಳೂರಿನ ವಿಷ್ಣುಪ್ರಸಾದ್, ಶಾರದಾಂಬ ಮನವಿ ಮಾಡಿದರು.
ನೀರಿಗೆ ತೊಂದರೆ: ಗುರುವಾರ ಸಂಜೆ ಜೋರು ಗಾಳಿ ಮಳೆ ಬೆಟ್ಟದಲ್ಲಿ ಸುರಿದಿದ್ದರಿಂದ ಮರ ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಯಿತು.
ದೇಗುಲದ ವತಿಯಿಂದ ಬರುವ ಭಕ್ತರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಯಿತು. ಸ್ಥಳೀಯ ಗ್ರಾಮ ಪಂಚಾಯಿತಿಯು ಶುಕ್ರವಾರ ಮದ್ಯಾಹ್ನ 12 ಗಂಟೆಗೆ ವಿದ್ಯುತ್ ಬಂದ ನಂತರ ಟ್ಯಾಂಕ್ ಹಾಗೂ ನೀರಿನ ತೊಂಬೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿತು.