Advertisement

ಹೆರಿಗೆ ರಜೆ ಸಿಗುವವರೆಗೂ…

01:33 PM Dec 01, 2017 | Team Udayavani |

ಹೆಣ್ಣು ಬಲು ಎತ್ತರದಲ್ಲಿ ನಿಲ್ಲುತ್ತಿದ್ದಾಳೆ. ಅತ್ಯುನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾಳೆ. ಆಕೆಯ ಈ ವೇಗದ ಕೆರಿಯರ್‌ ಬದುಕು ಕೊಂಚ ಬ್ರೇಕ್‌ ಹಾಕಿ ನಿಲ್ಲೋದು, ತುಸು ನಿಧಾನವಾಗಿ ಸಾಗುವುದು ಪ್ರಗ್ನೆನ್ಸಿ ಅವಧಿಯಲ್ಲಿ. ಉದ್ಯೋಗಿ ಮಹಿಳೆ ಗರ್ಭ ಧರಿಸಿದಾಗ, ಕೆಲಸದೊತ್ತಡವನ್ನು ನಿಭಾಯಿಸುವುದೂ ಒಂದು ಕಲೆ.

Advertisement

ದುಡಿಯುವ ಜಗತ್ತಿನಲ್ಲಿ ಹೆಣ್ಣು ಬಲು ಎತ್ತರದಲ್ಲಿ ನಿಲ್ಲುತ್ತಿದ್ದಾಳೆ. ಪುರುಷನಿಗೆ ಪ್ರತಿ ಹೆಜ್ಜೆಯಲ್ಲೂ  ಅವಳು ಪೈಪೋಟಿ ಒಡ್ಡುತ್ತಿದ್ದಾಳೆ. ಹಲವು ಸಲ ಆತನನ್ನೇ ಮೀರಿಸುತ್ತಿದ್ದಾಳೆ. ಅತ್ಯುನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾಳೆ. ಆದರೆ, ಆಕೆಯ ಈ ವೇಗದ ಕೆರಿಯರ್‌ ಬದುಕು ಕೊಂಚ ಬ್ರೇಕ್‌ ಹಾಕಿ ನಿಲ್ಲೋದು, ತುಸು ನಿಧಾನವಾಗಿ ಸಾಗುವುದು ಪ್ರಗ್ನೆನ್ಸಿ ಅವಧಿಯಲ್ಲಿ. ಉದ್ಯೋಗಿ ಮಹಿಳೆ ಗರ್ಭ ಧರಿಸಿದಾಗ, ಕೆಲಸದೊತ್ತಡವನ್ನು ನಿಭಾಯಿಸುವುದೂ ಒಂದು ಕಲೆ.

ಮೊದಲಿನಷ್ಟು ವೇಗದಲ್ಲಿ, ಏಕಾಗ್ರತೆ ವಹಿಸಿ, ಕೆಲಸ ಮಾಡುವುದು ಆ ವೇಳೆ ಕೊಂಚ ಕಷ್ಟವಾಗಬಹುದು. ಶರೀರ ಮತ್ತು ಮನಸ್ಸು ಮೊದಲಿನಂತೆ ಸ್ಪಂದಿಸದೇ ಹೋಗಬಹುದು. ಇವೆಲ್ಲ ಸವಾಲುಗಳನ್ನು ಮೆಟ್ಟುತ್ತಲೇ ಕಚೇರಿಯಲ್ಲೂ ಆಕೆ ಸೈ ಎನಿಸಿಕೊಳ್ಳಲು ಹತ್ತಾರು ದಾರಿಗಳಿವೆ. ಗರ್ಭದಲ್ಲಿನ ಕಂದನ ಆರೋಗ್ಯದ ಕಡೆಯೂ ಗಮನ ಕೊಡುತ್ತಾ ಆಕೆ ಉಭಯಸಾಹಸ ಮೆರೆಯುವುದು ಬಲು ಸುಲಭ.

.ಆದಷ್ಟು ಪೌಷ್ಟಿಕ ಆಹಾರಗಳನ್ನೇ ಸೇವಿಸಿ. ಧಾನ್ಯ, ಸೊಪ್ಪುಗಳಲ್ಲದೇ ಮೀನು, ಮೊಟ್ಟೆ , ಹಾಲು-ತುಪ್ಪದಂಥ ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸಿದರೆ, ಕಚೇರಿ ಅವಧಿಯ ದಣಿವನ್ನು ದೂರ ಮಾಡಬಹುದು. ಅಲ್ಲದೇ ಕಚೇರಿಗೆ ನಾಲ್ಕೈದು ಪುಟ್ಟ ಪುಟ್ಟ ಬಾಕ್ಸ್‌ಗಳನ್ನು, ಅದರಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಕೊಂಡೊಯ್ಯಿರಿ. ಎರಡೆರಡು ಗಂಟೆ ಅವಧಿಯಲ್ಲಿ ಅದನ್ನು ಲಘುವಾಗಿ ಸೇವಿಸುತ್ತಿರಿ. ಆದಷ್ಟು ನೀರು ಕುಡಿಯುತ್ತಿರಿ.

.ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಆ ಬಗ್ಗೆ ಕೊರಗು ಬೇಡ. ಒಮ್ಮೆ ಬಾಸ್‌ ಅನ್ನು ಸಂಪರ್ಕಿಸಿ, ಈ ಬಗ್ಗೆ ಹೇಳಿಕೊಳ್ಳಿ. ಮಾನವೀಯತೆ ಅನ್ನೋ ಅಂಶ ಈ ವೇಳೆ ವಕೌìಟ್‌ ಆಗಿಯೇ ಆಗುತ್ತೆ. ಆಗ, ತೀರಾ ಒತ್ತಡ ಎನಿಸುವ, ಕಠಿಣ ಎನಿಸುವ ಕೆಲಸಗಳಿಂದ ಕೊಂಚ ರಿಯಾಯಿತಿ ಸಿಗುತ್ತದೆ.

Advertisement

.ಡೆಸ್ಕ್ ಕೆಲಸ ಇದ್ದವರು ಸದಾ ಕುಳಿತೇ ಇದ್ದರೆ, ರಕ್ತ ಸಂಚಾರಕ್ಕೆ ಕಷ್ಟವಾಗುತ್ತದೆ. ಕಾಲು ಊದಿಕೊಳ್ಳುತ್ತದೆ. ಕೆಲವರಿಗೆ ಮುಖ ದಪ್ಪಗಾಗುತ್ತದೆ. ಹಾಗಾಗಿ, ಪ್ರತಿ ಅರ್ಧ ತಾಸಿಗೊಮ್ಮೆ ಪುಟ್ಟ ವಾಕಿಂಗ್‌ ಮಾಡಿ. 

.ಕಂಪ್ಯೂಟರಿನಲ್ಲಿಯೇ ಮುಳುಗಿ ಹೋಗೋದು ಬೇಡ. ಪ್ರತಿ ಹತ್ತು ನಿಮಿಷಕ್ಕೆ ಅತ್ತಿತ್ತ ನೋಡುತ್ತಾ, ಕಣ್ಣಿಗೆ ಆರಾಮದ ಅನುಭವ ನೀಡಿ. ಕಣ್ಣು ದಣಿದಷ್ಟೂ ಮೆದುಳು ಕೂಡ ಆಯಾಸಗೊಳ್ಳುತ್ತದೆಂಬ ಸಂಗತಿ ಗೊತ್ತಿರಲಿ.

.ಕಚೇರಿ ಅಂದಮೇಲೆ ಗಾಸಿಪ್‌ ಇಲ್ಲದೇ ಇರುತ್ತದೆಯೇ? ಇಂಥ ಮಾತುಕತೆ ಏರ್ಪಟ್ಟಾಗಲೆಲ್ಲ ಮೌನ ವಹಿಸಿ. ಅದನ್ನು ಕೇಳುತ್ತಾ ಸುಮ್ಮನೆ ಎಂಜಾಯ್‌ ಮಾಡಿ ಅಷ್ಟೇ. ಪ್ರತಿಕ್ರಿಯಿಸಲು ಹೋಗಬೇಡಿ. ಗಾಸಿಪ್‌ಗ್ಳು ನಿಮ್ಮ ಮನಸ್ಸಿನಲ್ಲಿ ಯಾವುದೇ ಕಂಪನ ಸೃಷ್ಟಿಸದಂತೆ ನೋಡಿಕೊಳ್ಳಿ.

.ಕಚೇರಿಯಲ್ಲಿ ಇದ್ದಷ್ಟು ಹೊತ್ತು ನಗುತ್ತಾ ಇರಿ. ಕೆಲಸದ ಒತ್ತಡದ ಅನುಭವ ಮುಖದಲ್ಲಿ, ನಿಮ್ಮ ವರ್ತನೆಗಳಲ್ಲಿ ಪ್ರಕಟಗೊಳ್ಳದಂತೆ ನೋಡಿಕೊಳ್ಳಿ.

.ಗರ್ಭಿಣಿ ಅಂದಾಕ್ಷಣ ಮನೆಯ ಸದಸ್ಯರೆಲ್ಲ ಪ್ರೀತಿಯಿಂದ ಕಾಣುತ್ತಾರೆ. ಅಂಥದ್ದೇ ವಾತಾವರಣ ಕಚೇರಿಯಲ್ಲೂ  ಸಿಗುತ್ತದೆ. ಹಾಗಾಗಿ, ಯಾರ ಮೇಲೂ ಮುನಿದು, ಸಂಬಂಧ ಹಾಳು ಮಾಡಿಕೊಳ್ಳದಿರಿ.

.ಸರಳ ಯೋಗ, ಪ್ರಾಣಾಯಾಮಗಳನ್ನು ಅನುಸರಿಸುತ್ತಾ, ದೇಹಕ್ಕೆ-ಮನಸ್ಸಿಗೆ ರಿಲ್ಯಾಕ್ಸ್‌ ನೀಡಿ.

.ಆಫೀಸಿಗೆ ಹೋಗುವಾಗ ಬಿಗಿ ಉಡುಪುಗಳನ್ನು ಧರಿಸದೆ ಇರುವುದೇ ಉತ್ತಮ. ಬಿಗಿ ಉಡುಪು ಧರಿಸಿದಾಗ, ಉಸಿರಾಟಕ್ಕೆ ಕಷ್ಟವಾಗುತ್ತದೆ. ರಕ್ತಸಂಚಾರಕ್ಕೂ ಅಡೆತಡೆಯಾಗುತ್ತದೆ. 7-8 ತಾಸು ಹೀಗೆ ಶರೀರವನ್ನು ಹಿಂಸೆಗೆ ದೂಡುವುದು ಕಂದನ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಕಾರಣ, ಸಡಿಲ ಉಡುಪುಗಳಿಗೆ ಹೆಚ್ಚು ಆದ್ಯತೆ ಕೊಡಿ.

.ಪ್ರಗ್ನೆನ್ಸಿ ಅಂದರೆ, ಅದು ಕೆರಿಯರ್‌ಗೆ “ಬ್ರೇಕ್‌ ಅಲ್ಲ, ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಯಿದೆ, ನಾನು ಹಿಂದುಳಿದಿದ್ದೇನೆ ಎಂಬುದನ್ನೇ ತಲೆಯಿಂದ ತೆಗೆದುಹಾಕಿ. ಅವರೆಷ್ಟೇ ಮುಂದಕ್ಕೆ ಹೋದರೂ, ಮುಂದೊಂದು ದಿನ ಒಂದಾದರೂ ಸಿಗ್ನಲ್‌ನಲ್ಲಿ ನಿಲ್ಲಲೇಬೇಕಲ್ಲವೇ? ಆಗ ನೀವು ವೇಗವಾಗಿ ಹೋದರೆ ಆಯಿತಷ್ಟೆ.

ಶಾರ್ವರಿ

Advertisement

Udayavani is now on Telegram. Click here to join our channel and stay updated with the latest news.

Next