Advertisement

ನಾಡಕಚೇರಿ ಅವ್ಯವಸ್ಥೆ: ಕಲಿಯುಗ ಸೇವಾ ಸಮಿತಿಯಿಂದ ದೂರು

12:19 PM Aug 11, 2018 | |

ಪುತ್ತೂರು : ನಾಡ ಕಚೇರಿಯ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿರುವ ಕುರಿತು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದಾರೆ. 20 ಗ್ರಾಮ ವ್ಯಾಪ್ತಿಯನ್ನೊಳಗೊಂಡ ಉಪ್ಪಿನಂಗಡಿ ಹೋಬಳಿ ಕಚೇರಿಯಲ್ಲಿ ಸಿಬಂದಿ ಕೊರತೆ, ಕಂಪ್ಯೂಟರ್‌ ಆಪರೇಟರ್‌ ಕೊರತೆ, ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಹೀಗೆ ಅನೇಕ ಸಮಸ್ಯೆಗಳಿಂದ ನಾಡ ಕಚೇರಿಯಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ತೊಂದರೆಪಡಬೇಕಾಗಿದೆ.

Advertisement

ಗ್ರಾಮಗಳಲ್ಲಿ ಇರುವ ಬಾಬೂಜಿ ಸೇವಾ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಜನ ಹೋಬಳಿ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ. ದಿನದಲ್ಲಿ ನೂರಾರು ಮಂದಿ ಅರ್ಜಿಗಳನ್ನು ಸಲ್ಲಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಒಬ್ಬರೇ ಕಂಪ್ಯೂಟರ್‌ ಆಪರೇಟರ್‌ ಇರುವುದರಿಂದ ಕೆಲವೇ ಅರ್ಜಿಗಳು ಮಾತ್ರ ದಿನದಲ್ಲಿ ಸ್ವೀಕೃತವಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ಜನ ಕಾದು ಮತ್ತೆ ಮರುದಿನ ಬಂದು ನಿಲ್ಲಬೇಕಾಗುತ್ತದೆ.

ಜಿಲ್ಲಾಧಿಕಾರಿಯವರು ಈ ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರಿಸಲು ಆದೇಶ ಮಾಡಿದ್ದರೂ ಗ್ರಾ.ಪಂ. ಒಪ್ಪಿಗೆ ಸಿಕ್ಕಿಲ್ಲ. ಇಲ್ಲಿನ ಸಿಬಂದಿ ಕೊರತೆ ಮತ್ತು ಇನ್ನಿತರ ಸಮಸ್ಯೆಗಳ ಕುರಿತು 2016ರ ಆ. 11ರಂದು ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next