Advertisement
ಪಡುಬಿದ್ರಿ: ಅವಿಭಜಿತ ದ.ಕ. ಜಿಲ್ಲೆಯ ಗಡಿಭಾಗದಲ್ಲಿರುವ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾ.ಪಂ.ನ ವಿವಿಧ ಪ್ರದೇಶಗಳಲ್ಲಿ ಈ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.
ಪಡುಬಿದ್ರಿ ಪಂಚಾಯತ್ ಈಗಾಗಲೇ ನಾಲ್ಕು ಕೊಳವೆ ಬಾವಿಗಳಿಗೆ ಪ್ರಸ್ತಾವನೆಯನ್ನು ರವಾನಿಸಿದೆ. ಜಿ.ಪಂ. ಎಂಜಿನಿ ಯರಿಂಗ್ ವಿಭಾಗದ ಮೂಲಕ ನೀರು ಸರಬರಾಜು ಯೋಜನೆ ಮೂಲಕ ಯೋಜನೆಯ ಅನುಷ್ಠಾನಕ್ಕಾಗಿ 35 ಲಕ್ಷ ರೂ. ಮಂಜೂರಾಗಿದೆ. ಪಡುಬಿದ್ರಿ ಪಂಚಾಯತ್ ಹಾಗೂ ಬೋರ್ಡ್ ಶಾಲೆಯ ಬಳಿ ಎರಡು ಬೋರ್‌ವೆಲ್‌ಗಳನ್ನು ತೋಡಲಾಗಿದೆ. 5 ಸಾವಿರ ಲೀ. ಓವರ್‌ಹೆಡ್‌ನಿàರಿನ ಟ್ಯಾಂಕ್ ರಚನೆಯಾಗಬೇಕಿದ್ದು, ಇದಕ್ಕೆ ಜಾಗ ನಿಗದಿಯಾಗಬೇಕಿದೆ. ತುರ್ತು ಕ್ರಮ
ದೀನ್ ಸ್ಟ್ರೀಟ್‌ನಲ್ಲಿ ಬಾಕಿ ಇರುವ ಪೈಪ್‌ಲೈನ್ ಕಾಮಗಾರಿಗಳಿಂದಾಗಿ ಮತ್ತು ಪಾದೆಬೆಟ್ಟು ಪದ್ರ ಪ್ರದೇಶದಲ್ಲಿ ಬೋರ್‌ವೆಲ್‌ನಲ್ಲಿ ಈಗಾಗಲೇ ನೀರಿನ ಮಟ್ಟ ಕುಸಿತದಿಂದ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಇಲ್ಲಿನ ಪಂಚಾಯತ್ ಸದಸ್ಯರು ತಿಳಿಸಿದ್ದಾರೆ.
Related Articles
ಹೆಜಮಾಡಿಯ ಎಲ್ಲ ಪ್ರದೇಶಗಳಲ್ಲೂ ನೀರಿನ ಅಭಾವ ತೀವ್ರವಾಗುವ ಲಕ್ಷಣಗಳಿವೆ. ಗ್ರಾ. ಪಂ. ವ್ಯಾಪ್ತಿಯ 6 ತೆರೆದ ಬಾವಿಗಳಲ್ಲಿ 3 ಬಾವಿಗಳು ಬತ್ತತೊಡಗಿವೆ. ಇದರೊಂದಿಗೆ ನಡಿಕುದ್ರು, ಪರಪಟ್ಟ ಭಾಗದ ಜನತೆ ಕುಡಿಯುವ ನೀರಿನ ಬಣ್ಣ ಬದಲಾಗಿರುವ ಕುರಿತಾಗಿಯೂ ಪಂಚಾಯತ್‌ಗೆ ದೂರು ನೀಡಿದ್ದಾರೆ.
Advertisement
ಸದ್ಯದ ಪರಿಸ್ಥಿತಿಹೆಜಮಾಡಿ ಅಲ್‌ಅಜರ್ ಶಾಲೆ ಮುಂಭಾಗದಲ್ಲಿರುವ ಬಾವಿ, ಪಂಚಾ ಯತ್ ಹಿಂಬದಿ ಮತ್ತು ಕ್ರೀಡಾಂಗಣ ಬಳಿಯ ಬಾವಿಗಳಿಂದ ಗ್ರಾಮದ ಬಹುತೇಕ ಭಾಗಗಳಿಗೆ ಕುಡಿಯುವ ನೀರಿನ ಸರಬರಾಜನ್ನು ಸದ್ಯ ನಿರ್ವಹಿ ಸಲಾಗುತ್ತಿದೆ. ಕೊಕ್ರಾಣಿ, ಕೊಪ್ಪಲ ಭಾಗಗಳಿಗೆ ಗುಡ್ಡೆ ಅಂಗಡಿಯಲ್ಲಿನ ಎರಡು ತೆರೆದ ಬಾವಿಗಳಿಂದ ಮತ್ತು ಶಿವನಗರಕ್ಕೆ ಟೋಲ್ ಬಳಿಯ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ಬೋರುಗುಡ್ಡೆಯ ಕೊಳವೆಬಾವಿಯ ಕೆಟ್ಟುಹೋಗಿದ್ದ ಪಂಪನ್ನು ಬದಲಿಸಲಾಗಿದೆ. ಮುಂಜಾಗ್ರತೆ ಕ್ರಮವೇನು?
ಪಂಚಾಯತ್ ನೀರು, ನೈರ್ಮಲ್ಯ ಸಮಿತಿ ಸಭೆ ಈಗಾಗಲೇ ನಡೆಸಲಾಗಿದೆ. 2000 ಲೀಟರ್ ನೀರಿನ ಟ್ಯಾಂಕನ್ನು ವಾಹನದಲ್ಲಿರಿಸಿ ಖಾಸಗಿ ಬಾವಿಯಿಂದ ನೀರು ಪಡೆದು, ನಡಿಕುದ್ರು, ಪರಪಟ್ಟು, ಕೊಕ್ರಾಣಿ, ಅವರಾಲು ಮಟ್ಟು ಪ್ರದೇಶಗಳ ನೀರಿಲ್ಲದ ನಿವಾಸಿಗಳಿಗೆ ಪ್ರಾಶಸ್ತ್ಯದ ಮೇಲೆ ನೀಡಲಾಗುತ್ತಿದೆ. ಯೋಜನೆ ಏನು?
ಹೆಜಮಾಡಿ ಗುಂಡಿ ಪ್ರದೇಶದ ಖಾಸಗಿ ವ್ಯಕ್ತಿಯೊಬ್ಬರು ದಾನ ರೂಪದಲ್ಲಿ ನೀಡುವ ಜಾಗದಲ್ಲಿ ತೆರೆದ ಬಾವಿ ತೋಡಲು 14 ಲಕ್ಷ ರೂ.ಗಳ ಯೋಜನೆಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪೈಪ್‌ಲೈನ್ ವಿಸ್ತರಣೆ
ಕೆಲವು ಕಡೆಗಳಿಗೆ ನೀರಿನ ಪೈಪ್‌ಲೈನ್ ವಿಸ್ತರಣೆ ಕೆಲಸ ಆಗಬೇಕಿದ್ದು, ಬಳಿಕ ನೀರಿನ ಸಮಸ್ಯೆ ಪರಿಹಾರ ಕಾಣಿಲಿಸದೆ.
– ಪಂಚಾಕ್ಷರೀ ಸ್ವಾಮಿ, ಪಿಡಿಒ ಪಡುಬಿದ್ರಿ ಗ್ರಾ.ಪಂ. ಸಿದ್ಧ
ಈ ಬೇಸಗೆಯಲ್ಲಿ ಕುಡಿಯುವ ನೀರಿನ ಬಾಧೆ ತಣಿಸಲು ಗ್ರಾ.ಪಂ. ಸಮರೋಪಾದಿಯಲ್ಲಿ ಸಿದ್ಧವಾಗಿದೆ.
– ಮಮತಾ ಶೆಟ್ಟಿ, ಪಿಡಿಒ, ಹೆಜಮಾಡಿ - ಆರಾಮ