Advertisement

ಹೋರಾಟಗಾರ್ತಿಯರ ಕೃತಿಯಲ್ಲಿ ರಾಣಿ ಅಬ್ಬಕ್ಕ!

11:20 PM Jan 27, 2022 | Team Udayavani |

ಹೊಸದಿಲ್ಲಿ: ಭಾರತ ಸ್ವಾತಂತ್ರೊéàತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಾಯಕ ಸಚಿವೆ ಮೀನಾಕ್ಷಿ ಲೇಖೀ “ಇಂಡಿಯಾಸ್‌ ವುಮೆನ್‌ ಅನ್ಸಂಗ್‌ ಹೀರೋಸ್‌’ ಪುಸ್ತಕ ಬಿಡುಗಡೆ ಮಾಡಿದ್ದಾರೆ.

Advertisement

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಿಚಿತರಲ್ಲದ 20 ಹೋರಾಟ­ಗಾರ್ತಿಯರು ಇಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ರಾಣಿ ಅಬ್ಬಕ್ಕ ಕೂಡ ಇಲ್ಲಿ ಸ್ಥಾನ ಪಡೆದಿದ್ದಾರೆ. 16ನೇ ಶತಮಾನದಲ್ಲಿ ಈ ರಾಣಿ ಪೋರ್ಚು­ಗೀಸರನ್ನು ಹಿಮ್ಮೆಟ್ಟಿಸಿದ್ದರು. ಕೆಲವು ದಶಕಗಳ ಕಾಲ ವಿದೇಶಿ ದಾಳಿಯನ್ನು ಪೂರ್ಣ­ವಾಗಿ ನಿಯಂತ್ರಿಸಿದ್ದರು. ಈಕೆಯ ಚರಿತ್ರೆ ಕರ್ನಾಟಕದಲ್ಲಿ ಪಠ್ಯಪುಸ್ತಕದಲ್ಲೂ ಸೇರಿತ್ತು.

ಅಬ್ಬಕ್ಕ ಅಲ್ಲದೇ ವೇಲು ನಾಚಿಯರ್‌, ಝಲ್ಕಾರಿ  ಬಾಯಿ, ಮಾತಂಗಿನಿ ಹಾಝಾ, ಗುಲಾಬ್‌ ಕೌರ್‌, ಚಕಲಿ ಇಲ್ಲಮ್ಮಾ, ಪದ್ಮಜಾ ನಾಯ್ಡು, ಬಿಶ್ನಿ ದೇವಿ ಶಾ, ದುರ್ಗಾವತಿ ದೇವಿ, ಸುಚೇತಾ ಕೃಪಲಾನಿ ಅಂತಹ ಹೋರಾಟ­ಗಾರ್ತಿಯರ ಪರಿಚಯವೂ ಇಲ್ಲಿದೆ. ಸಂಸ್ಕೃತಿ ಸಚಿವಾಲಯವು ಅಮರ ಚಿತ್ರಕಥಾ ಸಹಯೋಗದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿದೆ. ಇದರಲ್ಲಿ ವರ್ಣರಂಜಿತ ಚಿತ್ರಗಳಿವೆ. ಹಾಗೆಯೇ ಈ ವೀರನಾರಿಯರ ಹೋರಾಟದ ವಿವರವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next