Advertisement

ಬೈಲಹೊಂಗಲ; ಸಿಗದ ನಿರೀಕ್ಷಿ ತ ಬೆಂಬಲ

10:43 PM Jan 09, 2022 | Team Udayavani |

ಬೈಲಹೊಂಗಲ: ಕೋವಿಡ್‌ ರೂಪಾಂತರಿ ವೈರಸ್‌ ಒಮಿಕ್ರಾನ್‌ ವಿಶ್ವಾದ್ಯಂತ ಪಸರಿಸಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಶನಿವಾರ ಹಾಗೂ ರವಿವಾರ ಘೋಷಿಸಿದ ವೀಕೆಂಡ್‌ ಕರ್ಫ್ಯೂಗೆ ಜನರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ.

Advertisement

ಶನಿವಾರ ಬೆಳಗ್ಗೆ ಅಂಗಡಿ-ಮುಂಗಟ್ಟು ಬಂದ್‌ ಆಗಿದ್ದವು. ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ ವ್ಯವಸ್ಯೆ ಇದ್ದಿದ್ದರಿಂದ ಗ್ರಾಹಕರು ಮುಂಭಾಗದಲ್ಲಿ ನಿಂತು ಉಪಹಾರ ಸವಿದರು. ಕೆಲವು ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಇಲ್ಲದ್ದರಿಂದ ಬಂದ್‌ ಮಾಡಿದ್ದರು. ಜನತೆ ರಸ್ತೆಯುದ್ದಕ್ಕೂ ಸಂಜೆ ಹೊತ್ತಿನವರೆಗೆ ಅಲೆಯುತ್ತಿರುವುದು ಕಂಡು ಬಂತು. ಸಾರಿಗೆ ಬಸ್‌ ಸಂಚಾರವಿದ್ದರು ಪ್ರಯಾಣಿಕರಿಲ್ಲದೇ ಬಸ್‌ಗಳು ಖಾಲಿ ಒಡಾಡುತ್ತಿದ್ದವು.

ಮಾರುಕಟ್ಟೆಯಲ್ಲಿ ಅಂಗಡಿ-ಮುಂಗಟ್ಟು ಬಂದ್‌ ಆಗಿರುತ್ತವೆ. ಗ್ರಾಮೀಣ ಜನತೆ ಇಲ್ಲಗೆ ಬಂದು ಏನು ಮಾಡಬೇಕು? ಎನ್ನುವುದೇ ಸಾರ್ವಜನಿಕರಲ್ಲಿ ಜಿಜ್ಞಾಸೆ ಮೂಡಿಸಿತ್ತು. ಸುಮ್ಮನೇ ಇಂಧನ ವ್ಯರ್ಥ, ಸರ್ಕಾರಕ್ಕೆ ನಷ್ಟವಲ್ಲವೇ? ಎಂದು ಸಾರ್ವಜನಿಕರು ಸರ್ಕಾರದ ದಂದ್ವ ನಿರ್ಧಾರಕ್ಕೆ ಹಿಡಿಶಾಪ ಹಾಕುವ ಮಾತುಗಳು ಕೇಳಿಬಂದವು

 

Advertisement

Udayavani is now on Telegram. Click here to join our channel and stay updated with the latest news.

Next