Advertisement

ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ

12:47 PM Oct 05, 2024 | sudhir |

ವಿಜಯಪುರ: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬುವುದು ಕಾಂಗ್ರೆಸ್ ನವರ ಭ್ರಮೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಜಿಲ್ಲೆಯ ಇಂಡಿ ತಾಲೂಕಿನ ಕ್ಯಾತನಕೇರಿ ಗ್ರಾಮದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಬೇಕಾದ ಆರೋಪ ಮಾಡಲಿ. ನಾವು ಯಾವುದಕ್ಕೂ ಮಣಿಯಲ್ಲ. ಈ ರೀತಿ ಆರೋಪ ಮಾಡುವುದು ನಾಚಿಗೇಡಿತನ ಎಂದು ಟೀಕಿಸಿದರು.

ಈ ಹಿಂದೆ ನಮ್ಮದೇ ಸಂಸದರಾಗಿದ್ದ ಸಿದ್ಧೇಶ್ವರ ಮೇಲೆ ಇಡಿ ಅಸ್ತ್ರ ಬಳಕೆ ಮಾಡಿತ್ತು. ನಮ್ಮ ಸರ್ಕಾರ ಇದ್ದಾಗಲೂ ದಾಳಿ ಆಗಿತ್ತು. ನಾವು ಯಾವುದಕ್ಕೂ ಮಣಿಯಲ್ಲ ಎಂದು ಜಿಗಜಿಣಗಿ ತಿಳಿಸಿದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅಥವಾ ಕಾಂಗ್ರೆಸ್ ನಲ್ಲಿ ಬೇರೆ ಯಾರೇ ಆದರೂ ಸಿಎಂ ಆಗಲಿ ನಮಗೆ ಬಹಳ ಖುಷಿ. ರಾಜ್ಯದಲ್ಲಿ ದಲಿತರು ಸಿಎಂ ಆಗಲಿ ಎಂಬುದು ನನ್ನ ಆಶಯ. ನಾನು ಜೀವಂತ ಇರುವವರೆಗೂ ದಲಿತ ಸಿಎಂ ಆಗಬೇಕೆಂದು ನಾನು ಹೋರಾಟ ಮಾಡುವೆ. ಈ ವಿಚಾರದಲ್ಲಿ ನಾನು ಬಿಜೆಪಿಯಲ್ಲೂ ಪ್ರಶ್ನೆ ಮಾಡುವೆ, ಸುಮ್ಮನಿರಲ್ಲ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಜಿಗಜಿಣಗಿ, ಇದರಲ್ಲಿ ಜಿ.ಟಿ.ದೇವೇಗೌಡ ಸಹ ಶಾಮೀಲಾಗಿದ್ದಾರೆ. ನನ್ನ ಮೇಲೂ ಆರೋಪ ಬರಬಹುದು ಎಂದು ಸಿಎಂ ಸಿದ್ದರಾಮಯ್ಯ ಪರ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

ಇದನ್ನೂ ಓದಿ: Threats: ವಡೋದರಾ, ರಾಜ್‌ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್

Advertisement

Udayavani is now on Telegram. Click here to join our channel and stay updated with the latest news.

Next