Advertisement
ಕಿನ್ನಿಗೋಳಿ ಪೇಟೆಯಲ್ಲಿ 20 ವರ್ಷಗಳ ಹಿಂದೆ ಇದ್ದ ರಸ್ತೆ ಇಂದು ಅದೇ ಸ್ಥಿತಿಯಲ್ಲಿದೆ. ಆದರೇ ವಾಹನಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ. ಅದರ ನಡುವೆ ಮಾರುಕಟ್ಟೆಗೆ, ಕಚೇರಿಗೆ ಮತ್ತಿತರ ದಿನನಿತ್ಯದ ಕೆಲಸಗಳಿಗೆ ಬರುವರ ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ, ಅಂಗಡಿಗಳಿಗೆ ಬರುವ ಸರಕು ಸಾಗಾಟಗಳ ಲಾರಿಗಳು ನಿಂತರೆ, ಮುಖ್ಯ ರಸ್ತೆಯಲ್ಲಿ ಎರಡು ವಾಹನ ಸಂಚಾರಕ್ಕೆ ಜಾಗವಿಲ್ಲ, ರವಿವಾರ ಹಾಗೂ ಸೀಸನ್ ಸಮಯದಲ್ಲಿ ಮುಖ್ಯ ರಸ್ತೆಯ ಚರ್ಚ್ ಕಟ್ಟಡದಿಂದ ಬಸ್ ನಿಲ್ದಾಣ, ಗಣೇಶ ಕಟ್ಟೆಯ ತನಕ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಇರುತ್ತದೆ. ಇದರಿಂದ ಪದೇ ಪದೇ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
Related Articles
- -ಮುಖ್ಯರಸ್ತೆಯಲ್ಲಿನ ರಿಕ್ಷಾ ಪಾರ್ಕ್ ಸ್ಥಳಾಂತರಿಸಿದರೇ ಉತ್ತಮ, ಅಥವಾ ಕನಿಷ್ಟ ಐದು ರಿಕ್ಷಾಗಳಿಗೆ ಅವಕಾಶ
- -ಮುಖ್ಯ ರಸ್ತೆಯ ಇಕ್ಕಲೆಗಳಲ್ಲಿ ಫುಟ್‌ಪಾತ್ ನಿರ್ಮಾಣ .
- -ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣಬಳಿ ಹಾಗೂ ಮಾರ್ಕೆಟ್ ಹತ್ತಿರ ವಾಹನ ದಟ್ಟಣೆಯನ್ನು ಟ್ರಾಫಿಕ್ ಪೊಲೀಸ್ ನಿಯುಕ್ತಿಗೊಳಿಸಬೇಕು.
- -ಗ್ರಾಹಕರಿಗೆ ಪೇಟೆಗ ಬರುವ ಗ್ರಾಹಕರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ನಿಲ್ದಾಣ ಅಗತ್ಯವಿದೆ.
- -ಪಾದಚಾರಿಗಳಿಗೆ ರಸ್ತೆ ದಾಟಲು ನಿಗದಿತ ಝೀಬ್ರಾ ಕ್ರಾಸಿಂಗ್ ಅಗತ್ಯವಿದೆ.
- -ಅನುಗ್ರಹ ಸಭಾಭವನದ ಮುಂದುಗಡೆ ಮಂಗಳೂರು ಹಾಗೂ ಮೂಲ್ಕಿ ಹೋಗುವ ಬಸ್‌ಗಳು ನಿಲುಗಡೆಗೆ ಅವಕಾಶ ಕೊಟ್ಟರು ಸಮಯದ ಮಿತಿಯಲ್ಲಿ ಇರಬೇಕು.
- -ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಗೊಂಡ ಬಳಿಕ ಸಂಚಾರ ಠಾಣೆಯ ಅಧಿಕಾರಿಗಳು ಗ್ರಾಮಸ್ಥರ ಸೇರುವಿಕೆಯಲ್ಲಿ ಸಭೆ ನಡೆದು ವ್ಯವಸ್ಥೆಯ ಬಗ್ಗೆ ಪೇಟೆಯಲ್ಲಿ ಪರಿಶೀಲನೆ ಮಾಡಲಾಯಿತು. ಆದರೇ ಕಾರ್ಯಗತವಾಗಿಲ್ಲ.
Advertisement
ಶಾಸಕರ ಜತೆ ಸಭೆ ನಡೆಸಿ ತಿರ್ಮಾನ: ಕೆಲವೊಂದು ಫಲಕ ಹಾಕಲು ಹಾಗೂ ನೋ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ತಾಂತ್ರಿಕ ಸಮಸ್ಯೆ ಇದ್ದು ಸದ್ರಿ ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ರಿಕ್ಷಾ ಪಾರ್ಕ್ ಮಾರುಕಟ್ಟೆಯ ಬಳಿ ಸ್ಥಳಾಂತರ ಮಾಡಲಾಗಿದ್ದು ಗುರುತು ಮಾಡಿ ಕೊಡಲಾಗಿದೆ. ಇನ್ನು ಅನುಗ್ರಹ ಸಭಾಗೃಹದದ ಮುಂದೆ ರಿಕ್ಷಾ ಪಾರ್ಕ್ ಮಾಡುವಲ್ಲಿ ಹಾಗೂ ಇನ್ನಿತರ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಶಾಸಕರ ಮೂಲಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗಿದೆ. – ಸಾಯೀಶ್ ಚೌಟ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಕಿನ್ನಿಗೋಳಿ
-ರಘುನಾಥ ಕಾಮತ್ ಕೆಂಚನಕೆರೆ