Advertisement
ನಿತ್ಯವೂ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಸಮೀ ಪದ ಜಿಲ್ಲಾ ಸಂಕೀರ್ಣ ಆಧಾರ್ ಕಾರ್ಡ್ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಸಾರ್ವಜನಿಕರ ಆಕ್ರೋಶ: ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗ್ರಾಪಂ ನಾಡ ಕಚೇರಿ, ಅಂಚೆ ಕಚೇರಿಗಳಲ್ಲೇ ಆಧಾರ್ ಕೇಂದ್ರಗಳನ್ನು ತೆರೆಯಬೇಕೆಂಬ ಆದೇಶ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಸಹ ನೀಡುತ್ತಿಲ್ಲ. ಇದರಿಂದ ಈವರೆಗೂ ಆಧಾರ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ದಿನಕ್ಕೆ 35 ಟೋಕನ್ ಮಾತ್ರ: ದಿನವೂ ಸೂರ್ಯ ಉದಯಿಸುವ ಮುನ್ನವೇ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಟೋಕನ್‌ಗಳನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ಕಾಯುತ್ತಿದ್ದಾರೆ. ಬೆಳಿಗ್ಗೆ 10.30ಕ್ಕೆ ಬಾಗಿಲು ತೆರೆಯುವುದನ್ನೇ ಕಾದು ಟೋಕನ್ ಪಡೆಯುತ್ತಾರೆ. ದಿನವೊಂದಕ್ಕೆ ಕೇವಲ 35 ಜನರಿಗೆ ಮಾತ್ರ ವಿತರಣೆ ಆಗುತ್ತಿದೆ. ಹೊಸದಾಗಿ ಆಧಾರ್ ಹಾಗೂ ತಿದ್ದು ಪಡಿ ಮಾಡಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಚಿಕ್ಕ ವåಕ್ಕಳಿಗೂ ಆಧಾರ್ ಮಾಡಿಸುವ ಉದ್ದೇಶದಿಂದ ಮಕ್ಕಳೊಂದಿಗೆ ಪೋಷಕರು ಬರುತ್ತಿದ್ದಾರೆ. ತಿಂಡಿಗೂ ಹೋಗಲು ಸಾಧ್ಯವಾಗದೇ, ಅಲ್ಲೆ ತರಿಸಿಕೊಂಡು ತಿಂಡಿ ಸೇವಿಸುವಂತಹ ಪರಿಸ್ಥಿತಿ ಎದುರಾಗಿದೆ.
ಆಧಾರ್‌ಗಾಗಿ ನಿತ್ಯವೂ ಅಲೆದಾಡುವಂತಾಗಿದೆ. ಅಲ್ಲದೆ ಆಧಾರ್ ನೋಂದಣಿ ದಿನಕ್ಕೆ ಕೇವಲ 35ಕ್ಕೆ ಮಿತಿಗೊಳಿಸಲಾಗಿದೆ. ಬೆಳಗ್ಗೆಯೇ ಬಂದು ಕಾಯುತ್ತಿದ್ದರೂ ನೋಂದಣಿಯಾಗುತ್ತಿಲ್ಲ. ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಹೀಗಾಗ ಸರ್ಕಾರ ಇನ್ನಾದರೂ ಆಧಾರ್ ಸಮಸ್ಯೆಯನ್ನು ಪರಿಹರಿಸಬೇಕು ಎಂದು ದೊಡ್ಡಬಳ್ಳಾಪುರದ ನಿವಾಸಿ ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.
● ಎಸ್ ಮಹೇಶ್