Advertisement

ಗ್ರಾಮೀಣ ಮಟ್ಟದ ಬ್ಯಾಂಕಿಂಗ್‌ನಲ್ಲಿ ಕಾಣದ ಪ್ರಗತಿ

06:15 AM Jun 29, 2018 | Team Udayavani |

ಮಂಡ್ಯ: ಭಾರತೀಯ ರಿಸರ್ವ್‌ ಬ್ಯಾಂಕ್‌ ಆಶಯದಂತೆ ಗ್ರಾಮೀಣ ಜನರ ಮನೆ ಬಾಗಿಲಿಗೆ ಬ್ಯಾಂಕ್‌ ಸೌಲಭ್ಯ ನೀಡಲು ಜಿಲ್ಲೆಯ ಶೇ.80ರಷ್ಟು ಪಂಚಾಯಿತಿಗಳಲ್ಲಿ ಬ್ಯಾಂಕುಗಳನ್ನು ತೆರೆಯಲಾಗಿದೆ. ಆದರೆ, ವ್ಯವಹಾರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ನಿರಾಸೆಗೆ ಕಾರಣವಾಗಿದೆ.

Advertisement

ಜಿಲ್ಲೆಯಲ್ಲಿ 241 ಗ್ರಾಪಂಗಳಿವೆ.ಜಿಲ್ಲೆಯೊಳಗೆ ಪ್ರತಿ 2 ಕಿ.ಮೀ.ವ್ಯಾಪ್ತಿಯಲ್ಲೇ ಬ್ಯಾಂಕಿಂಗ್‌ ಸೌಲಭ್ಯವಿದೆ.ಆದರೆ, ಜನರ ನಿರಾಸಕ್ತಿ ಎಸ್‌ಬಿಐ ಉದ್ದೇಶ ಸಾಧನೆಗೆ ಹಿನ್ನಡೆಯಾಗಿದೆ.

ಜನರ ಮನವೊಲಿಕೆಗೆ ಯತ್ನ: ಪ್ರತಿ ಗ್ರಾಪಂ ಕೇಂದ್ರದಲ್ಲೂ ಒಂದು ಬ್ಯಾಂಕ್‌ ಶಾಖೆ ಅಥವಾ ಎಟಿಎಂ ಕೇಂದ್ರ ಹೊಂದಿರುವಂತಹ ಕಾರ್ಯಕ್ರಮವನ್ನು ಎಸ್‌ಬಿಐ ಹೊಂದಿದೆ. ಸ್ಥಳೀಯವಾಗಿ ವ್ಯವಹಾರ ನಡೆಸುವಂತೆ ಜನರ ಮನವೊಲಿಸಲಾಗುತ್ತಿದ್ದರೂ ವ್ಯವಹಾರಕ್ಕಾಗಿ ಗ್ರಾಮೀಣ ಜನರು ಪಟ್ಟಣಗಳಿಗೆ ಹೋಗುವುದು ತಪ್ಪಿಲ್ಲ. ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಪ್ರಶ್ನಿಸಿದರೆ, ನಮ್ಮ ಅಕೌಂಟ್‌ ಪಟ್ಟಣದಲ್ಲಿದೆ ಎನ್ನುತ್ತಾರೆ.

18 ರಿಂದ 20 ಲಕ್ಷ ರೂ. ಖರ್ಚು: ಒಂದು ಬ್ಯಾಂಕ್‌ ಶಾಖೆ ಆರಂಭಿಸಬೇಕಾದರೆ ಕನಿಷ್ಠ 18 ಲಕ್ಷ ರೂ.ನಿಂದ 20 ಲಕ್ಷ ರೂ. ಅಗತ್ಯವಿದೆ. ಅಷ್ಟು ಹಣ ಖರ್ಚು ಮಾಡಿ ಶಾಖೆಯನ್ನು ತೆರೆಯಲಾಗಿದ್ದರೂ ಗ್ರಾಮ ದ ಶೇ.70 ಜನರು ವ್ಯವಹಾರವನ್ನು ಹೋಬಳಿ, ಪಟ್ಟಣದ ಬ್ಯಾಂಕುಗಳಲ್ಲಿಯೇ ಮಾಡುತ್ತಿದ್ದಾರೆ. ಶೇ.30 ಜನರು ಮಾತ್ರ ಇಲ್ಲಿ ವ್ಯವಹರಿಸುತ್ತಿದ್ದಾರೆ.

ಬ್ಯಾಂಕ್‌ ಮಿತ್ರರ ಬಗ್ಗೆ ನಂಬಿಕೆ ಇಲ್ಲ: ಗ್ರಾಪಂ ಕೇಂದ್ರದ ಸನಿಹ ಜನರ ಆರ್ಥಿಕ ವ್ಯವಹಾರಕ್ಕಾಗಿ ಬ್ಯಾಂಕ್‌ ಮಿತ್ರರನ್ನು ನೇಮಿಸಲಾಗಿದೆ. ಅವರ ಕೈಗೆ 5ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ಹಣ ನೀಡಿ ಠೇವಣಿ ಸ್ವೀಕ ರಿ ಸುವ ಹಾಗೂ ನಗದೀಕರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ಹಳ್ಳಿ ಜನರು ಇವರನ್ನು ನಂಬುತ್ತಿಲ್ಲ ಎನ್ನಲಾಗಿದೆ.

Advertisement

ಆರ್ಥಿಕ ತೊಂದರೆ: ಗ್ರಾಮೀಣ ಪ್ರದೇಶದಲ್ಲಿ 4 ವರ್ಷಗಳಿಂದ ಬರಗಾಲ,ಬೆಳೆ ನಷ್ಟಕ್ಕೊಳಗಾಗಿ
ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲ. ಕೃಷಿಕರಿಗೆ ಬೇರೆ ಆದಾಯ ಮೂಲಗಳೂ ಇಲ್ಲ. ಬ್ಯಾಂಕಿಗೆ 5 ರಿಂದ 10 ಸಾವಿರ ರೂ. ಠೇವಣಿ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಜನರ ಹಣ ಕೃಷಿಗೆ, ಅವರ ಜೀವನಕ್ಕೆ ಹೂಡಿಕೆ ಯಾಗುವ ಕಾರಣ ಬ್ಯಾಂಕಿನ ಕಡೆ ಬರುತ್ತಿಲ್ಲ. ಕೆಲವರು ಶೂನ್ಯ ಖಾತೆ ಎಂಬ
ಕಾರ ಣಕ್ಕೆ ಅಕೌಂಟ್‌ ತೆರೆದಿದ್ದಾರೆ.

ಪಂಚಾಯ್ತಿ ಮಟ್ಟದಲ್ಲಿ ಬ್ಯಾಂಕುಗಳನ್ನು ತೆರೆಯಲಾಗಿದ್ದರೂ, ಜನರಿಂದ ನಿರೀಕ್ಷಿತ ಮಟ್ಟದಲ್ಲಿ ವ್ಯವಹಾರ ಮಾತ್ರ ನಡೆಯುತ್ತಿಲ್ಲ. ಗ್ರಾಪಂ ಮಟ್ಟದ ಬ್ಯಾಂಕುಗಳಲ್ಲಿ ಶೇ.20-30ರಷ್ಟು ವ್ಯವಹಾರ ನಡೆಯುತ್ತಿದೆ.
– ಪ್ರಭು ದೇವ್‌
ಜಿಲ್ಲಾ ವ್ಯವಸ್ಥಾಪಕರು, ಲೀಡ್‌ ಬ್ಯಾಂಕ್‌

ಬೆಳೆನಷ್ಟ, ಬರಗಾಲದಿಂದ ರೈತರ ಬಳಿ ಹಣವಿಲ್ಲ. ಯುವ ಕರು ಉದ್ಯೋಗಕ್ಕಾಗಿ ನಗರ ಸೇರಿದ್ದಾರೆ. ಆದ ಕಾರಣ ಬ್ಯಾಂಕಿಂಗ್‌ ವ್ಯವಹಾರ ಪ್ರಗತಿ ಕಾಣುತ್ತಿಲ್ಲ. ರೈತರಿಗೆ ಆರ್ಥಿಕ ಬಲ ತುಂಬುವ ವ್ಯವಸ್ಥೆ ಜಾರಿಯಾದರೆಗ್ರಾಮೀಣ ಬ್ಯಾಂಕಿಂಗ್‌ ಚೇತರಿಕೆ ಕಾಣಲಿದೆ.
– ಶಂಭೂನ ಹಳ್ಳಿ ಸುರೇಶ್‌
ಜಿಲ್ಲಾ ಧ್ಯಕ್ಷ, ರೈತ ಸಂಘ

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next