Advertisement
ಬಜಗೋಳಿ ಪೇಟೆಯ ಆರ್.ಕೆ. ನಗರದ ಆರಂಭದಲ್ಲಿ ರಸ್ತೆ ವಿಭಾಜಕ ನಿರ್ಮಿಸದೆ ಇರುವುದರಿಂದ ಪ್ರವಾಸಿ ವಾಹನ ಸವಾರರು ರಸ್ತೆ ವಿಭಾಜಕದ ಅರಿವಿಲ್ಲದೆ ಸಂಚರಿಸುವುದರಿಂದ ಮತ್ತೂಂದು ಪಾರ್ಶ್ವದ ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆಯುವಂತಾಗಿದೆ. ಮಳೆ ಸುರಿಯುವ ಸಂದರ್ಭ, ರಾತ್ರಿ ಹೊತ್ತು ವಾಹನ ಸವಾರರಿಗೆ ಇದು ಗಮನಕ್ಕೆ ಬಾರದೆ ತೊಂದರೆಯುಂಟಾಗುತ್ತಿದೆ.
ಶೃಂಗೇರಿ, ಧರ್ಮಸ್ಥಳ ಕಡೆಗೆ ಸಂಚರಿಸುವ ವಾಹನಗಳು ಅತಿ ವೇಗವಾಗಿ ಬಜಗೋಳಿ ಪೇಟೆಯ ಬಸ್ ತಂಗುದಾಣ ಮಾರ್ಗವಾಗಿಯೇ ಸಂಚರಿಸುವುದರಿಂದ ಇಲ್ಲಿ ರಸ್ತೆ ಉಬ್ಬು ಅಳವಡಿಸಬೇಕಾಗಿರುವುದು ಅತ್ಯವಶ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ರಸ್ತೆ ದಾಟಲು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರಸ್ತೆ ಉಬ್ಬು ನಿರ್ಮಿಸಿದಲ್ಲಿ ವೇಗಕ್ಕೆ ಕಡಿವಾಣ ಹಾಕುವುದರ ಜತೆಗೆ ಸಂಭವನೀಯ ಅವಘಡವನ್ನೂ ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು. ಈ ರಸ್ತೆಯಲ್ಲಿ ರಿಫ್ಲೆಕ್ಟರ್ ಹಾಗೂ ಯಾತ್ರಾರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡುವ ಸೂಚನ ಫಲಕಗಳಿಲ್ಲದ ಕಾರಣ ವಾಹನ ಸವಾರರು ರಾತ್ರಿ ವೇಳೆಯಲ್ಲಿ ಗೊಂದಲಕ್ಕೆ ಈಡಾಗುವ ಘಟನೆಗಳು ನಡೆದಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.
Related Articles
ಇತ್ತೀಚೆಗಿನ ದಿನಗಳಲ್ಲಿ ಬಜಗೋಳಿ ಪೇಟೆಯಲ್ಲಿ ಅಪಘಾತಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ರಿಫ್ಲೆಕ್ಟರ್ ಅಳವಡಿಸುವ ಜತೆಗೆ ಇಲಾಖೆಯ ವತಿಯಿಂದ ದಾರಿದೀಪ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸೋಮ್‌ಶೇಖರ್, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕಾರ್ಕಳ
Advertisement
ದಾರಿ ದೀಪ ಇಲ್ಲಪೇಟೆಯಲ್ಲಿರುವ ರಸ್ತೆ ವಿಭಾಜಕಕ್ಕೆ ದಾರಿದೀಪ ಅಳವಡಿಸದೆ ಇರುವುದರಿಂದ ವಾಹನ ಸವಾರರಿಗೆ ಇದರ ಅರಿಲ್ಲದೆ ನಿರಂತರ ಅವಘಡ ಸಂಭವಿಸುವಂತಾಗಿದೆ. ರಸ್ತೆ ವಿಸ್ತರಣೆ ಸಂದರ್ಭ ಇದ್ದ ಕೆಲ ದಾರಿದೀಪಗಳನ್ನು ತೆರವುಗೊಳಿಸಲಾಗಿದ್ದು, ಪೇಟೆಯ ನಡುವೆ ಹಾದುಹೋಗಿರುವ ಎಲ್ಲ ರಸ್ತೆ ವಿಭಾಜಕದ ಭಾಗಗಳಲ್ಲಿ ದಾರಿದೀಪ ಅತ್ಯವಶ್ಯಕವಾಗಿದೆ. ಅಲ್ಲದೆ ಇದಕ್ಕೆ ಬಣ್ಣ ಬಳಿಯುವುದೂ ಅತ್ಯವಶ್ಯಕ. ರಿಫ್ಲೆಕ್ಟರ್ ಅಳವಡಿಸಿ
ಬಜಗೋಳಿ ಪೇಟೆಯಲ್ಲಿ ದಾರಿದೀಪದ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಇದರ ಜತೆಗೆ ರಸ್ತೆ ವಿಭಾಜಕಗಳಿಗೆ ಸೂಕ್ತ ರಿಫ್ಲೆಕ್ಟರ್ ಅಳವಡಿಸಿ ಅಪಘಾತ ತಪ್ಪಿಸಬಹುದಾಗಿದೆ.
-ಜಿತೇಶ್ ಪೂಜಾರಿ, ಬಜಗೋಳಿ