Advertisement

ಬೇಡಿಕೆಯಿದ್ದರೂ ಪೂರೈಕೆಯಾಗದ ಎಳನೀರು

02:35 AM Apr 05, 2019 | sudhir |

ಕುಂದಾಪುರ: ಬೇಸಗೆಯ ಧಗೆ ಹೆಚ್ಚುತ್ತಿರುವುದರಿಂದ ಬಹುತೇಕ ಮಂದಿ ಈಗ ಎಳನೀರಿಗೆ (ಬೊಂಡ) ಮೊರೆ ಹೋಗುತ್ತಿದ್ದು, ಎಲ್ಲೆಡೆ ವ್ಯಾಪಾರದ ಭರಾಟೆ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶ ಸಹಿತ ನಗರ ಭಾಗಗಳಲ್ಲಿ ಬೇಡಿಕೆಯಿದ್ದರೂ, ಅಗತ್ಯ ವಿರುವಷ್ಟು ಎಳನೀರು ಪೂರೈಕೆ ಯಾಗುತ್ತಿಲ್ಲ.

Advertisement

ಒಂದೆಡೆ ರಾಜಕೀಯ ಪಕ್ಷಗಳ ಚುನಾವಣ ಪ್ರಚಾರ, ಸಭೆ, ಸಮಾ ವೇಶ, ರ್ಯಾಲಿಗಳಲ್ಲಿಯೂ ಎಳನೀರಿಗೆ ಭಾರೀ ಬೇಡಿಕೆಯಿದೆ. ಮತ್ತೂಂದೆಡೆ ಬಿಸಿಲಿನ ಝಳದಿಂದ ಬಸವಳಿದ ಜನ ತಂಪಾಗಿಸಲು ಇದರ ಮೊರೆ ಹೋಗುತ್ತಿದ್ದಾರೆ.

ನಗರ ಭಾಗದಲ್ಲಿ ದಿನಕ್ಕೆ ಒಬ್ಬ ವ್ಯಾಪಾರಿಗೆ ಸುಮಾರು 150 – 200 ಎಳನೀರು ಮಾರಾಟವಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 50 – 60ರಷ್ಟು ಎಳನೀರು ಮಾರಾಟ ವಾಗುತ್ತಿದೆ. ಕೆಲವೆಡೆ ಈ ಪ್ರಮಾಣ ಹೆಚ್ಚು –
ಕಡಿಮೆಯಿರುತ್ತದೆ.

ಪೂರೈಕೆಯೇ ಕಡಿಮೆ
ಎಳನೀರಿಗೆ ಈಗ ಉತ್ತಮ ಬೇಡಿಕೆ ಯಿದೆ. ಆದರೆ ಕುಂದಾಪುರದ ಬೇರೆ ಬೇರೆ ಕಡೆಗಳಿಗೆ ಶಿವಮೊಗ್ಗ, ಶಿಕಾರಿಪುರ, ಹಾಸನ, ಚಿಕ್ಕಮಗಳೂರಿನ ಬೀರೂರು ಕಡೆಯಿಂದ ಎಳನೀರು ಪೂರೈಕೆ ಮಾಡಲಾಗುತ್ತದೆ. ಅವರು ವಾರಕ್ಕೊಮ್ಮೆ ಅಥವಾ ಮೂರು ದಿನಗಳಿಗೊಮ್ಮೆ ಬಂದು ಎಳನೀರು ಪೂರೈಸಿ ಹೋಗುತ್ತಾರೆ.

ಆದರೆ ಒಂದೇ ದಿನದಲ್ಲಿ ಮುಗಿಯುವುದು ಕೂಡ ಇದೆ. ಕೆಲವೊಮ್ಮೆ ಕಡಿಮೆ ಖಾಲಿಯಾದರೂ ಹೆಚ್ಚಿನ ದಿನಗಳಲ್ಲಿ ಎಳನೀರಿಗೆ ಬೇಡಿಕೆ ಇದ್ದೇ ಇದೆ. ಆದರೆ ನಮಗೆ ಅಗತ್ಯದಷ್ಟು ಎಳನೀರಿನ ಪೂರೈಕೆಯೇ ಆಗುತ್ತಿಲ್ಲ ಎನ್ನುವುದು ಎಳನೀರು ವ್ಯಾಪಾರಿಯೊಬ್ಬರ ಅಭಿಪ್ರಾಯ.

Advertisement

ಕಾರಣವೇನು?
ಎಲ್ಲ ಕಡೆಗಳಿಂದ ಬೊಂಡಕ್ಕೆ ಬೇಡಿಕೆ ಯಿದ್ದರೂ ಈಗ ಬೇಡಿಕೆಯಷ್ಟು ಸಿಗದಿರು ವುದಕ್ಕೆ ಕಾರಣ ಅನೇಕ. ಮುಖ್ಯವಾಗಿ ಈಗ ನೀರಿನ ಸಮಸ್ಯೆಯಿಂದಾಗಿ ಇಳುವರಿ ಪ್ರಮಾಣ ಕಡಿಮೆ ಯಾಗುತ್ತಿದೆ. ತೆಂಗಿನ ಮರಕ್ಕೆ ಬೇರೆ – ಬೇರೆ ರೋಗಗಳಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಸತ್ತು ಹೋಗುತ್ತಿವೆೆ. ಇದಲ್ಲದೆ ಮಂಗಗಳ ಹಾವಳಿಯಿಂದಾಗಿ ಸಿಗುತ್ತಿರುವ ಅಲ್ಪ ಇಳುವರಿಯೂ ಬೆಳೆಗಾರರ ಕೈಗೆ ಸಿಗ ದಂತ್ತಾಗುತ್ತಿದೆ.

ಪೂರೈಕೆ ಸಾಕಾಗುವುದಿಲ್ಲ
ಆಜ್ರಿಯಲ್ಲಿ ದಿನಕ್ಕೆ ಸುಮಾರು 50 – 60 ಎಳನೀರು ಮಾರಾಟವಾಗುತ್ತದೆ. ಕೆಲವೊಮ್ಮೆ ಇದು ಹೆಚ್ಚು ಕಡಿಮೆಯೂ ಆಗಬಹುದು. ಆದರೆ ಹೆಚ್ಚಿನ ದಿನಗಳಲ್ಲಿ ಉತ್ತಮ ಮಾರಾಟವಾಗುತ್ತದೆ. ಆದರೆ ಸರಿಯಾಗಿ ಪೂರೈಕೆಯಾಗ‌ುತ್ತಿಲ್ಲ. 15 ದಿನಗಳಿಗೊಮ್ಮೆ ಶಿವಮೊಗ್ಗದಿಂದ ಬರುತ್ತಾರೆ. ಅವರು ಪೂರೈಸುವ ಎಳನೀರು ಇಲ್ಲಿಗೆ ಸಾಕಾಗುವುದಿಲ್ಲ.
-ಚಂದ್ರಶೇಖರ ಶೆಟ್ಟಿ ಆಜ್ರಿ, ಎಳನೀರು ವ್ಯಾಪಾರಸ್ಥರು

ಮರ ಏರುವವರೇ ಸಿಗುತ್ತಿಲ್ಲ
ಊರಲ್ಲಿ ಈಗ ಎಳನೀರು ಪ್ರಮಾಣ ಕಡಿಮೆಯಿದ್ದರೂ ಮರಗಳಲ್ಲಿ ಇರುವ ಎಳನೀರು ಕೀಳಲು ಜನ ಸಿಗುತ್ತಿಲ್ಲ. ಸಿಕ್ಕಿದರೂ ಅವರಿಗೆ ಒಂದು ಮರಕ್ಕೆ ಏರಲು 50 ರೂ. ನೀಡಬೇಕು. ಅದರಲ್ಲಿ ಒಳ್ಳೆಯ ಎಳನೀರು ಸಿಕ್ಕಿದರೆ ಸರಿ, ಇಲ್ಲದಿದ್ದರೆ ಅಷ್ಟು ಹಣ ತೆತ್ತು, ಮರ ಹತ್ತಿಸುವುದು ದುಬಾರಿ. ಹೊರಗಿನ ಎಳನೀರಿಗಿಂತ ಊರಿನ ಎಳನೀರಿಗೆ ಉತ್ತಮ ಬೇಡಿಕೆಯಿದ್ದರೂ ಅದನ್ನು ಕೀಳಲು ಜನ ಸಿಗುತ್ತಿಲ್ಲ.
-ಧರ್ಮರಾಯ ಶೆಣೈ ಆರ್ಗೋಡು, ಕಮಲಶಿಲೆ, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next