Advertisement

ಅಸುರಕ್ಷಿತ ವಸತಿ ಸ್ಥಳಾಂತರ; ಪರಿಹಾರ ಕೇಂದ್ರಕ್ಕೆ ಸ್ಥಳ ನಿಗದಿಗೆ ಸೂಚನೆ

05:09 AM May 14, 2019 | mahesh |

ಸುಳ್ಯ: ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸಲು ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಂಡ ರಚಿಸಬೇಕು. ನೋಡಲ್ ಅಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಮಗ್ರ ವರದಿ ತಯಾರಿಸಿ ವಾರದೊ ಳಗೆ ತಾಲೂಕು ಆಡಳಿತಕ್ಕೆ ಸಲ್ಲಿಸಬೇಕೆಂದು ಪಿಡಿಒಗಳಿಗೆ ತಹಶೀಲ್ದಾರ್‌ ಕುಂಞಿ ಅಹ್ಮದ್‌, ತಾ.ಪಂ. ಇಒ ಮಧುಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಾ.ಪಂ. ಸಭಾಂಗಣದಲ್ಲಿ ಸೋಮ ವಾರ ವಿವಿಧ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ವಿಪತ್ತು ನಿರ್ವಹಣ ಸಭೆಯಲ್ಲಿ ಅವರು ನಿರ್ದೇಶ ನೀಡಿದರು.

Advertisement

ಗ್ರಾ.ಪಂ. ವ್ಯಾಪ್ತಿಯ ಎಲ್ಲ ಸರಕಾರಿ ಇಲಾಖೆ ಅಧಿಕಾರಿಗಳು, ಆಸಕ್ತ ಸಂಘ ಸಂಸ್ಥೆಗಳು, ಶಿಕ್ಷಕರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು. ತಾಲೂಕು ಆಡಳಿತ ನಿಯೋಜಿಸಿದ ಚರ್ಚಾ ನಿಯಂತ್ರ ಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಪರಿಸ್ಥಿತಿ ನಿರ್ವಹಣೆಗೆ ವ್ಯವಸ್ಥೆ ಹಾಗೂ ಸೌಲಭ್ಯದ ಅಗತ್ಯವಿದ್ದರೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ಎಂದರು.

ಎಲ್ಲ ಇಲಾಖೆ ಅಧಿಕಾರಿಗಳ ನಡುವೆ ಸಂಪರ್ಕ ಇರಬೇಕು. ಯಾವುದೇ ಸಂದರ್ಭ ಎದುರಿಸಲು ನಾವು ಶಕ್ತವಾಗಿರ ಬೇಕು. ಪ್ರಾಕೃತಿಕ ಅವಘಡ ತಪ್ಪಿಸಲು ಬೇಕಾದ ಅಗತ್ಯ ಮುನ್ನೆಚ್ಚೆರಿಕೆ ಕ್ರಮ ಕೈಗೊಂಡಿರಬೇಕು ಎಂದು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಅವರು ಸೂಚಿಸಿದರು.

ಸಭೆ ನಡೆಸಿ ವರದಿ ಸಲ್ಲಿಸಿ
ತಾ.ಪಂ. ಇಒ ಮಧುಕುಮಾರ್‌ ಮಾತನಾಡಿ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆಯಿಂದಾಗಬಹುದಾದ ಸಮಸ್ಯೆಗಳು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸನಿಹ ಕುಮಾರಧಾರಾ ನದಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ ನೆರೆ, ಪ್ರವಾಹ ಎದುರಿಸಲು ಬೋಟ್ ಇರಿಸಬೇಕು ಎಂದು ತಹಶೀಲ್ದಾರ್‌ ಸೂಚಿಸಿದರು. ಕುಮಾರಧಾರಾ ನದಿಯಲ್ಲಿ ಹೂಳು ತುಂಬಿರುವ ಕಾರಣ ಸಣ್ಣ ಪ್ರಮಾಣದ ಮಳೆ ನೀರು ಹರಿದಾಗಲೂ ನೆರೆ ಭೀತಿ ಹಾಗೂ ಪ್ರವೇಶ ದ್ವಾರ ತನಕ ನೀರು ನುಗ್ಗುವ ಅಪಾಯ ಇದೆ. ತತ್‌ಕ್ಷಣ ಹೂಳು ತೆಗೆಸಬೇಕು ಎಂದು ಪಿಡಿಒ ಹೇಳಿದರು.

ಸಂಪಾಜೆ, ಕಲ್ಮಕಾರಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ಸಮಸ್ಯೆ ಉಂಟಾಗಿತ್ತು. ಅಲ್ಲಿ ಈ ಬಾರಿಯು ಸಮ ಸ್ಯೆಗೆ ಈಡಾಗುವ ಮೊದಲು ಅಲ್ಲಿನ ನಿವಾಸಿಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಗಂಜಿ ಕೇಂದ್ರ ಸ್ಥಾಪಿಸಲು ಸೂಕ್ತ ಸ್ಥಳ ಗುರುತಿಸುವಂತೆ ತಹಶೀಲ್ದಾರ್‌ ಮತ್ತು ಇಒ ಅವರು ನಿರ್ದೇಶನ ನೀಡಿದರು.

Advertisement

ನೆರೆ ಹಾವಳಿ ವೇಳೆ ಜಾನುವಾರುಗಳ ಸ್ಥಳಾಂತರಕ್ಕೆ ಗೋಶಾಲೆಗಳನ್ನು ಗುರುತಿಸಬೇಕು. ಖಾಸಗಿ ಗೋಶಾಲೆಗಳೊಂದಿಗೆ ಮಾತುಕತೆ ನಡೆಸುವಂತೆ ತಹಶೀಲ್ದಾರ್‌ ಪಶುವೈಧ್ಯಾಧಿಕಾರಿ ನಿತಿನ್‌ ಪ್ರಭು ಅವರಿಗೆ ಸೂಚಿಸಿದರು.

ವಾರದೊಳಗೆ ಸಮಗ್ರ ವರದಿ ಸಲ್ಲಿಸಿ
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹಬ್ಬುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರೋಗ್ಯ ಇಲಾಖೆ ಪೂರ್ವಭಾವಿಯಾಗಿ ಸೊಳ್ಳೆ ನಿಯಂತ್ರಣ, ಅಲ್ಲಲ್ಲಿ ಕ್ಯಾಂಪ್‌ ನಡೆಸಿ ಆರೋಗ್ಯ ಜಾಗೃತಿ ಮೂಡಿಸುವಂತೆ ತಾಲೂಕು ಆರೋಗ್ಯಧಿಕಾರಿ ಡಾ| ಸುಬ್ರಹ್ಮಣ್ಯ ಅವರಿಗೆ ತಹಶೀಲ್ದಾರ್‌ ಸೂಚನೆ ನೀಡಿದರು. ಅದಕ್ಕೆ ಕೈಗೊಂಡ ಕ್ರಮಗಳ ಮೊದಲಾದ ಮಾಹಿತಿಗಳ ಬಗ್ಗೆ ಪಿಡಿಒ ಅವರು ಪ್ರಾಥಮಿಕ ವರದಿ ತಯಾರಿಸಿ ಎರಡು ದಿನದೊಳಗೆ ತಾ.ಪಂ.ಗೆ ಸಲ್ಲಿಸಬೇಕು. ಬಳಿಕ ವಾರದೊಳಗೆ ತಂಡ ರಚಿಸಿ ಸಭೆ ನಡೆಸಿ ವರದಿ ನೀಡಬೇಕು ಎಂದು ಅವರು ಸೂಚಿಸಿದರು.

ನೆರೆ ಭೀತಿ: ಬೋಟ್ ಸಿದ್ಧವಿರಲಿ
ಕಳೆದ ವರ್ಷ ನೆರೆ ಹಾವಳಿಯಿಂದ ತೀವ್ರ ಸಮಸ್ಯೆಗೆ ಈಡಾದ ಸ್ಥಳದಲ್ಲಿ ಬೋಟ್ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು. ಆ ಪ್ರದೇಶ ಗುರುತಿಸಬೇಕು. ಹೊಳೆ, ತೋಡು ದಾಟುವ ಸ್ಥಳಗಳಲ್ಲಿ ಅಡಿಕೆ ಪಾಲದಂತಹ ತಾತ್ಕಾಲಿಕ ಸಂಪರ್ಕ ದಾರಿಗಳಿದ್ದಲ್ಲಿ ಅಲ್ಲಿನ ಸುರಕ್ಷತೆ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಪಾಯ ಎರಗಿ ಬಂದ ಬಳಿಕ ಕಾರ್ಯಾನ್ಮುಖವಾಗುವ ಬದಲು ಮೊದಲೇ ಸಿದ್ಧರಾಗಿರಬೇಕು ಎಂದು ತಹಶೀಲ್ದಾರ್‌ ಸೂಚಿಸಿದರು.

ಪರಿಹಾರ ಕೇಂದ್ರದಲ್ಲಿವೆ ಕುಟುಂಬಗಳು
ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಬಾರಿಯ ಪ್ರಾಕೃತಿಕ ವಿಕೋಪ ಹಾನಿ, ಕೈಗೊಂಡ ಕ್ರಮದ ಬಗ್ಗೆ ಪಿಡಿಒ ಮತ್ತು ಗ್ರಾಮಕರಣಿಕರಿಂದ ಅಭಿಪ್ರಾಯ ಆಲಿಸಲಾಯಿತು. ಕಳೆದ ಆಗಸ್ಟ್‌ನಲ್ಲಿ ಭೂ ಕುಸಿತದ ಕಾರಣ ಮಡಿಕೇರಿ ಭಾಗದ 5 ಕುಟುಂಬಗಳು ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಈಗಲೂ ಉಳಿದುಕೊಂಡಿದ್ದಾರೆ ಎಂದು ಪಿಡಿಒ ಮಾಹಿತಿ ನೀಡಿದರು.

ಕಲ್ಮಕಾರು ಬಳಿ ಗುಡ್ಡ ಬಿರುಕು ಬಿಟ್ಟ ಸ್ಥಳದಲ್ಲಿ 10 ಕುಟುಂಬದ 46 ಮಂದಿ ವಾಸ ಮಾಡುತ್ತಿದ್ದಾರೆ. ಅವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಕಲ್ಮಕಾರು ಪಿಡಿಒ ಹೇಳಿದರು. ಈ ಸ್ಥಳಕ್ಕೆ ಖುದ್ದು ಭೇಟಿ ನೀಡುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

ಮಡಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಚಿದ್ಗಲ್ಲು, ಅಂಬೆಕಲ್ಲು ಬಳಿ ಎರಡು ಮನೆಗಳಿಗೆ ಕಳೆದ ಬಾರಿ ಹಾನಿ ಉಂಟಾಗಿತ್ತು. ಆ ಎರಡು ಮನೆಯವರು ಸ್ಥಳಾಂತರಗೊಂಡಿದ್ದಾರೆ ಎಂದು ಮಡಪ್ಪಾಡಿ ಪಿಡಿಒ ಹೇಳಿದರು.

ಪಂಜ ಗ್ರಾ.ಪಂ. ವ್ಯಾಪ್ತಿಯ ಕಡಬ ಪಂಜ ರಸ್ತೆ ಪುಳಿಕುಕ್ಕು ಬಳಿ ನದಿ ನೀರು ರಸ್ತೆಗೆ ನುಗ್ಗುವ ಬಗ್ಗೆ, ಕಳಂಜ ಗ್ರಾಮ ಪಂಚಾಯತ್‌ನ ಕಿಲಂಗೋಡಿ ಬಳಿ ಎರಡು ಮನೆಗಳಿಗೆ ಗುಡ್ಡ ಕುಸಿತದ ಭೀತಿ ಇದ್ದು, ಇಲ್ಲಿ 50 ಮೀಟರ್‌ ತಡೆಗೋಡೆ ಆವಶ್ಯಕತೆ ಇರುವ ಬಗ್ಗೆ, ಕನಕಮಜಲು ಗ್ರಾಮ ಪಂಚಾಯತ್‌ನಪಂಜಿಗುಡ್ಡೆಯಲ್ಲಿ ಎರಡು ಅಪಾಯಕಾರಿ ಮರಗಳ ಬಗ್ಗೆ, ಸಂಪಾಜೆ ಕಡಪಾಲ, ಅರೆಕಲ್ಲು ಪ್ರದೇಶಲದಲ್ಲಿ ಭೂ ಕುಸಿತದ ಭೀತಿ ಬಗ್ಗೆ, ಸುಬ್ರಹ್ಮಣ್ಯದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಗಗೊಳಿಸುವಂತೆ ಆಯಾ ಗ್ರಾಮ ಪಂಚಾಯತ್‌ಪಿಡಿಒಗಳು ಸಭೆಗೆ ಮಾಹಿತಿ ನೀಡಿದರು.

ಪಶು ವೈದ್ಯಾಧಿಕಾರಿ ಡಾ| ನಿತಿನ್‌ ಪ್ರಭು, ಮನುಷ್ಯನಿಗೆ ನೀಡುವ ಪ್ರಾಮುಖ್ಯತೆಯನ್ನು ಪ್ರಾಣಿಗಳಿಗೂ ನೀಡಬೇಕು. ಹಟ್ಟಿ ಸನಿಹದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದವರು ಮನವಿ ಮಾಡಿದರು.

ರಸ್ತೆ ಬದಿಗಳಲ್ಲಿ, ಶಾಲೆ, ಮನೆ, ಅಂಗನ ವಾಡಿ ಮೊದಲಾದೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಪಟ್ಟಿ ತಯಾರಿಸಿ ತಾಲೂಕು ಆಡಳಿತಕ್ಕೆ ಸಲ್ಲಿಸಬೇಕು. ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಹೇಳಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆ ನೀರು, ತ್ಯಾಜ್ಯ ಹರಿಯುವ ಚರಂಡಿ ಸ್ವಚ್ಛಗೊಳಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮಳೆಗಾಲದ ಮೊದಲೇ ಸಿದ್ಧತೆ ನಡೆದಿರಬೇಕು ಎಂದು ಅವರು ಹೇಳಿದರು.

ಬೋಟ್ ವ್ಯವಸ್ಥೆ
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸನಿಹ ಕುಮಾರಧಾರಾ ನದಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ ನೆರೆ, ಪ್ರವಾಹ ಎದುರಿಸಲು ಬೋಟ್ ಇರಿಸಬೇಕು ಎಂದು ತಹಶೀಲ್ದಾರ್‌ ಸೂಚಿಸಿದರು. ಕುಮಾರಧಾರಾ ನದಿಯಲ್ಲಿ ಹೂಳು ತುಂಬಿರುವ ಕಾರಣ ಸಣ್ಣ ಪ್ರಮಾಣದ ಮಳೆ ನೀರು ಹರಿದಾಗಲೂ ನೆರೆ ಭೀತಿ ಹಾಗೂ ಪ್ರವೇಶ ದ್ವಾರ ತನಕ ನೀರು ನುಗ್ಗುವ ಅಪಾಯ ಇದೆ. ತತ್‌ಕ್ಷಣ ಹೂಳು ತೆಗೆಸಬೇಕು ಎಂದು ಪಿಡಿಒ ಹೇಳಿದರು.

ಗೋಶಾಲೆ
ನೆರೆ ಹಾವಳಿ ವೇಳೆ ಜಾನುವಾರುಗಳ ಸ್ಥಳಾಂತರಕ್ಕೆ ಗೋಶಾಲೆಗಳನ್ನು ಗುರುತಿಸಬೇಕು. ಖಾಸಗಿ ಗೋಶಾಲೆಗಳೊಂದಿಗೆ ಮಾತುಕತೆ ನಡೆಸುವಂತೆ ತಹಶೀಲ್ದಾರ್‌ ಪಶುವೈಧ್ಯಾಧಿಕಾರಿ ನಿತಿನ್‌ ಪ್ರಭು ಅವರಿಗೆ ಸೂಚಿಸಿದರು.
ಮನೆ ಸ್ಥಳಾಂತರ, ಪರಿಹಾರ ಕೇಂದ್ರ: ಸೂಚನೆ
ಸಂಪಾಜೆ, ಕಲ್ಮಕಾರಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ಸಮಸ್ಯೆ ಉಂಟಾಗಿತ್ತು. ಅಲ್ಲಿ ಈ ಬಾರಿಯು ಸಮ ಸ್ಯೆಗೆ ಈಡಾಗುವ ಮೊದಲು ಅಲ್ಲಿನ ನಿವಾಸಿಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಗಂಜಿ ಕೇಂದ್ರ ಸ್ಥಾಪಿಸಲು ಸೂಕ್ತ ಸ್ಥಳ ಗುರುತಿಸುವಂತೆ ತಹಶೀಲ್ದಾರ್‌ ಮತ್ತು ಇಒ ಅವರು ನಿರ್ದೇಶನ ನೀಡಿದರು.

ಆರೋಗ್ಯಕ್ಕಾಗಿ ಕ್ಯಾಂಪ್‌
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹಬ್ಬುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರೋಗ್ಯ ಇಲಾಖೆ ಪೂರ್ವಭಾವಿಯಾಗಿ ಸೊಳ್ಳೆ ನಿಯಂತ್ರಣ, ಅಲ್ಲಲ್ಲಿ ಕ್ಯಾಂಪ್‌ ನಡೆಸಿ ಆರೋಗ್ಯ ಜಾಗೃತಿ ಮೂಡಿಸುವಂತೆ ತಾಲೂಕು ಆರೋಗ್ಯಧಿಕಾರಿ ಡಾ| ಸುಬ್ರಹ್ಮಣ್ಯ ಅವರಿಗೆ ತಹಶೀಲ್ದಾರ್‌ ಸೂಚನೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next