ಮಾಲ್ಡಾ, ಪಶ್ಚಿಮ ಬಂಗಾಲ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾಲ್ಡಾ ರಾಲಿಯಲ್ಲಿಂದು ನೆರೆಯ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಪಕ್ಷದ ಕಾರ್ಯಕರ್ತರು ತಮಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯಸನ ಮಾಡಲಾಗಿಲ್ಲದ ಕಾರಣಕ್ಕೆ ಕುಪಿತರಾಗಿ ವೇದಿಕೆ ಮುಂದಿದ್ದ ವಿಐಪಿ ಆಸನಗಳ ಸಾಲಿನ ಮೇಲೆ ಕುರ್ಚಿಗಳನ್ನು ಎಸೆದು ಧಾಂಧಲೆಗೈದರು.
ಪೊಲೀಸರು ಮತ್ತು ಪಕ್ಷದ ಹಿರಿಯ ಪದಾಧಿಕಾರಿಗಳು ಕೋಪೋದ್ರಿಕ್ತ ಕಾರ್ಯಕರ್ತ ಸಿಟ್ಟನ್ನು ಶಮನಗೊಳಿಸಿ ಶಾಂತಿ ಕಾಪಿಡುವಂತೆ ಮಾಡಿದ ಯತ್ನಗಳೆಲ್ಲ ವಿಫಲವಾಗಿ ರಾಲಿ ತಾಣದಲ್ಲಿ ಕೆಲ ಹೊತ್ತು ಅರಾಜಕತೆ ತಾಂಡವವಾಡಿತು. ಕೋಪೋದ್ರಿಕ್ತ ಕಾರ್ಯಕರ್ತರು ಪಕ್ಷದ ರಾಜ್ಯ ನಾಯಕರ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರು ಮತ್ತು ಪಕ್ಷದ ನೇತಾರರ ಸತತ ಪ್ರಯತ್ನದ ಫಲವಾಗಿ ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಈ ಪ್ರಹಸನ ನಡೆದಾಗ ರಾಹುಲ್ ಗಾಂಧಿ ಇನ್ನೂ ರಾಲಿ ತಾಣಕ್ಕೆ ಬಂದಿರಲಿಲ್ಲ. ಹಾಗಾಗಿ
ಅವರಿಗೆ ದೊಡ್ಡ ಮಟ್ಟದಲ್ಲಿ ಇರಿಸುಮುರಿಸು ಉಂಟಾಗುವುದು ತಪ್ಪಿತು.