Advertisement

Unreal”: ಸಿಕ್ಸರ್‌ ಸುರಿಮಳೆಗೈದ ರಿಂಕು ಸಿಂಗ್ ರನ್ನು ಶ್ಲಾಘಿಸಿದ ಸುಹಾನಾ ಖಾನ್

10:18 PM Apr 09, 2023 | Team Udayavani |

ಮುಂಬಯಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2023 ರ ಕೋಲ್ಕತಾ ನೈಟ್ ರೈಡರ್ಸ್ ರೋಚಕ ಐಪಿಎಲ್ ಪಂದ್ಯದ ಅಂತಿಮ ಓವರ್‌ನಲ್ಲಿ ಕ್ರಿಕೆಟರ್ ರಿಂಕು ಸಿಂಗ್ ಅವರ ಅದ್ಭುತ 5 ಸಿಕ್ಸರ್‌ಗಳನ್ನು ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಶ್ಲಾಘಿಸಿದ್ದಾರೆ.

Advertisement

ಇನ್‌ಸ್ಟಾಗ್ರಾಮ್‌ ನಲ್ಲಿ, ಸುಹಾನಾ ಚಿತ್ರವನ್ನು ಹಂಚಿಕೊಂಡು ಇದು “ಅವಾಸ್ತವ” ಎಂದು ಬರೆದಿದ್ದಾರೆ.ಕೆಕೆಆರ್ ತಂಡದ ಮಾಲಕರಲ್ಲಿ ಶಾರುಖ್ ಖಾನ್ ಒಬ್ಬರು.

ರೋಚಕ ಪಂದ್ಯದಲ್ಲಿ ರಿಂಕು ಸಿಂಗ್ ಕೆಕೆಆರ್ ಗೆ ಜಯ ತಂದಿಟ್ಟರು. 21 ಎಸೆತಗಳಲ್ಲಿ 48 ರನ್ ಗಳಿಸಿದ ರಿಂಕು ಸಿಂಗ್ 1 ಬೌಂಡರಿ ಮತ್ತು 6 ಅತ್ಯಮೋಘ ಸಿಕ್ಸರ್ ಸಿಡಿಸಿದರು. ಯಶ್ ದಯಾಳ್ ಅವರು ಎಸೆದ ಕೊನೆಯ ಓವರ್ ನಲ್ಲಿ ಕೆಕೆಆರ್ ಗೆ ಗೆಲ್ಲಲು 29 ರನ್ ಗಳ ಅಗತ್ಯವಿತ್ತು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರಿಂಕು 5 ಸಿಕ್ಸರ್ ಸಿಡಿಸಿ ಗೆಲುವಿಗೆ ಪ್ರಮುಖ ಕಾರಣವಾದರು.

Advertisement

Udayavani is now on Telegram. Click here to join our channel and stay updated with the latest news.

Next